Advertisement

ಅನ್ನದಾತರ ಬೆಳೆಗಳಿಗೆ ಲಾಭದಾಯಕ ದರ ನಿಗದಿಪಡಿಸಿ

04:03 PM Sep 25, 2022 | Team Udayavani |

ಮುಳಬಾಗಿಲು: ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗದ ಪರಿಣಾಮ ಕೃಷಿ ಬಗ್ಗೆ ಕೃಷಿಕರು ಅಸಡ್ಡೆ ತೋರುವುದು ದೇಶದ ಹಿತ ದೃಷ್ಟಿಯಿಂದ ಒಳ್ಳೆಯ ಪ್ರವೃತ್ತಿಯಲ್ಲವೆಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಉಗಿನಿ ಆರ್‌.ನಾರಾಯಣಗೌಡ ತಿಳಿಸಿದರು.

Advertisement

ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದ ಭಾರತೀಯ ಕಿಸಾನ್‌ ಸಂಘದ ಗ್ರಾಮ ಸಮಿತಿ ಸಭೆಯಲ್ಲಿ ಮಾತನಾಡಿದರು.

ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗದ ಪರಿಣಾಮ ಕೃಷಿ ಕ್ಷೇತ್ರದ ಬಗ್ಗೆ ಕೃಷಿಕರ ಮಕ್ಕಳು ಅಸಡ್ಡೆ ತೋರುವುದು ದೇಶದ ಹಿತ ದೃಷ್ಟಿಯಿಂದ ಒಳ್ಳೆಯ ಪ್ರವೃತ್ತಿಯಲ್ಲ. ಆಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಕೃಷಿಕರ ಬಗ್ಗೆ ತಾತ್ಸಾರ ಮನೋಭಾವ ತಾಳಿದ ಪರಿಣಾಮ ಇಂದು ಕೃಷಿ ಮಾಡುವುದರಿಂದ ನಷ್ಟಕ್ಕೆ ರೈತ ಒಳಗಾಗಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇದಕ್ಕೆ ಪರಿಹಾರವನ್ನು ಕೃಷಿಕರು ಒಂದೆಡೆ ಸೇರಿ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು ಎಂದರು.

ನಂಗಲಿ ಗ್ರಾಮ ಸಮಿತಿ ಮುಖ್ಯಸ್ಥ ಎಂ.ಶ್ರೀನಿವಾಸ ಮಾತನಾಡಿ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ಕೃಷಿ ಸಾಲಗಳನ್ನು ಸುಲಭವಾಗಿ ನೀಡಬೇಕು ಕೃಷಿ ಕ್ಷೇತ್ರ ಅಭಿವೃದಿಟಛಿಗೆ ಆದ್ಯತೆ ನೀಡಬೇಕು. ವಿಎಸ್‌ಎಸ್‌ಎನ್‌ಗಳು ರಾಜಕೀಯ ಪ್ರೇರಿತವಾಗಿರಬಾರದು, ರೈತರ ಹಿತ ಕಾಯುವಂತೆ ಕಾರ್ಯನಿರ್ವಹಿಸಬೇಕು. ಆಧಾರ ರಹಿತವಾಗಿ ಶೂನ್ಯ ಬಡ್ಡಿಯಲ್ಲಿ ಅರ್ಹ ರೈತರಿಗೆ ಸಾಲ ನೀಡಬೇಕು, ಹೈನುಗಾರಿಕೆಗೆ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ನೀಡುವ ವ್ಯವಸ್ಥೆ ಸಹಕಾರಿ ಬ್ಯಾಂಕುಗಳಲ್ಲಿ ಜಾರಿಗೆ ತರಬೇಕು ಈ ನಿಟ್ಟಿನಲ್ಲಿ ಕಿಸಾನ್‌ ಸಂಘ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ವಕೀಲ ವೆಂಕಟಕೃಷ್ಣಾರೆಡ್ಡಿ ಮಾತನಾಡಿ, ಹಾಲಿಗೆ 50 ರೂ. ನಿಗದಿ ಮಾಡಿ ಲಾಭದಾಯಕ ಬೆಲೆಯನ್ನು ರೈತರಿಗೆ ನೀಡಬೇಕು ಹಾಲು ಒಕ್ಕೂಟ ರೈತರ ಪರವಾಗಿ ಕಾರ್ಯನಿರ್ವಹಿಸಬೇಕು. ನಷ್ಟವನ್ನು ರೈತರ ಮೇಲೆ ಹಾಕುವ ಬದಲು ಒಕ್ಕೂಟಗಳಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸರ್ಕಾರದಿಂದ ಬೆಂಬಲ ಬೆಲೆ ಕೇಳದೆ ಲಾಭದಾಯಕ ಬೆಲೆಯನ್ನೇನೀಡಬೇಕೆಂದು ಹಕ್ಕೊತ್ತಾಯ ಮಂಡಿಸಿದಾಗಮಾತ್ರ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಾರೆ ಎಂದರು.

Advertisement

ಬಿ.ಕೆ.ಎಸ್‌. ತಾಲೂಕು ಕಾರ್ಯದರ್ಶಿ ವಕೀಲ ವಿ.ಜಯಪ್ಪ, ಸಾವಯುವ ಕೃಷಿಕ ತಿಪ್ಪದೊಡ್ಡಿ ರಮೇಶ್‌ರೆಡ್ಡಿ, ಹಿರಿಯ ಮುಖಂಡರಾದ ಅರಹಳ್ಳಿಶ್ರೀನಿವಾಸಗೌಡ, ಕೃಷ್ಣಾರೆಡ್ಡಿ ಸಾವಯವ ಕೃಷಿ,ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಕಾರ್ಯದರ್ಶಿ ನಾಗೇಶ್‌, ವಕೀಲರಾದರಮಣಾರೆಡ್ಡಿ, ಮುನಿರತ್ನ, ಮುಖಂಡರಾದನಂಗಲಿ ಪೆರುಮಾಳ್‌, ದೊಡ್ಡತ್ತಿಹಳ್ಳಿನಾರಾಯಣಸ್ವಾಮಿ ಸೇರಿದಂತೆ ನಂಗಲಿ ಗ್ರಾಮ ಸಮಿತಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next