Advertisement

ಅರಣ್ಯ ಸಿಬ್ಬಂದಿ- ರೈತರ ಜಟಾಪಟಿ

05:02 PM Jul 02, 2022 | Team Udayavani |

ನಾಗಮಂಗಲ: ತಾಲೂಕಿನ ಹಂದೇನಹಳ್ಳಿ ಗ್ರಾಮದ ಸರ್ವೇ ನಂ.45 ರಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಗೋಮಾಳ ಮತ್ತು ಅರಣ್ಯ ಇಲಾಖೆ ಜಾಗದ ಕುರಿತು ವ್ಯಾಜ್ಯ ನಡೆಯುತ್ತಿದ್ದು, ಶುಕ್ರವಾರ ಅರಣ್ಯ ಅಧಿಕಾರಿಗಳು ಸಸಿ ನೆಡಲು ಮುಂದಾದ್ದರಿಂದ ಗ್ರಾಮಸ್ಥರು ತಡೆಯೊಡ್ಡಿದರು.

Advertisement

ರೈತರು ಸಹಕರಿಸಬೇಕು: ಅಧಿಕಾರಿಗಳು ಸಸಿ ನೆಡಲು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ದ ಗ್ರಾಮಸ್ಥರು, ಸಸಿ ನೆಡದಂತೆ ತಡೆದರು. ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ತಹ ಶೀಲ್ದಾರ್‌, ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ನಡೆಸಿ ಅರಣ್ಯ ಇಲಾಖೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ನಮ್ಮದು ತಕರಾರು ಇಲ್ಲ. ಆದರೆ, ಗೋಮಾಳದ ಜಮೀನನ್ನು ಗುರ್ತಿಸಿ 53ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಅರಣ್ಯ ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು.

ಆದರೆ, ಅರಣ್ಯ ಅಧಿಕಾರಿಗಳು ಸರ್ವೆ ನಂ.45ರಲ್ಲಿ 203 ಎಕರೆ ಮೀಸಲು ಅರಣ್ಯ, 336ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ ರೈತರು ಸಹಕರಿಸಬೇಕು ಎಂದು ದಾಖಲೆ ತೋರಿಸಿ ದರೂ ರೈತರು ಕೇಳಲಿಲ್ಲ.

ರೈತರು ಮನವಿ ಮಾಡಿದ್ದಾರೆ: ಸುದ್ದಿಗಾರ ರೊಂದಿಗೆ ಮಾತ ನಾಡಿದ ಎಸಿಎಫ್ ಶಂಕರೇ ಗೌಡ, ಸರ್ವೇ ಯಲ್ಲಿ ಇರುವ 2 ನಕ್ಷೆಯಲ್ಲೂ ಸರ್ವೇ ನಂಬರ್‌ 45ರಲ್ಲಿ ಮೀಸಲು ಅರಣ್ಯ ಹೊರತು ಪಡಿಸಿ ನಮ್ಮ ಇಲಾಖೆ ಅನುಭವದಲ್ಲಿರುವುದು ಕೇವಲ 111 ಎಕರೆ ಮಾತ್ರ. ಆದರೆ, ಇಲಾಖೆಗೆ ಹಸ್ತಾಂತರವಾಗಿರುವುದು 336 ಎಕರೆ. ಉಳಿದಂತೆ 220 ಎಕರೆ ಭೂಮಿ ಕಡಿಮೆಯಿದೆ. ಈಗ ಕೆಲಸ ಮಾಡು ತ್ತಿರುವ ಸ್ಥಳದಲ್ಲಿ 1979 ರಲ್ಲಿ ನೀಲಗಿರಿ ಮರ ನೆಡ ಲಾಗಿತ್ತು. ನಂತರ ಇಲಾಖೆ ಮಾರ್ಗಸೂಚಿಯಂತೆ ಕಡಿದು ಸ್ಥಳೀಯ ಜಾತಿ ಸಸ್ಯ ನೆಡಲು ಕ್ರಮ ವಹಿಸಲಾಗುತ್ತಿದೆ. ಆದರೆ ಜನ ಇದೇ ಸರ್ವೇ ನಂ.ನಲ್ಲಿ ಅರ್ಜಿ ಸಲ್ಲಿಸಿದ್ದು ನಮ್ಮ ಜಾಗ ಎಂದು ಹೇಳುತ್ತಿದ್ದಾರೆ. ಜತೆಗೆ ಕಾಲಾ ವಕಾಶ ಕೇಳುವ ಮೂಲಕ ಕಂದಾಯ ಅಧಿಕಾರಿಗಳ ಮುಂದಾಳತ್ವದಲ್ಲಿ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ದಸಂಸ ಮುಖಂಡ ನಾಗರಾಜ್‌ ಮಾತ ನಾಡಿ, ಕಂದಾಯ ಅಧಿಕಾರಿಗಳು ಬಂದು ಕ್ರಮವಹಿಸುವ ವರೆಗೂ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ನಂತರ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ವಾಪಸ್‌ ಆದರು.

Advertisement

ಉಪವಲಯ ಅರಣ್ಯಾಧಿಕಾರಿ ಪ್ರಕಾಶ್‌, ಆರ್‌ಎಫ್ಒಗಳಾದ ಸತೀಶ್‌, ಪುಟ್ಟಸ್ವಾಮಿ, ಗಂಗಾಧರ್‌, ಡಿಆರ್‌ಎಫ್ಒ ಮಂಜು, ಅರಣ್ಯ ರಕ್ಷಕರಾದ ದಿಲೀಪ್‌, ಅರಣ್ಯ ಸಿಬ್ಬಂದಿ, ಗ್ರಾಮಸ್ಥರಾದ ಪ್ರಕಾಶ್‌, ರಾಮಚಂದ್ರು, ಶಶಾಂಕ್‌, ಯೋಗೇಶ್‌, ಬಸವಯ್ಯ, ಕುಮಾರ್‌, ರವಿಕುಮಾರ್‌, ಚಂದ್ರಯ್ಯ, ಜೈರಾಮು, ಬಸವಯ್ಯ, ಮರಿಸ್ವಾಮಿ, ಕುಮಾರ್‌, ನಿಂಗಯ್ಯ, ಗಂಗಾಧರ್‌, ರಾಜಯ್ಯ ಮತ್ತಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next