Advertisement

ದೇಶಾದ್ಯಂತ ಬಿಜೆಪಿ ಸರಕಾರ ಭಯದ ವಾತಾವರಣ ಸೃಷ್ಟಿಸಿದೆ:ಶಿವಾನಂದ ಕಡತೋಕ

04:23 PM Oct 04, 2021 | Team Udayavani |

ಶಿರಸಿ: ಉತ್ತರ ಪ್ರದೇಶದಲ್ಲಿ ವಾಹನ ಚಲಾಯಿಸಿ ರೈತರ ಸಾವಿಗೆ ಕಾರಣವಾದ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಪ್ರಮುಖ ಎಸ್.ಕೆ.ಭಾಗವತ ಹೇಳಿದರು.

Advertisement

ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಪ್ರಿಯಾಂಕಾ ಗಾಂಧಿ ಅವರನ್ನು ಸಾಂತ್ವನ ಹೇಳಲೂ ಕೊಡದೇ ಬಂಧಿಸಿದ್ದು ಸರಿಯಲ್ಲ. ಉತ್ತರ ಪ್ರದೇಶ ಸರಕಾರ ಪ್ರತಿಭಟನೆ ಮಾಡುವ ಅವಕಾಶವೂ ಇಲ್ಲ‌ವಾ. ಪ್ರಿಯಾಂಕಾ ಅವರ ಮೇಲೆ ಯಾವುದೇ ಕೇಸ್ ಹಾಕದೇ ಬಿಡುಗಡೆ ಮಾಡಬೇಕು. ಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ದ ಕ್ರಮ ಆಗಬೇಕು. ರಾಷ್ಟ್ರ ನಾಯಕರನ್ನು ಹೀಗೆ‌ ನಡೆಸಿಕೊಳ್ಳುವುದು ಸರಿಯಲ್ಲ ಎಂದರು.

ಪಕ್ಷದ ಸೂಚನೆ ‌ಮೇರೆಗೆ ಮುಂದೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಬೀದಿಗಳಿದು ಹೋರಾಟ ಮಾಡಲೂ ಸಿದ್ದ ಎಂದರು.

ರೈತ ಮೋರ್ಚಾ ಅಧ್ಯಕ್ಷ ಶಿವಾನಂದ ಕಡತೋಕ, ದೇಶಾದ್ಯಂತ ಬಿಜೆಪಿ ಸರಕಾರ ಭಯದ ವಾತಾವರಣ ಸೃಷ್ಟಿಸಿದೆ. ರೈತ ಪರ ಚಳುವಳಿ ನಿರಂತರ ಹತ್ತಿಕ್ಕುತ್ತಿದ್ದಾರೆ. ರೈತರ‌ ಮಹಸೂಲು ಖಾಸಗೀಕರಣ‌ ಮಾಡಲಾಗುತ್ತಿದೆ ಎಂದೂ ಹೇಳಿದರು.

ಈ ವೇಳೆ ದೀಪಕ ದೊಡ್ಡೂರು, ಶ್ರೀಲತಾ ಕಾಳೇರಮನೆ, ಡಿ‌‌.ಎನ್.ಗಾಂವಕರ್, ಕೃಷ್ಣ ಹಿರೇಹಳ್ಳಿ, ಜಗದೀಶ ಗೌಡ, ಶ್ರೀನಿವಾಸ ನಾಯಕ, ಬಸವರಾಜ್ ದೊಡ್ಮನಿ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next