Advertisement

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

11:03 AM Jan 07, 2022 | Team Udayavani |

ಕೊರಟಗೆರೆ: ರೈತನೊಬ್ಬ ವ್ಯವಸಾಯದ ಜೊತೆಗೆ ಬಾಡಿಗೆ ಯಂತ್ರದಲ್ಲಿ ಮೂಲಕ ಮುಸುಕಿನಜೋಳ ಬಿಡಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲೂಕಿನ ಅರಸಾಪುರ ಗ್ರಾಮದ ಲೇಟ್ ಬ್ರಹ್ಮ ದೇವರ ಮಗ   ಆನಂದಬಾಬು (49) ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ರೈತ.

ಮನೆಗೆ ಬಾರದೆ ಹೊಳವನಹಳ್ಳಿ ಹೋಬಳಿ ಬೈರೇನಹಳ್ಳಿ ಗ್ರಾಮದ ಹನುಮಂತರಾಯಪ್ಪ ಎಂಬವರ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈತನ ಕಿವಿಯಿಂದ ರಕ್ತ ಸ್ರಾವವಾಗಿದ್ದು, ಈತನ ಪತ್ನಿ ನಾಗಲತಾ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ ಎಂಬುದರ ಬಗ್ಗೆ ಪೊಲೀಸರ ತನಿಖೆ ನಂತರ ಸತ್ಯ ಹೊರಬೀಳಲಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‌ಐ ನಾಗರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next