Advertisement

ಖಾಲಿ ಜಾಗದಲ್ಲಿ ಬಂಗಾರದಂಥ ಬೆಳೆ ಬೆಳೆದ ಮಲೆನಾಡ ರೈತ : ಕೃಷಿಯಲ್ಲಿ ಯಶಸ್ಸು ಕಂಡ ರೈತನ ಕಥೆ

07:27 PM Jan 04, 2022 | Team Udayavani |

ಮೂಡಿಗೆರೆ : ಅವರು ಆ ಖಾಲಿ ಜಾಗವನ್ನು ತೆಗೆದುಕೊಂಡು ತೋಟ ಮಾಡುತ್ತೇನೆ ಎಂದು ಹೊರಟಾಗ ನಕ್ಕವರೇ ಹೆಚ್ಚು. ಹುಚ್ಚುಮಳೆ ಸುರಿವ ಈ ಊರಿನಲ್ಲಿ ಅಡಿಕೆ ಬೆಳೆಯಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದಾಗ ಎದೆಗುಂದದೇ ಕೃಷಿ ಮಾಡಲು ಹೊರಟ ಮಾದರಿ ರೈತನ ಯಶಸ್ಸಿನ ಕತೆ ಇದು.

Advertisement

ವಾರ್ಷಿಕ 250 ರಿಂದ 300 ಇಂಚು ಮಳೆ ಪ್ರದೇಶದಲ್ಲೂ ಸಮೃದ್ಧ ಅಡಿಕೆ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ರೈತ ಅಸ್ಗರ್ ಅಹಮದ್ ಅಡಿಕೆ‌ ಕೃಷಿಯಲ್ಲಿ ಯಶಸ್ಸು ಸಾಧಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಇವರಿಗೆ ಸುಮಾರು 60 ಎಕರೆ ಜಮೀನು ಇದೆ. ಅದರಲ್ಲಿ 12 ಎಕೆರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಖಾಲಿ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದ ಅಸ್ಗರ್ ಅವರು ಮಳೆ ತವರಲ್ಲೂ ದಾಖಲೆ ಬೆಳೆ ಬೆಳೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಒಂದೊಂದು ಅಡಿಕೆ ಮರದಲ್ಲಿ 30 ರಿಂದ 40 ಕೆ.ಜಿಯವರೆಗೂ ಅಡಿಕೆ ಬೆಳೆದಿದೆ. ವಾರ್ಷಿಕ 250 ರಿಂದ 300 ಇಂಚು ಮಳೆ ಬೀಳುವ ಪ್ರದೇಶದಲ್ಲಿ ಭೂಮಿ ಶೀತವಾಗುವುದಿಲ್ಲವೇ ಎಂಬ ಸಂಶಯ ಮೂಡಬಹುದು. ಖಂಡಿತಾ ಭೂಮಿ ಶೀತವಾಗುತ್ತೆ. ಇವರ ಭೂಮಿಯೂ ಶೀತವಾಗಿದೆ. ಆದರೆ, ಇವರು ತಮ್ಮ ತೋಟದಲ್ಲಿ ಒಂದೇ ಮಾದರಿಯ ಅಡಿಕೆ ಬೆಳೆದಿಲ್ಲ. ಅಡಿಕೆ ಮರದಲ್ಲೂ ನಾನಾ ತಳಿಗಳಿವೆ. ಹಾಗಾಗಿ, ಅಸ್ಗರ್ ಅವರು, ಮಲೆನಾಡಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಾಳದ ತೀರ್ಥಹಳ್ಳಿ, ಕೊಪ್ಪ, ಕಳಸ ಭಾಗದಲ್ಲಿ ಬೆಳೆಯುವಂತಹಾ ಎಲ್ಲಾ ಮಾದರಿಯ ಅಡಿಕೆಯನ್ನೂ ಬೆಳೆದಿದ್ದಾರೆ. ಹಾಗಾಗಿ, ದಾಖಲೆ ಮಳೆ, ಶೀತದ ನಡುವೆಯು ಮರಗಳು ಸಮೃದ್ಧ ಬೆಳೆ ನೀಡಿದೆ. ಈ ಮೂಲಕ ರೈತ ಸಮುದಾಯ ಮಿಶ್ರ ಬೆಳೆ ಬೆಳೆಯಬೇಕೆಂದು ಸಾಬೀತು ಮಾಡಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ಮಲೆನಾಡಲ್ಲಿ ಸುರಿಯುತ್ತಿರುವ ಮಳೆ ಕಂಡು ಮಲೆನಾಡಿಗರೇ ಭವಿಷ್ಯದ ಬಗ್ಗೆ ಆತಂತ ತೋರಿದ್ದರು. ಊರೂರೇ ಕೊಚ್ಚಿ ಹೋಗಿತ್ತು. ಬೆಟ್ಟಗುಡ್ಡಗಳು ಧರೆಗುರುಳಿದ್ದವು. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗಿತ್ತು. ಕೆಲ ಭಾಗದ ಅಡಿಕೆ, ಕಾಫಿ, ಮೆಣಸು ಹೇಳ ಹೆಸರಿಲ್ಲದಂತಾಗಿತ್ತು. ಆದರೆ, ಅಸ್ಗರ್ ಅವರ ತೋಟದಲ್ಲೂ ಅಡಿಕೆ ನಾಶವಾಗಿತ್ತು. ಆದರೆ, ನಾಶದ ಪ್ರಮಾಣ ತೀರಾ ಕಡಿಮೆ. 2021ರಲ್ಲೂ ಕೂಡ ಮಲೆನಾಡಲ್ಲಿ ಆಗಾಗ್ಗೆ 10-15 ದಿನ ಬಿಡುವು ನೀಡುತ್ತಿದ್ದ ವರುಣದೇವ ವರ್ಷಪೂರ್ತಿ ಸುರಿದಿದ್ದಾನೆ. 2021 ಮಲೆನಾಡಿಗರ ಪಾಲಿಗೆ ಮಳೆವರ್ಷವೇ ಆಗಿತ್ತು. ಆದರೆ, ಈ ಹವಾಮಾನ ವೈಪರಿತ್ಯದ ಮಧ್ಯೆಯೂ ಅಸ್ಗರ್ ಈ ವರ್ಷವೂ ಸಮೃದ್ಧ ಬೆಳೆ ಬೆಳೆದಿದ್ದಾರೆ. ಅದಕ್ಕೆ ಕಾರಣ ತೋಟದ ನಿರ್ವಹಣೆಯೂ ಇರಬಹುದು. ಇವರು ತಮ್ಮ ತೋಟದಲ್ಲಿ ಕಳೆನಾಶಕ ಬಳಸುವುದಿಲ್ಲ. ಬಳಸಬಾರದು ಎಂದು ರೈತಕುಲಕ್ಕೆ ಮನವಿ ಮಾಡಿದ್ದಾರೆ. ಬಹುತೇಕ ರೈತರ ವರ್ಷಕ್ಕೆ ಎರಡ್ಮೂರು ಬಾರಿ ತೋಟದಲ್ಲಿ ಕಳೆ ನಾಶಕ ಹೊಡೆಸುತ್ತಾರೆ. ಇದು ತೋಟದ ಇಳುವರಿ ಮೇಲೆ ಪರಿಣಾಮ ಬೀರುತ್ತೆ. ತೋಟದಲ್ಲಿ ಕಳೆನಾಶ ಬಳಸಬಾರದು ಎಂದು ಸಲಹೆ ನೀಡಿದ್ದಾರೆ. ಹವಾಮಾನ ವೈಪರಿತ್ಯದ ಮಧ್ಯೆಯೂ ಭೂಮಿ ತಾಯಿ ಇವರ ಕೈಹಿಡಿದಿದ್ದಾಳೆ. ಆದರೆ, ಸೂರ್ಯದೇವ ಇವರ ಕೈಬಿಟ್ಟಿದ್ದನು. ತಿಂಗಳುಗಟ್ಟಲೇ ಸೂರ್ಯನ ಬೆಳೆಕೆ ಇಲ್ಲದೆ ಅಡಿಕೆಯನ್ನ ಒಣಗಿಸಲು ಇವರೂ ಕೂಡ ಸ್ವಲ್ಪ ಸಮಸ್ಯೆ ಎದುರಿಸಿದ್ದರು. ಜೊತೆಗೆ ಮಳೆಯಿಂದ ಕಾರ್ಮಿಕರ ಸಮಸ್ಯೆಯ ಕಷ್ಟವನ್ನೂ ಅನುಭವಿಸಿದ್ದರು. ಆದರೆ, ಕೃಷಿಯಿಂದ ನಷ್ಟವಾಗಿಲ್ಲ ಅಂತಾರೆ ಅಸ್ಗರ್. ಹಾಗಾಗಿ, ರೈತರು ಹಾಗೂ ಬೆಳೆಗಾರರು ಮಿಶ್ರ ಬೆಳೆ ಬೆಳೆಯಬೇಕೆಂದು ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ : ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್

ಮೂಡಿಗೆರೆ ತಾಲೂಕು ವಾರ್ಷಿಕ ದಾಖಲೆ ಮಳೆ ಬೀಳೋ ಪ್ರದೇಶ. ಇಲ್ಲಿ ವರ್ಷಕ್ಕೆ 400 ಇಂಚು ಮಳೆ ಬೀಳುವ ಪ್ರದೇಶವೂ ಇದೆ. ಬೆಳೆ ಹಾಳಾದದ್ದಕ್ಕೆ ಲೆಕ್ಕವೇ ಇಲ್ಲ. ಆದರೆ, ಮಿಶ್ರ ಬೆಳೆ, ತೋಟದ ನಿರ್ವಹಣೆ, ಕಾಲಕಾಲಕ್ಕೆ ಮಾಡಬೇಕಾದ ಆರೈಕೆ ಜೊತೆ, ಭೂಮಿ-ಮಳೆ-ಬಿಸಿಲು ಎಲ್ಲಾ ವಾತಾವರಣಕ್ಕೂ ಒಗ್ಗುವ ಮರಗಳಿಂದ ಅಸ್ಗರ್ ಮಾದರಿ ರೈತನಾಗಿ ಪ್ರಕೃತಿಗೂ ಸೆಡ್ಡು ಹೊಡೆದು ಬೆಳೆ ಬೆಳೆದಿದ್ದಾರೆ ಅಂದ್ರು ತಪ್ಪಿಲ್ಲ. ಎಲ್ಲಾ ರೈತರ ಬದುಕು ಹೀಗೆ ಇರಲಿ ಅನ್ನೋದು ನಮ್ಮಗಳ ಆಶಯ. ಎಲ್ಲಾ ರೈತರು ಕೂಡ ಅದೇ ನಿಟ್ಟಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕಿದೆ. ಕೃಷಿಕ ಅಸ್ಘರ್ ಅವರ ಕೃಷಿಯ ಬಗ್ಗೆ ಮಾಹಿತಿ ಬೇಕಾದವರಿಗೆ ತಾನು ನೀಡಲು ಸಿದ್ದನಿದ್ದೇನೆ‌. ಮಾಹಿತಿ‌ ಬೇಕಾದವರು ನನ್ನನ್ನು ಸಂಪರ್ಕಿಸಬಹುದು. ನನ್ನ ಕೃಷಿ ಅನುಭವವನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ ಅಸ್ಘರ್ ಅವರು‌‌.

Advertisement

Udayavani is now on Telegram. Click here to join our channel and stay updated with the latest news.

Next