Advertisement

Bailhongal: ಕಷ್ಟ ಕೇಳದ ಬರ ಅಧ್ಯಯನ ತಂಡ; ಪೊಲೀಸರೆದುರು ಆತ್ಯಹತ್ಯೆಗೆ ಯತ್ನಿಸಿದ ರೈತ

11:25 AM Oct 06, 2023 | Team Udayavani |

ಬೆಳಗಾವಿ: ಬೆಳೆ ಹಾನಿಯಾಗಿದ್ದರೂ ತಮ್ಮ ಕಷ್ಟವನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಕೇಳಲಿಲ್ಲ ಎಂದು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲೂಕಿನ ಕಲಕೊಪ್ಪ ಗ್ರಾಮದ ಬಳಿ ನಡೆದಿದೆ.

Advertisement

ಅಪ್ಪಾಸಾಹೇಬ ಯಕ್ಕುಂಡಿ ಎಂಬ ರೈತರೇ ಆತ್ಮಹತ್ಯೆಗೆ ಯತ್ನಿಸಿದವರು. ಎರಡು ಕ್ರಿಮಿನಾಶಕ ಬಾಟಲಿ ತಂದಿದ್ದ ರೈತ ಅಪ್ಪಾಸಾಹೆಬ ಯಕ್ಕುಂಡಿ ಅವರು ಅಧಿಕಾರಿಗಳು ತನ್ನ ಸಮಸ್ಯೆ ಕೇಳಲಿಲ್ಲ ಎಂದು ಕೋಪಗೊಂಡು ಕ್ರಿಮಿನಾಶಕ ಸೇವಿಸಲು ಮುಂದಾದರು.

ಆಗ ಇದನ್ನು ನೋಡಿದ ತಕ್ಷಣವೇ ಪೊಲೀಸರು ಬಾಟಲಿ ಕಸಿದುಕೊಂಡರು. ಅಷ್ಟೊತ್ತಿಗೆ ಬರ ಅಧ್ಯಯನ ತಂಡದ ಅಧಿಕಾರಿಗಳು ಅಲ್ಲಿಂದ ತೆರಳಿದ್ದರು.

ಇದನ್ನೂ ಓದಿ:Repo Rate: ಗೃಹ, ವಾಹನ ಸಾಲದ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ: ರೆಪೋ ದರ ಯಥಾಸ್ಥಿತಿ-RBI

‘ನಾನು 40 ಎಕರೆ ಭೂಮಿಯಲ್ಲಿ ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇ‌ನೆ. ಮಳೆ‌ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ, ಯಾರೂ ರೈತರ ಕಷ್ಟ ಕೇಳುತ್ತಿಲ್ಲ. ಸರ್ಕಾರ ಯಾವ ಗ್ಯಾರಂಟಿ ನೀಡದ್ದರಿಂದ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ರೈತ ಅಪ್ಪಾಸಾಹೇಬ ಯಕ್ಕುಂಡಿ ತಮ್ಮ ನೋವು ತೋಡಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next