Advertisement

Sirsi: ಎಲೆ ಚುಕ್ಕಿ ರೋಗ‌ ನಿಯಂತ್ರಣ ಔಷಧ‌ ಸಂಶೋಧನೆಗೆ ನಿರಂತರ ಅನುದಾನ ನೀಡಿ: ಕಾಗೇರಿ

12:16 PM Oct 21, 2023 | Team Udayavani |

ಶಿರಸಿ: ಎಲೆ‌ ಚುಕ್ಕಿ ರೋಗ, ಹಳದಿ ರೋಗ ಹರಡುತ್ತಿದೆ. ಸರಕಾರ ಇದರ ನಿಯಂತ್ರಣದ ಸಂಶೋಧನೆಗೆ‌ ನಿರಂತರ ಅನುದಾನ ನೀಡಬೇಕು. ವಿಜ್ಞಾನಿಗಳು ಪರಿಣಾಮಕಾರಿ ಔಷಧ ಕಂಡುಕೊಳ್ಳಬೇಕು ಎಂದು‌ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

Advertisement

ಅವರು ಶನಿವಾರ ಸುದ್ದಿಗೋಷ್ಟಿ ನಡೆಸಿ, ಬೆಳೆ‌ ಸಂರಕ್ಷಣೆಗೆ ಇರುವ ಅಡಿಕೆ ಸಂಶೋಧನಾ ಕೇಂದ್ರಗಳಿಗೆ ನಿರಂತರ ಹಣದ ಪೂರೈಕೆ ಮಾಡಬೇಕು. ಅಡಿಕೆ ಸಂಶೋಧನೆಗಳಿಗೆ ಕ್ಯಾಂಮ್ಕೋ, ಟಿಎಸ್ ಎಸ್, ಮ್ಯಾಮ್ಕೋಸ್ ನೆರವು ನೀಡಬೇಕು ಎಂದ ಅವರು, ಅಡಿಕೆ ಬೆಳೆಗಾರರ ಪ್ರದೇಶದ ಯುವ ವಿಜ್ಞಾನಿಗಳೂ ಇದ್ದಾರೆ. ಅವರೂ ಈ ರೋಗಗಳ ಬಗ್ಗೆ ಅಧ್ಯಯನ ‌ಮಾಡಬೇಕು‌ ಎಂದರು.

ತೋಟಗಾರಿಕಾ ಸಚಿವರು ೨ ಕೋಟಿ ರೂ. ಬಿಡುಗಡೆ ಮಾಡುವದಾಗಿ ಹೇಳಿದ್ದಾರೆ. ಆದರೆ ಇದು ಏನಕ್ಕೂ ಸಾಲದು. ಉಚಿತವಾಗಿ ಲಭ್ಯ ಔಷಧ, ಲಘು ಪೋಷಕಾಂಶ ನೀಡಬೇಕು ಎಂದೂ ಆಗ್ರಹಿದರು.

ಇಂದು ಅಡಿಕೆ ಬೆಳೆಗಾರರು ಸಹಜವಾಗಿ‌ ಕಂಗಾಲಾಗಿದ್ದಾರೆ. ಏನು ಮಾಡಬೇಕು ಎಂದು ಚಿಂತಿತರಾಗಿದ್ದಾರೆ. ಪ್ರಕೃತಿಯಲ್ಲಿ ಆದ ಅನೇಕ‌ ಬದಲಾವಣೆ ಅನೇಕ ರೋಗಗಳಿಗೆ ಕಾರಣವಾಗಿದೆ. ಪ್ರಕೃತಿ ವೈಪರಿತ್ಯ ಕಾರಣದಿಂದ ಉಲ್ಬಣಗೊಂಡಿದೆ. ಕೃಷಿ ಸಂಬಂಧಿತಕ್ಕೂ ವ್ಯಾಪಿಸಿದೆ. ಎಲೆ ಚುಕ್ಕಿ ರೋಗ, ಹಳದಿ ರೋಗ ಭೀಕರವಾಗಿ ಕಾಡುತ್ತಿದೆ. ಇದು ರೈತರಿಗೆ ಸಹಜವಾದ ಆತಂಕ, ಭವಿಷ್ಯದ ಚಿಂತೆ‌ ಕಾಡುತ್ತಿದೆ. ಕೆಲವು ಕಡೆ ಗಂಭೀರವಾಗಿದೆ. ಕೆಲವಡೆ ಕಾಣಲಾರಂಭಿಸಿದೆ. ಆ ಔಷಧ ಸಿಂಪರಣೆ‌‌ ಸಾಮೂಹಿಕವಾಗಿ ಸಿಂಪರಣೆಯ ಕಾರ್ಯವನ್ನೂ ರೈತರು ಮಾಡಬೇಕಾಗಿದೆ. ರೈತರೂ ಸಿಂಪರಣೆಯ ವಿಷಯಕ್ಕೆ ಸಾಮೂಹಿಕವಾಗಿ ತೊಡಗುಕೊಳ್ಳಬೇಕು ಎಂದೂ ಹೇಳಿದರು.

ಪೂರ್ಣ ಹಾನಿಯಾದರೆ, ಬೆಳೆ ಹಾನಿಗೆ ಸರಕಾರ ಪೂರ್ಣ ಪರಿಹಾರ‌ ಕೊಡಬೇಕು. ಮೇಲ್ನೋಟಕ್ಕೆ ಕಣ್ಣು ಒರೆಸುವ ತಂತ್ರ ಸರಕಾರ ಮಾಡದೇ, ಸರಕಾರ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

Advertisement

ಅಡಿಕೆ ವಾಣಿಜ್ಯ ಬೆಳೆ. ಕೇಂದ್ರ ಸರಕಾರ ಅಡಿಕೆ ಆಮದು ನಿಯಂತ್ರಣ ಆಗಿದೆ. ಅಡಿಕೆಗೆ ಬೆಳೆ ಬೆಲೆ ಇದೆ. ಒಳ್ಳೆಯ ಬೆಳೆ ಕಾರಣದಿಂದ ವಿಸ್ತಾರ ಆಗುತ್ತಿದೆ. ರೈತರ ಬದುಕಿ‌ನ ಜೊತೆ ಇದರ ಆದಾಯ ಸರಕಾರ ಕೆ ಆದಾಯವಿದೆ. ೫ ಲಕ್ಷಕ್ಕೂ ಅಧಿಕ ಕುಟುಂಬಗಳು ಇವೆ. ಅವರ ಬದುಕಿನ ಬಗ್ಗೆ ವಿಶ್ವಾಸ ಕೊಡಬೇಕು. ಅಡಿಕೆ ಬೆಳೆಗಾರ ಹಿತ ಕಾಯಲು ಸಂಶೋಧನಾ ಕ್ರಮ‌ ಕಂಡುಕೊಡಬೇಕು. ಕರೋನಾಕೆ ಔಷಧ ಕಂಡು ಹಿಡಿದವರು ನಾವು. ಈ ರೋಗದ ಬಗ್ಗೆ ಔಷಧ ಕಂಡು ಹಿಡಿಯಲು ಸಾಧ್ಯವಿದೆ. ಆದರೆ, ರೈತರು ಆತಂಕಕ್ಕೆ ಒಳಗಾಗದೇ ಸಾಮೂಹಿಕವಾಗಿ ಮುನ್ನಡೆಯಬೇಕಾಗಿದೆ ಎಂದೂ ಹೇಳಿದರು.

ಈ ವೇಳೆ ರವಿ ಹಳದೋಟ, ಯಡಹಳ್ಳಿ‌ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಇತರರು ಇದ್ದರು.

ಇಲಾಖೆ ಹಾಗೂ ರೈತರು ಬಹು ಎಚ್ಚರಿಕೆಯಿಂದ ದಾಟಬೇಕು. ಮಾರುಕಟ್ಟೆ ಔಷಧ ಬಳಸಬಾರದು. ಸರಕಾರ, ಇಲಾಖೆ ಸೂಚಿಸಿದ್ದನ್ನೆ ಬಳಸಬೇಕು.
– ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next