Advertisement

ನಾಡಿದ್ದು 400 ಟ್ರ್ಯಾಕ್ಟರ್‌ ರ್ಯಾಲಿ

07:20 PM Feb 18, 2021 | Team Udayavani |

ಗಜೇಂದ್ರಗಡ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು, ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಫೆ.20 ರಂದು ಪಟ್ಟಣದಲ್ಲಿ 400ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳ ಮೂಲಕ ಬೃಹತ್‌ ರ್ಯಾಲಿ ನಡೆಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಪಾಟೀಲ ಹೇಳಿದರು.

Advertisement

ಸಮೀಪದ ದಿಂಡೂರ ರಸ್ತೆ ಬಳಿಯ ಘೋರ್ಪಡೆ ಅವರ ಫಾರ್ಮ್ ಹೌಸ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ದೇಶದ ರೈತ ಸಮೂಹಕ್ಕೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಮೂಲಕ ಅನ್ನದಾತರ ಬದುಕಿಗೆ ಕೊಳ್ಳಿ  ಇಡುವ ಕೆಲಸ ಮಾಡುತ್ತಿದೆ. ಇದನ್ನು ವಿರೋಧಿಸಿ ಈಗಾಗಲೇ ಹಲವಾರು ತಿಂಗಳಿಂದ ದೆಹಲಿಯಲ್ಲಿ ದೇಶದ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರ ನೆರವಿಗೆ ಧಾವಿಸುವುದು ನಮ್ಮೆಲ್ಲ ದೇಶವಾಸಿಗಳ ಕರ್ತವ್ಯವಾಗಿದೆ ಎಂದರು.

ಗಜೇಂದ್ರಗಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ಘೋರ್ಪಡೆ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಆಡಳಿತ ಅವ ಧಿ ಸುವರ್ಣ ಯುಗವಾಗಿತ್ತು. ಬಿಜೆಪಿ ಸರ್ಕಾರ ಒಂದೊಂದೇ ಕ್ಷೇತ್ರವನ್ನು ಟಾರ್ಗೆಟ್‌ ಮಾಡಿಕೊಂಡು ಉದ್ಯಮಿಗಳ ಪಾಲು ಮಾಡುತ್ತಿದೆ. ಎಲ್ಲವನ್ನು ಮಾರಾಟ ಮಾಡಿ ನಾವು ದೇಶಭಕ್ತರು ಎನ್ನುವುದನ್ನು ಮಾತ್ರ ಬಿಡುತ್ತಿಲ್ಲ. ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಟಿ.ವಿ.ಯಲ್ಲಿ ಬರ್ತಾರೆ ಅಂದ್ರೆ ಏನು ಕಂಟಕ ಕಾದಿದೆ ಅಂತಲೇ ಅರ್ಥ ಎಂದರು.

ರೋಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಶೆಟ್ಟರ, ತಾಪಂ ಉಪಾಧ್ಯಕ್ಷ ಶಶಿಧರ  ಹೂಗಾರ, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್‌, ರಾಜೂ ಸಾಂಗ್ಲಿಕಾರ, ವೆಂಕಟೇಶ ಮುದಗಲ್‌, ಬಸವರಾಜ ಬಂಕದ, ಎಚ್‌.ಎಸ್‌. ಸೋಂಪೂರ, ವಿ.ಬಿ. ಹಪ್ಪಳದ, ಹನಮಂತಪ್ಪ ಹೊರಪೇಟಿ, ಬಿ.ಎಸ್‌. ಶೀಲವಂತರ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next