Advertisement

ರೈತರ ಪ್ರತಿಭಟನೆ :ಜಂತರ್ ಮಂತರ್ ನಲ್ಲಿ ನಮ್ಮದೇ ಸಂಸತ್ ಅಧಿವೇಶನ ಮಾಡ್ತೇವೆ ಎಂದ ರೈತ ಮುಖಂಡರು

10:55 AM Jul 22, 2021 | Team Udayavani

ನವ ದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೆ ಈಗ ಕಾವು ಪಡೆದುಕೊಂಡಿದ್ದು, ಇಂದು( ಗುರುವಾರ, ಜುಲೈ 22) ಸಿಂಘು ಗಡಿಯಿಂದ ರಾಷ್ಟ್ರ ರಾಜಧಾನಿ ನವ ದೆಹಲಿಯ ಜಂತರ್ ಮಂತರ್ ಗೆ ಬಸ್ ಗಳ ಮೂಲಕ ಸುಮಾರು 200 ಕ್ಕೂ ಅಧಿಕ ಮಂದಿ ಕೃಷಿಕರು ಪ್ರತಿಭಟನೆ ಮಾಡುವುದಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನವ ದೆಹಲಿಯ ಸುತ್ತಾ ಮುತ್ತ ಬಿಗಿ ಪೊಲೀಸ್ ಬಂದೋಸ್ತ್ ಮಾಡಲಾಗಿದೆ.

Advertisement

ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ರ ತನಕ ಪ್ರತಿಭಟನೆ ನಡೆಸಲಿದ್ದು, ಟ್ರಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ಜನವರಿ 26 ರಂದು ಕೆಂಪುಕೋಟೆಯ ನಡೆದ ಹಿಂಸಾಚಾರದ ನಂತರ ಇದೇ ಮೊದಲ ಬಾರಿಗೆ ನಗರದಲ್ಲಿ ಪ್ರತಿಭಟನೆ ನಡೆಸಲು ಪ್ರತಿಭಟನಾ ನಿರತ ರೈತ ಸಂಘಗಳಿಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಇದನ್ನೂ ಓದಿ : ಕೇಂದ್ರ ಹೇಳಿದಂತೆ ಕೇಳುತ್ತೇನೆ, ಶ್ರೀಗಳು ಸಹಕಾರ ನೀಡಬೇಕು: ರಾಜೀನಾಮೆ ಸುಳಿವು ನೀಡಿದ BSY

ಜಂತರ್ ಮಂತರ್ ನಲ್ಲಿ ನಾವು ನಮ್ಮದೇ ಸಂಸತ್ ಅಧಿವೇಶನ ಮಾಡ್ತೇವೆ : ಟಿಕಾಯತ್

ರಾಷ್ಟ್ರೀಯ ಸುದ್ದಿ ಸಂಸ್ಥಗಳೊಂದಿಗೆ ಮಾತನಾಡಿದ  ಸಂಯುಕ್ತ ಕಿಸಾನ್ ಮೋರ್ಚಾ ದ ಅಧ್ಯಕ್ಷ ರಾಕೇಶ್ ಟಿಕಾಯತ್,   ಜಂತರ್ ಮಂತರ್ ಸಂಸತ್ ನಿಂದ ಕೇವಲ 150 ಮೀಟರ್ ದೂರದಲ್ಲಿ ಇದೆ. ನಾವು ಜಂತರ್ ಮಂತರ್ ನಲ್ಲಿ ನಮ್ಮದೇ ಸಂಸತ್ ನನ್ನು ರಚಿಸಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

Advertisement

ಇನ್ನು, ಜನವರಿ 26 ರ ಗಣರಾಜ್ಯೋತ್ಸವದ ದಿನದಂದು ನಡೆದ ಹಿಂಸಾಚರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಗೂಂಡಾಗಳೊಂದಿಗೆ ಏನು ಮಾಡುವುದಕ್ಕೆ ಸಾಧ್ಯವಿದೆ..? ನಾವು ದುಷ್ಕರ್ಷಿಗಳಾ..? ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆಯುವ  ತನಕ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಕಟಪಾಡಿ: ಟೈಯರ್ ಸ್ಪೋಟಗೊಂಡು ರಾ.ಹೆದ್ದಾರಿ ಡಿವೈಡರ್ ಮೇಲೇರಿದ ಟ್ರಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next