ಚಿಕ್ಕೋಡಿ: ಜಿಎಲ್ ಬಿಸಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ನೂರಾರು ರೈತರು ಚಿಕ್ಕೋಡಿ- ಮಿರಜ ರಾಜ್ಯ ಹೆದ್ದಾರಿ ಹತ್ತಿರ ಕೇರೂರ ಕ್ರಾಸ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ- ಮಿರಜ ರಾಜ್ಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ತಡೆ ಹಿಡಿದರು. ಕಾಲುವೆಗೆ ನೀರು ಹರಿಸದೇ ಇರುವ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕಾ ಅಧ್ಯಕ್ಷ ಮಂಜುನಾಥ ಪರಗೌಡ ಮಾತನಾಡಿ. ಚಿಕ್ಕೋಡಿ ತಾಲೂಕಿನ ಕೇರೂರ. ಜೋಡಕುರಳಿ. ಅರಬ್ಯಾನವಾಡಿ. ರೂಪಿನಾಳ ಗ್ರಾಮದ ರೈತರಿಗೆ ಅನುಕೂಲವಾಗುವ ಜಿಎಲ್ ಬಿಸಿ ಕಾಲುವೆಗೆ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಡಲಾಗಿತ್ತು. ಆದರೂ ಕಾಲುವೆಗೆ ನೀರು ಹರಿಯದೇ ಇರುವ ಕಾರಣ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ನೀರು ಬಿಡುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದರು.
ನೀರಾವರಿ ಇಲಾಖೆ ಅಧಿಕಾರಿ ನಾಗೇಶ ಕೋಲಕಾರ ಮಾತನಾಡಿ. ನೀರಾವರಿ ಸಲಹಾ ಸಮಿತಿ ಇದೆ. ಬೇಡಿಕೆ ಅನುಗುಣವಾಗಿ ನೀರು ಬಿಡಲು ಆದೇಶ ಮಾಡುತ್ತಾರೆ. ಬರಗಾಲ ಇರುವುದರಿಂದ ವ್ಯತ್ಯಾಸ ಆಗಿದೆ. ಸಲಹಾ ಸಮಿತಿ ಒಪ್ಪಿಗೆ ಕೊಟ್ಟರೆ ಇವತ್ತೆ ನೀರು ತರುತ್ತೇನೆ. ಕಿನಾಲ ಸ್ವಚ್ಚತೆ ಮಾಡಿ ನೀರು ತರಲಾಗುತ್ತದೆ.ಜಿಎಲ್ ಬಿಸಿ ಕಾಲುವೆಗೆ ನೀರು ಬಿಟ್ಟರೆ ಎಂಟು ದಿನಗಳ ಒಳಗಾಗಿ ಕೇರೂರ ಗ್ರಾಮಕ್ಕೆ ನೀರು ತರುತ್ತೇನೆ. ಇವಾಗ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ. ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ. ದುಂಡಪ್ಪ ಹಿಂಗ್ಲಜ. ಪ್ರತಾಪ ಪಾಟೀಲ ಮಾತನಾಡಿದರು.
ಇದನ್ನೂ ಓದಿ: ಮಂಗಳೂರಿನಲ್ಲಿಗ ಮೈ ನವಿರೇಳಿಸುವ ರ್‍ಯಾಂಬೊ ಸರ್ಕಸ್