Advertisement

ಅನ್ನದಾತರಿಗೆ ಅನುಕೂಲವಾಗುವ ರೈತಶಕ್ತಿ

03:47 PM Aug 05, 2022 | Team Udayavani |

ಕೊಪ್ಪಳ: ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ರೈತ ಶಕ್ತಿ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆಯಡಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಯಂತ್ರಗಳಿಗೆ ಬಳಸುವ ಡಿಸೇಲ್‌ಗೆ ಎಕರೆಗೆ 250 ರೂ. ಸಹಾಯಧನ ನೀಡುವ ಘೋಷಣೆ ಮಾಡಿದ್ದು, ಡಿಬಿಟಿ ಮೂಲಕ ರೈತರ ಖಾತೆಗೆ ನೇರ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

Advertisement

ಈ ಮೊದಲು ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿದರೂ ರೈತರು ಮೊದಲು ಕೃಷಿ ಸೇರಿ ವಿವಿಧ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ಆ ಅರ್ಜಿಗಳು ತಾಲೂಕು, ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಿ ನಂತರ ಸಹಾಯಧನ ರೈತರಿಗೆ ಬರುತ್ತಿತ್ತು. ಆದರೆ ರೈತ ಶಕ್ತಿ ಯೋಜನೆಯಡಿ ಈಗ ಡಿಬಿಟಿ ಮೂಲಕ ನೇರ ರೈತರ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ ದಿನಗಳಲ್ಲಿ ಡಿಸೇಲ್‌ ಸೇರಿ ಪೆಟ್ರೋಲ್‌ ದರ ಗಗನ ಕುಸುಮವಾಗುತ್ತಿದೆ. ಇದರಿಂದ ರೈತರಿಗೂ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಇಂದು ಪ್ರತಿಯೊಂದು ಕೃಷಿ ಚಟುವಟಿಕೆಗಳಿಗೂ ಯಂತ್ರ ಬಳಸುವ ಅನಿವಾರ್ಯತೆ ಎದುರಾಗಿದೆ.

ಈ ವೇಳೆ ಪ್ರತಿ ಲೀಟರ್‌ ಡಿಸೇಲ್‌ಗೆ 100ರ ಗಡಿಯತ್ತ ಸಾಗುತ್ತಿದೆ. ಇದು ರೈತಾಪಿ ವಲಯಕ್ಕೆ ಹೊರೆಯಾಗುತ್ತಿರುವುದರಿಂದ ಅವರಿಗೆ ಡಿಸೇಲ್‌ ದರದ ಹೊರೆ ಕಡಿಮೆ ಮಾಡಲು ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ.

ರೈತ ಶಕ್ತಿಗೆ ಯಾರು ಅರ್ಹರು?: ಕೃಷಿ ಇಲಾಖೆಯಡಿ ಇರುವ ಫಾರ್ಮರ್‌ ರಿಜಿಸ್ಟ್ರೇಷನ್‌ ಆ್ಯಂಡ್‌ ಯೂನಿಫೈಡ್‌ ಬೆನಿಫಿಶರಿ ಇನಾರ್ಮೇಷನ್‌ ಸಿಸ್ಟಮ್‌ (ಫ್ರೂಟ್ಸ್‌) ಸಾಫ್ಟವೇರ್‌ನಲ್ಲಿ ಜಿಲ್ಲೆಯ ಎಲ್ಲ ರೈತರು ಸಾಫ್ಟವೇರ್‌ನಲ್ಲಿ ನೋಂದಾಯಿಸಿದ್ದಾರೆ. ಈ ಫ್ರೂಟ್ಸ್‌ನಡಿ ನೋಂದಾಯಿತ ರೈತರಿಗೆ ಮಾತ್ರ ರೈತ ಶಕ್ತಿ ಯೋಜನೆಯಡಿ ಡಿಸೇಲ್‌ ಸಬ್ಸಿಡಿ ಹಣ ರೈತರ ಖಾತೆಗೆ ಜಮೆಯಾಗಲಿದೆ. ಇಲ್ಲಿ ಸಂಘ-ಸಂಸ್ಥೆಗಳಲ್ಲಿರುವ, ಟ್ರಸ್ಟ್‌ ಹೆಸರಲ್ಲಿನಲ್ಲಿರುವ ಜಮೀನುಗಳಿಗೆ ಈ ಸಹಾಯಧನ ದೊರೆಯಲ್ಲ ಅಲ್ಲದೇ, ಜಂಟಿ ಖಾತೆ ಹೊಂದಿದ್ದವರಿಗೆ ಸಮನಾಗಿ ಸಹಾಯಧನ ದೊರೆಯಲಿದೆ. ಅಲ್ಲದೇ ರೈತ ಶಕ್ತಿ ಯೋಜನೆಯಡಿ ಫ್ರೂಟ್ಸ್‌ನಡಿ ನೋಂದಾಯಿತ ಸಣ್ಣ ಹಿಡುವಳಿದಾರರು ಹಾಗೂ ದೊಡ್ಡ ಹಿಡುವಳಿದಾರ ರೈತರೂ ಈ ಯೋಜನೆಗೆ ಅರ್ಹರಿದ್ದಾರೆ.

Advertisement

ಐದು ಎಕರೆವರೆಗಷ್ಟೇ ಸಬ್ಸಿಡಿ: ಇಲ್ಲಿ ಓರ್ವ ರೈತ ಒಂದು ಎಕರೆ ಜಮೀನು ಹೊಂದಿದ್ದರೆ 250 ರೂ. ಸಹಾಯಧನ ದೊರೆಯಲಿದೆ. 2 ಎಕರೆ ಇದ್ದರೆ 500 ರೂ., 3 ಎಕರೆ ಇದ್ದರೆ 750 ರೂ., 4 ಎಕರೆ ಇದ್ದರೆ 1000 ಹಾಗೂ 4 ಎಕರೆಗಿಂತ ಹೆಚ್ಚಿನ ಎಷ್ಟೇ ಭೂಮಿ ಇದ್ದರೂ ಆ ರೈತನಿಗೆ 1250 ರೂ. ಸಹಾಯಧನ ಖಾತೆಗೆ ಜಮೆಯಾಗಲಿದೆ. ಅಂದರೆ ಗರಿಷ್ಠ 5 ಎಕರೆವರೆಗೂ ಮಾತ್ರ ಡಿಸೇಲ್‌ ಸಹಾಯಧನ ದೊರೆಯಲಿದೆ. ಒಂದು ವರ್ಷಕ್ಕೆ ಒಂದೇ ಬಾರಿ ಈ ಸಹಾಯಧನ ರೈತರ ಖಾತೆಗೆ ಜಮೆಯಾಗಲಿದೆ. ಸರ್ಕಾರವು ಪ್ರಸಕ್ತ ವರ್ಷದಲ್ಲಿ ರೈತ ಶಕ್ತಿ ಯೋಜನೆ ಆರಂಭಿಸಿದ್ದು, ಕೃಷಿಯಲ್ಲಿ ಯಂತ್ರಗಳನ್ನು ಬಳಸುವ ರೈತರಿಗೆ ನೆರವಾಗಲು ಡಿಸೇಲ್‌ ದರದ ಹೊರೆ ಕಡಿಮೆ ಮಾಡಲು ಕನಿಷ್ಟ ಎಕರೆಗೆ 250, ಗರಿಷ್ಟ 5 ಎಕರೆವರೆಗೂ 1250 ರೂ.ವರೆಗೂ ಎಲ್ಲ ವರ್ಗದ ರೈತರ ಖಾತೆಗೆ ಡಿಬಿಟಿ ಮೂಲಕ ಸಹಾಯಧನ ಜಮೆಯಾಗಲಿದೆ. ಒಂದು ವರ್ಷಕ್ಕೆ ಒಂದೇ ಬಾರಿ ಸಬ್ಸಿಡಿ ದೊರೆಯಲಿದೆ. ಯಾವುದೇ ರೈತರು ಅರ್ಜಿ ಸಲ್ಲಿಸುವಂತಿಲ್ಲ. ಫ್ರೂಟ್ಸ್‌ನಡಿ ನೋಂದಾಯಿಸಿದ ರೈತರ ಮಾಹಿತಿ ಆಧರಿಸಿಯೇ ಸಹಾಯಧನ ರೈತರ ಖಾತೆಗೆ ಜಮೆಯಾಗಲಿದೆ. –ಸದಾಶಿವ, ಕೃಷಿ ಜಂಟಿ ನಿರ್ದೇಶಕ, ಕೊಪ್ಪಳ.

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next