ಬಸವನಬಾಗೇವಾಡಿ: ರಸಗೊಬ್ಬರದ ಬೆಲೆ ಹೆಚ್ಚಳ ಮಾಡಿರುವುದನ್ನುಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಬಿ.ಐ. ಹಿರೇಮಠಅವರಿಗೆ ಸಲ್ಲಿಸಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಬೆಳೆಗೆ ಅಗತ್ಯವಿರುವ ಡಿಎಪಿ ರಸಗೊಬ್ಬರ ಸೇರಿದಂತೆ ಇತರ ರಸಗೊಬ್ಬರಗಳ ದರ ಕೂಡ ಹೆಚ್ಚಿಸಿ ರೈತರಿಗೆ ಬರೆ ಹಾಕುವ ಕೆಲಸ ಕೇಂದ್ರಸರಕಾರ ಮಾಡಿದೆ. 50 ಕೆ.ಜಿ ಚೀಲದರಸಗೊಬ್ಬರಕ್ಕೆ 425 ರೂ.ದಿಂದ700 ರೂ.ವರೆಗೆ ಹೆಚ್ಚಿಸಲಾಗಿದೆ.
ರಾಸಾಯನಿಕ ಗೊಬ್ಬರಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆಎಂಬ ನೆಪವೊಡ್ಡಿ ರಸಗೊಬ್ಬರದ ಬೆಲೆಹೆಚ್ಚಳ ಮಾಡಿರುವುದು ಖಂಡನೀಯ ಎಂದರು.
ಈ ಮೊದಲು ರೂ. 1200 ಇದ್ದ ಡಿಎಪಿ ರೂ.1900ರವರೆಗೆ ಏರಿಕೆಯಾಗಿದೆ. ಎನ್‌ಪಿಕೆ 10.26.26ಗೊಬ್ಬರದ ದರ ರೂ. 1175 ಇದ್ದುದನ್ನುರೂ.1775ಕ್ಕೆ ಹೆಚ್ಚಿಸಲಾಗಿದೆ. ಇದೆ ರೀತಿ ಇನ್ನುಳಿದ ಗೊಬ್ಬರಗಳ ಬೆಲೆಯನ್ನುಹೆಚ್ಚಿಸಲಾಗಿದೆ. ರಸಗೊಬ್ಬರದ ದರ ಹೆಚ್ಚಿಸಿದರೆ ರೈತರು ಖರೀದಿಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕು ಘಟಕದಗೌರವಾಧ್ಯಕ್ಷ ಈರಣ್ಣ ದೇವರಗುಡಿ,ಕಾರ್ಯಾಧ್ಯಕ್ಷ ಸೋಮನಗೌಡಪಾಟೀಲ, ಚನಬಸಪ್ಪ ಸಿಂಧೂರ,ಕೃಷ್ಣಪ್ಪ ಬಮರಡ್ಡಿ, ಶೆಟ್ಟೆಪ್ಪ ಲಮಾಣಿ,ರಾಜೇಸಾಬ್ ವಾಲೀಕಾರ, ಮಾಚಪ್ಪಹೊರ್ತಿ, ಮಲ್ಲಪ್ಪ ಮಾಡ್ಯಾಳ, ಶಿವಪ್ಪಮಂಗೊಂಡ, ದಾವಲಸಾಬ್ ನದಾಫ್, ವಿಠ್ಠಲ ಬಿರಾದಾರ, ಸಂತೋಷ ಬಿರಾದಾರ, ಚಂದ್ರಾಮ ತೆಗ್ಗಿ, ಶೇಖಪ್ಪ ಖರಾಬಿ, ಶರಣು ಇಟಗಿ ಇದ್ದರು.