ಚಿಕ್ಕಮಗಳೂರು: ಎಲೆಚುಕ್ಕಿ ರೋಗದಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಸುಗುಣಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಶಂಕರೇಗೌಡ (55) ಮೃತ ರೈತ. ಇವರು ನಾಲ್ಕು ಎಕರೆ ಅಡಿಕೆ ತೋಟ ಹೊಂದಿದ್ದು, ಇತ್ತೀಚೆಗೆ ಇಡೀ ತೋಟಕ್ಕೆ ಎಲೆ ಚುಕ್ಕಿ ರೋಗ ಬಾಧಿಸಿದ್ದು, ಇದರಿಂದ ತೀವ್ರವಾಗಿ ಮನನೊಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ:2ನೇ ಮದುವೆಗೆ ಒಪ್ಪದ ಮಹಿಳೆಗೆ ಚಾಕು ಇರಿತ-ಆರೋಪಿ ಪರಾರಿ
ಭಾನುವಾರ ಸಂಜೆ ತೋಟಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದ ಶಂಕರೇಗೌಡ ಹಿಂದುರುಗಿ ಬರದಿದ್ದನ್ನು ಗಮನಿಸಿದ ಮನೆಯವರು ಹುಡಕಾಟ ನಡೆಸಿದ್ದು, ಈ ವೇಳೆ ತೋಟದ ಸಮೀಪದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿರುವುದು ತಿಳಿದು ಬಂದಿದೆ.