Advertisement
2019ರ ಲೋಕಸಭೆ ಚುನಾವಣೆಯೊಳಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನುಓಲೈಸಲು ಹೊರಟಿವೆ. ಸಾಲ ಮನ್ನಾ ಜಿಡಿಪಿಯ ಶೇ. 1.5 ಆಗಿದ್ದು, ಇದು 2018-20ರ ಅವಧಿಯಲ್ಲಿ ರೈತರ ಆದಾಯದಲ್ಲಿ ಶೇ. 3ರಷ್ಟು ಹೆಚ್ಚಳ ಮಾಡಲಿದೆ. ಇನ್ನೊಂದೆಡೆ ಕನಿಷ್ಠ ಬೆಂಬಲ ಬೆಲೆಏರಿಕೆಯಿಂದಾಗಿ ಈ ಮುಂಗಾರಿನಲ್ಲೇ ರೈತರ ಆದಾಯವನ್ನು ಶೇ. 10ರಷ್ಟು ಏರಿಸಲಿದೆ ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ. ಆದರೆ ವಿತ್ತೀಯ ಕೊರತೆ ಮತ್ತು ಹಣದುಬ್ಬರದ ಗುರಿಯ ಜೊತೆಗೇ 2022ರ ವೇಳೆಗೆ ರೈತರ ಆದಾಯವ ನ್ನೂ ಏರಿಸುವ ಸರ್ಕಾರದ ಗುರಿ ಸಾಧಿಸುವುದು
ಕಷ್ಟ ಎಂದು ವರದಿ ಹೇಳಿದೆ.