ಈ ವರ್ಷ ಮೇ ತಿಂಗಳ ಬಿರುಬೇಸಿಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲಿಕ ಮಳೆ. ಬರ, ನೆರೆ ಮತ್ತು ಅಕಾಲಿಕ ಮಳೆ ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ ಕೃಷಿಕರ ಅಂದಾಜುಗಳೆಲ್ಲ ತಲೆಕೆಳಗಾಗುತ್ತಿವೆ.
Advertisement
ಇಂಥ ಸನ್ನಿವೇಶದಲ್ಲಿ ಕೃಷಿಕರ ಹಿತಾಸಕ್ತಿಯ ರಕ್ಷಣೆಗೆ ದಾರಿ ಯಾವುದು? ಫಸಲು ವಿಮೆ ಒಂದು ಪರಿಣಾಮಕಾರಿ ದಾರಿ. ಕೃಷಿಕರಿಗೆ ಕನಿಷ್ಠ ಆದಾಯದ ಗ್ಯಾರಂಟಿ, ಫಸಲು ವಿಮೆಯ ಪ್ರಧಾನ ಅಂಶ. ನಮ್ಮ ದೇಶದಲ್ಲಿ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ಜಾರಿಯಾದದ್ದು 2016ರ ಮುಂಗಾರು ಹಂಗಾಮಿನಲ್ಲಿ. ರೈತಸ್ನೇಹಿ ಫಸಲು ವಿಮಾ ಯೋಜನೆಯನ್ನು ದೇಶದ ಉದ್ದಗಲದಲ್ಲಿ ಚಾಲೂ ಮಾಡುವುದು ಈ ಯೋಜನೆಯ ಉದ್ದೇಶ.
Related Articles
Advertisement
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಿಂದ ವಿಮಾ ಕಂಪೆನಿಗಳಂತೂ 2016ರ ಮುಂಗಾರಿನಲ್ಲಿ ಸುಮಾರು ರೂ.10,000 ಕೋಟಿ ಭರ್ಜರಿ ಲಾಭಗಳಿಸಿವೆ. ಆದರೆ, ಅಸಮರ್ಪಕ ವಿಮಾ ಪರಿಹಾರ ಮತ್ತು ಪರಿಹಾರ ಪಾವತಿಯಲ್ಲಿ ವಿಳಂಬದ ಬಗ್ಗೆ ಹಲವಾರು ದೂರುಗಳು ಬಂದಿವೆ. ಅನೇಕ ಪ್ರಕರಣಗಳಲ್ಲಿ, ವಿಮಾ ಕಂಪೆನಿಗಳು ಸ್ಥಳೀಯ ವಿಕೋಪದಿಂದಾದ ನಷ್ಟದ ಬಗ್ಗೆ ತನಿಖೆ ನಡೆಸಲಿಲ್ಲ; ಹಾಗಾಗಿ ವಿಮಾ ಪರಿಹಾರ ಪಾವತಿಸಲಿಲ್ಲ.ಕೆಲವು ಜಿÇÉೆಗಳಲ್ಲಿ ಪರಿಹಾರದ ಕ್ಲೈಮುಗಳನ್ನೇ ಇನ್ನೂ ಇತ್ಯರ್ಥ ಪಡಿಸಿಲ್ಲ. ಮುಂಗಾರು 2016ರ ಮತ್ತು 2016-17ರ ಎರಡನೇ ಬೆಳೆ ಹಂಗಾಮಿನ (ರಾಬಿ) ಕ್ಲೈಮುಗಳೂ ಬಾಕಿ ಇವೆ. ಆದರೆ, ಮುಂಗಾರು 2016ರಲ್ಲಿ ವಿಮಾ ಕಂಪೆನಿಗಳು ರೈತರಿಗೆ ಅಧಿಕ ಪ್ರೀಮಿಯಮ್ ವಿಧಿಸಿದ್ದವು. ಫಸಲು (ಬೆಳೆ) ವಿಮೆಯ ಪ್ರೀಮಿಯಮ್ ಭವಿಷ್ಯದ ಫಸಲಿನ ನಷ್ಟದ ನಿರೀಕ್ಷಿತ ಬೆಲೆ ಆಗಿರುತ್ತದೆ. ಅದರಂತೆ, ವಿಮಾ ಕಂಪೆನಿಗಳು ಶೇಕಡಾ 12.6 ಸರಾಸರಿ ಪ್ರೀಮಿಯಮ್ ವಿಧಿಸಿದ್ದವು. ಇದು ಭಾರತದ ಫಸಲು (ಬೆಳೆ) ವಿಮೆಯ ಚರಿತ್ರೆಯÇÉೇ ಅತ್ಯಧಿಕ ಪ್ರೀಮಿಯಮ್ ದರ. ಕೆಲವು ರಾಜ್ಯಗಳಲ್ಲಿ ವಿಧಿಸಿದ ಫಸಲು ವಿಮೆ ಪ್ರೀಮಿಯಮ್ ಗಮನಿಸಿ: ಗುಜರಾತಿನಲ್ಲಿ ಶೇ.20.5, ರಾಜಸ್ಥಾನದಲ್ಲಿ ಶೇ.19.9, ಮಹಾರಾಷ್ಟ್ರದಲ್ಲಿ ಶೇ.18.9. ಅದರಿಂದಾಗಿ, ವಿಮಾ ಕಂಪೆನಿಗಳ ಫಸಲು ವಿಮೆ ಪ್ರೀಮಿಯಮ್ ಸಂಗ್ರಹದಲ್ಲಿ ಭಾರೀ ಹೆಚ್ಚಳದ ಸಾಧನೆ: ಮುಂಗಾರು 2016ರಲ್ಲಿ ರೂ.16,70,000 ಕೋಟಿ ಮತ್ತು ರಾಬಿ 2016-17ರಲ್ಲಿ ರೂ.5,66,989 ಕೋಟಿ. ಫಸಲು ವಿಮಾ ಯೋಜನೆಯ ಅನುಕೂಲ ಬ್ಯಾಂಕುಗಳ ಸಾಲಗಾರ ರೈತರಿಗೆ ಸೀಮಿತ. ಯಾಕೆಂದರೆ, ಅವರು ಕಡ್ಡಾಯವಾಗಿ ಫಸಲು ವಿಮೆ ಪ್ರೀಮಿಯಮ್ ಪಾವತಿಸಬೇಕು. ಗೇಣಿಬೇಸಾಯ ಮಾಡುವ ರೈತರು ಈ ಯೋಜನೆಯಿಂದ ಹೊರಗೆ ಉಳಿದಿ¨ªಾರೆ. ಮುಂಗಾರು 2016ರಲ್ಲಿ 38.6 ದಶಲಕ್ಷ ಹೆಕ್ಟೇರ್ ಮತ್ತು ರಾಬಿ 2016-17ರಲ್ಲಿ 19.5 ದಶಲಕ್ಷ$ ಹೆಕ್ಟೇರ್ ಜಮೀನಿನ ಬೆಳೆಗಳಿಗೆ ಫಸಲು ವಿಮೆ ಮಾಡಿಸಲಾಗಿತ್ತು (28-7-2017ರ ಮಾಹಿತಿ). ಆದರೆ, ಬಹುಪಾಲು ರೈತರಲ್ಲಿ ಪ್ರಫ ವಿಮಾ ಯೋಜನೆ ಬಗ್ಗೆ ಜಾಗೃತಿ ಮೂಡಿಲ್ಲ. ರೈತರಿಗೂ ವಿಮಾಕಂಪೆನಿಗಳಿಗೂ ನೇರ ಸಂಪರ್ಕ ಇನ್ನೂ ಚಾಲ್ತಿಯಲ್ಲಿಲ್ಲ. ಫಸಲುವಿಮೆ ಪರಿಣಾಮಕಾರಿ ಆಗಬೇಕಾದರೆ, ಗೇಣಿಬೇಸಾಯ ಮಾಡುವ ರೈತರಿಗೂ ಫಸಲುವಿಮೆ ವಿಸ್ತರಿಸಬೇಕು ಮತ್ತು ಎಲ್ಲ ಮುಖ್ಯ ಬೆಳೆಗಳಿಗೂ ಫಸಲುವಿಮೆ ಒದಗಿಸಬೇಕು. ಫಸಲು ವಿಮೆಗೆ ನೋಂದಾಯಿಸುವ ರೈತರು ಮಿಶ್ರಬೆಳೆ ಬೆಳೆಯುವುದನ್ನು ಕಡ್ಡಾಯಗೊಳಿಸಬೇಕು. ಕೆಲವು ಬೆಳೆಗಳ ಫಸಲು ಪ್ರಮಾಣದ ಬಗ್ಗೆ ದಶಕಗಳ ಮಾಹಿತಿ ಲಭ್ಯವಿಲ್ಲ; ಅಂತಹ ಬೆಳೆಗಳ ಕನಿಷ್ಠ ಫಸಲು ಪ್ರಮಾಣ ನಿರ್ಧರಿಸಲು ಲಭ್ಯವಿರುವ ಮಾಹಿತಿ ಬಳಸಬೇಕು. ಜೊತೆಗೆ, ಕಾಡುಪ್ರಾಣಿಗಳು, ಬೆಂಕಿ ಅಥವಾ ತೀವ್ರ ಚಳಿಯಿಂದಾದ ಫಸಲು ನಷ್ಟಕ್ಕೂ ವಿಮಾ ಪರಿಹಾರ ನೀಡಬೇಕು. ಫಸಲಿನ ಕೊಯ್ಲಿನ ನಂತರ, ಆಲಿಕಲ್ಲು ಮಳೆಯಂತಹ ಪ್ರಾಕೃತಿಕ ವಿಕೋಪದಿಂದ ಫಸಲು ನಷ್ಟವಾದರೆ, ಅದಕ್ಕೂ ವಿಮಾ ಪರಿಹಾರ ಕೊಡಬೇಕು. ಮಳೆಬಾರದೆ ಬಿತ್ತನೆ ಮಾಡದಿದ್ದರೆ ಅದನ್ನೂ ಬೆಳೆನಷ್ಟವೆಂದು ಪರಿಗಣಿಸಬೇಕು. ವಿಮಾ ಯೋಜನೆಯ ಎಲ್ಲ ಮಾಹಿತಿಯೂ ವಿಮಾಕಂಪೆನಿ ಮತ್ತು ಸರಕಾರಗಳ ಕೃಷಿ ಇಲಾಖೆಗಳ ವೆಬ್‌ಸೈಟುಗಳಲ್ಲಿ ಸುಲಭವಾಗಿ ಲಭ್ಯವಿರಬೇಕು. ಗ್ರಾಮ ಪಂಚಾಯಿತಿ ಮತ್ತು ರೈತರನ್ನು ಫಸಲು ನಷ್ಟ ಅಂದಾಜಿಸುವ ಪ್ರಕ್ರಿಯೆಯಲ್ಲಿ ತೊಡಗಿಸುವ ಮೂಲಕ ಅದನ್ನು ಪಾರದರ್ಶಕವಾಗಿಸಬೇಕು. ಅಂತಿಮವಾಗಿ, 15 ದಿನಗಳೊಳಗೆ ರೈತರ ದೂರುಗಳನ್ನು ಇತ್ಯರ್ಥ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ಈ ಎಲ್ಲ ಸುಧಾರಣೆಗಳನ್ನು ಮಾಡಿದರೆ, ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ರೈತಸ್ನೇಹಿಯಾಗಿ, ಪ್ರಾಕೃತಿಕ ವಿಕೋಪಗಳಿಂದ ತತ್ತರಿಸುವ ರೈತರಿಗೆ ಅವರ ಸಂಕಟದ ಕಾಲದಲ್ಲಿ ಆಸರೆಯಾಗಲು ಸಾಧ್ಯವಾಗುತ್ತದೆ. * ಅಡ್ಡೂರು ಕೃಷ್ಣ ರಾವ್