Advertisement

World Cup: ನಗರದಲ್ಲೂ ಸೋಲಿನ ಕಾರ್ಮೋಡ

10:40 AM Nov 20, 2023 | Team Udayavani |

ಬೆಂಗಳೂರು: ನೀರವ ಮೌನ, ನಿರಾಸೆಯ ಕಡಲು! ಈ ಸಲ ವಿಶ್ವಕಪ್‌ ನಮೆª ಎಂಬ ಉತ್ಸಾಹ, ನಿರೀಕ್ಷೆಯೊಂದಿಗೆ, ಕ್ರಿಕೆಟ್‌ ಮ್ಯಾಚ್‌ ನೋಡಲು ಪೂರಕವಾಗುವಂತೆ ಭಾನುವಾರದ ದಿನಚರಿರೂಪಿಸಿಕೊಂಡಿದ್ದ ಉದ್ಯಾನ ನಗರಿಯ ಜನತೆಗೆ ಫೈನಲ್‌ನಲ್ಲಿನ ಭಾರತದ ಪ್ರದರ್ಶನ ನಿರಾಶೆ ಉಂಟು ಮಾಡಿತು.

Advertisement

ಬೆಳಗ್ಗೆಯಿಂದ ಸಂಭ್ರಮದ ಉಮೇದಿನಲ್ಲಿದ್ದ ಕ್ರಿಕೆಟ್‌ ಪ್ರಿಯರಲ್ಲಿ ಫ‌ಲಿತಾಂಶದ ಬಳಿಕ ಸೂತಕ ಮನೆ ಮಾಡಿತ್ತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರ್ವಜನಿಕ ಸ್ಥಳಗಳಲ್ಲಿ, ಶಾಪಿಂಗ್‌ ಮಾಲ್‌, ಕ್ಲಬ್‌ ಇನ್ನಿತರ ಕಡೆ ಪಂದ್ಯ ವೀಕ್ಷಣೆಗೆ ಬಂದಿದ್ದವರು ಭಾರತದ ಸೋಲು ಅರಗಿಸಿಕೊಳ್ಳಲಾಗದೆ ಭಾರದ ಮನಸ್ಸಿನಿಂದ ಮನೆಗಳತ್ತ ಹೆಜ್ಜೆ ಹಾಕಿದರು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಇನ್ನಿಂಗ್ಸ್‌ ಆರಂಭದ ಹತ್ತು ಓವರ್‌ಗಳಿಗೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಉತ್ಸಾಹ, ಸಂತಸ ಸೀಮಿತಗೊಂಡಿತು. ಉಳಿದ ಓವರ್‌ಗಳಲ್ಲಿ ಪಂದ್ಯದ ಮೇಲೆ ಆಸೀಸ್‌ನ ಉಡದ ಹಿಡಿತ ಬಿಗಿಯಾಗುತ್ತಿದ್ದಂತೆ ಅಭಿಮಾನಿಗಳ ಮನದಲ್ಲಿ ಆತಂಕವೇ ಮನೆ ಮಾಡುತ್ತ ಸಾಗಿತ್ತು. ಭಾನುವಾರ ಬಹುತೇಕ ಬೆಂಗಳೂರಿಗರು ಮನೆಯಲ್ಲೇ ಕುಳಿತು ಕ್ರಿಕೆಟ್‌ ವೀಕ್ಷಣೆಗೆ ಮನಸ್ಸು ಮಾಡಿದ್ದರು. ಉಳಿದಂತೆ ಬಾರ್‌, ರೆಸ್ಟೊರೆಂಟ್‌ಗಳು, ಕ್ಲಬ್‌ಗಳಲ್ಲಿ ಕ್ರಿಕೆಟ್‌ ವೀಕ್ಷಣೆಗೆ ನೆರೆದಿದ್ದವರು ಸಹ ಸೋಲಿನಿಂದ ನಿರಾಸೆಗೆ ಒಳಗಾದರು.

ಮೆಟ್ರೋ, ಬಸ್‌ ಸೇರಿ ಹೊರಗೆ ಓಡಾಡುತ್ತಿದ್ದವರು ಸಹ ಮೊಬೈಲ್‌ನಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರ ಗಮನ ಸಹ ಮೊಬೈಲ್‌ನತ್ತ ನೆಟ್ಟಿತ್ತು. ಒಟ್ಟಾರೆ ಇಡೀ ನಗರದಲ್ಲಿ ಜನ ಸಂಚಾರ, ವಾಹನ ಸಂಚಾರ ಕಡಿಮೆಯೇ ಇತ್ತು.ಆದರೆ, ಪಂದ್ಯದ ಆರಂಭದ ಹತ್ತು ಓವರ್‌ಗಳಲ್ಲಿ ಅಬ್ಬರಿಸಿದ ರೋಹಿತ್‌ ಶರ್ಮಾ ಅವರ ವಿಕೆಟ್‌ ಉರುಳುತ್ತಿದ್ದಂತೆ ರನ್‌ ಬರ ಭಾರತವನ್ನು ನಿಧಾನವಾಗಿ ಆವರಿಸುತ್ತ ಸಾಗಿತು.

ಹಾಗೆಯೇ ಕ್ರಿಕೆಟ್‌ ಪ್ರೇಮಿಗಳಲ್ಲಿನ ಸಂತಸದ ಕ್ಷಣಗಳು ವಿರಳಗೊಳ್ಳುತ್ತ ಹೋಯಿತು. ಕನ್ನಡಿಗ ಕೆ.ಎಲ್‌. ರಾಹುಲ್‌ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಭಾರತದ ಬ್ಯಾಟಿಂಗ್‌ ಬ್ಯಾಟರಿಯು ಖಾಲಿ ಆಯಿತು.

Advertisement

ಹಾಗೆಯೇ ಮತ್ತೆ ಭಾರತದ ಬ್ಯಾಟಿಂಗ್‌ ಇನ್ಸಿಂಗ್‌ನಲ್ಲಿ ಸಂಭ್ರಮಿಸುವಂತಹದ್ದು ಘಟಿಸಲೂ ಇಲ್ಲ. ಹಾಗೆಯೇ ಬೌಲಿಂಗ್‌ನಲ್ಲಿ ಮೊದಲ ಮೂರು ವಿಕೆಟ್‌ಗಳನ್ನು ಬೇಗನೆ ಕಿತ್ತುಕೊಂಡ ಭಾರತ ನಿರೀಕ್ಷೆಯ ಅಲೆಯನ್ನೇನೋ ಸೃಷ್ಟಿಸಿತು. ಆದರೆ, ಲ್ಯಾಬುಶೇನ್‌ ಮತ್ತು ಟ್ರಾವೇಸ್‌ ಹೆಡ್‌ ಅವರ ಸಮಯೋಚಿತ ಆಟದಲ್ಲಿ ಒಂದೊಂದು ರನ್‌ ಕಾಂಗರೂಗಳ ಜೋಳಿಗೆ ಸೇರುತ್ತ, ಪಂದ್ಯ ಭಾರತ ತಂಡದಿಂದ ದೂರ ಸರಿಯುತ್ತ ಸಾಗುತ್ತಿದ್ದಂತೆ ಬೆಂಗಳೂರಿನಲ್ಲಿಯೂ ನೀರವ ಮೌನ ನೆಲೆಸಿತ್ತು.

ಗೆಲುವಿನ ಸಂಭ್ರಮವನ್ನು ಆಚರಿಸಲು ಪ್ಲಾನ್‌ ಮಾಡಿದ್ದ ಕ್ರಿಕೆಟ್‌ ಆಭಿಮಾನಿಗಳಲ್ಲಿ ಸೋಲಿನ ಕಾರ್ಮೋಡ ಆವರಿಸಿತು. ತಂಡದ ಸೋಲಿಗೆ ನಾನಾ ವಿಮರ್ಶೆಗಳು ಪ್ರಾರಂಭಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next