Advertisement

ಮತ್ತೆ ಹೈದರಾಬಾದ್ ತಂಡದ ನಾಯಕತ್ವಕ್ಕೆ ಅಭಿಮಾನಿಯ ಬೇಡಿಕೆ! ಖಡಕ್ ಉತ್ತರ ನೀಡಿದ ವಾರ್ನರ್

12:03 PM Nov 26, 2021 | Team Udayavani |

ಮುಂಬೈ: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಜೋರಾಗಿಯೇ ತಯಾರಿ ನಡೆಯುತ್ತಿದೆ. ತಂಡಗಳು ಮತ್ತು ರಿಟೆನ್ಶನ್ ಪಟ್ಟಿ ತಯಾರಿಕೆಯಲ್ಲಿ ತೊಡಗಿದೆ. ನವೆಂಬರ್ 30ರೊಳಗೆ ಪಟ್ಟಿ ನೀಡುವಂತೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.

Advertisement

ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣದಿಂದ ಮೊದಲ ನಾಯಕತ್ವ ನಂತರ ತಂಡದಿಂದಲೇ ಹೊರಬಿದ್ದ ಸನ್ ರೈಸರ್ಸ್ ಹೈದರಾಬಾದ್ ನ ಡೇವಿಡ್ ವಾರ್ನರ್ ಗೆ ಈಗ ಭರ್ಜರಿ ಬೇಡಿಕೆಯಿದೆ. ವಾರ್ನರ್ ಗೆ ಗಾಳ ಹಾಕಲು ಹಲವು ತಂಡಗಳು ಸಿದ್ದತೆ ನಡೆಸುತ್ತಿದೆ.

ಇದನ್ನೂ ಓದಿ:ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಮೆರೆದಾಡಿದ ಶ್ರೇಯಸ್ ಅಯ್ಯರ್

ಆದಾಗ್ಯೂ, ವಾರ್ನರ್‌ಗೆ ಸಂಬಂಧಿಸಿದಂತೆ, ಅವರು ಎಸ್ ಆರ್ ಎಚ್ ತಂಡದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇನ್ಸ್ಟಾ ಗ್ರಾಮ್ ನಲ್ಲಿ ‘WeAreOrangeArmy’ ಎಂಬ ಹೆಸರಿನ ಫ್ಯಾನ್ ಪೇಜ್ ನಲ್ಲಿ, ಅಭಿಮಾನಿಯೊಬ್ಬರು ಟಾಮ್ ಮೂಡಿ ಕೋಚ್ ಮತ್ತು ವಾರ್ನರ್ ತಂಡದ ನಾಯಕತ್ವದ ನಿರೀಕ್ಷೆಯನ್ನು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ಉತ್ತರಿಸಿದ ವಾರ್ನರ್ “ ನೋ, ಥ್ಯಾಂಕ್ಸ್’ ಎಂದು ನಯವಾಗಿಯೇ ನಿರಾಕರಿಸಿದ್ದಾರೆ.

Advertisement

2011ರ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕಳಪೆ ಪ್ರದರ್ಶನ ನೀಡಿತ್ತು. ಮೊದಲಾರ್ಧದಲ್ಲಿ, ಏಳರಲ್ಲಿ ಐದು ಪಂದ್ಯಗಳಲ್ಲಿ ಸೋತ ನಂತರ, ವಾರ್ನರ್ ಅವರನ್ನು ತಂಡದ ನಾಯಕತ್ವದಿಂದ ತೆಗೆದುಹಾಕಲಾಯಿತು. ಕೇನ್ ವಿಲಿಯಮ್ಸನ್ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಆದರೆ ತಂಡವು ಟೇಬಲ್‌ನ ಕೆಳಭಾಗಕ್ಕೆ ಜಾರಿದ್ದರಿಂದ ಫ್ರಾಂಚೈಸಿಯ ಅದೃಷ್ಟವನ್ನು ತಿರುಗಿಸುವಲ್ಲಿ ನಾಯಕತ್ವ ಬದಲಾವಣೆಯು ಹೆಚ್ಚು ಸಹಾಯ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next