Advertisement
ಜಾನಿ ರಾಕೆಟ್ಸ್ ಅಮೆರಿಕದ ಸಾಂಪ್ರದಾಯಿಕ ಅಡುಗೆ ಶೈಲಿ ಮತ್ತು ರುಚಿಗೆ ಹೆಸರಾದ ರೆಸ್ಟೋರೆಂಟ್. 1986ರಲ್ಲಿ, ಲಾಸ್ ಎಂಜೆಲೀಸ್ ನಗರದಲ್ಲಿ ಮೊದಲ ರೆಸ್ಟೋರೆಂಟು ಶುರುವಾಗಿತ್ತು. ಸದ್ಯ ಪ್ರಪಂಚದಾದ್ಯಂತ 320ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲೂ ಗುಣಮಟ್ಟ, ಶುಚಿ, ರುಚಿ ಕಾಯ್ದಿರಿಸಿಕೊಳ್ಳುವಿಕೆ ಮತ್ತು ಗ್ರಾಹಕರ ಸೇವೆಗಾಗಿ ಜಾನಿ ರಾಕೆಟ್ಸ್ ಹೆಸರುವಾಸಿ.
ಮೊದಲಿಗೆ ಸ್ಟಾರ್ಟರ್ನಲ್ಲಿ ನೀರುಳ್ಳಿ ರಿಂಗ್ಸ್, ಚೀಸ್ ಫ್ರೈಯನ್ನು ಆರಿಸಿಕೊಳ್ಳಬಹುದು. ನಾನ್‌ವೆಜ್ ಪ್ರಿಯರಿಗೆ ಚಿಕನ್ ಖಾದ್ಯಗಳೂ ಇಲ್ಲಿ ಲಭ್ಯ. ನಂತರ ಇಲ್ಲಿನ ವೆಚಿಟೇರಿಯನ್ ಸಲಾಡ್‌ಗಳ ರುಚಿ ನೋಡಬಹುದು. ಎರಡು ಥರಹದ ಸಲಾಡ್‌ಗಳು ಇಲ್ಲಿ ಸಿಗುತ್ತವೆ. ಗಾರ್ಡನ್ ಸಲಾಡ್ ಮತ್ತು ಸೀಸರ್ ಸಲಾಡ್‌ಗಳು. ಎರಡರಲ್ಲೂ ಬೇರೆ ಬೇರೆ ಬಗೆಯ ತರಕಾರಿಗಳನ್ನು ಹಾಕಲಾಗಿರುತ್ತದೆ. ನಿಮಗಿಷ್ಟವಾದುದನ್ನು ನೀವು ಆರಿಸಿಕೊಳ್ಳಬಹುದು. ನಿಮಗೆ ಇಲ್ಲಿನ ಸಲಾಡ್ ಕೌಂಟರ್ ಬಗ್ಗೆ ಹೇಳಲೇಬೇಕು. ಅಲ್ಲಿನ ಎರಡು ಸಲಾಡ್‌ಗಳು ಇಷ್ಟವಾಗದಿದ್ದರೆ ನ ಈವೇ ಖುದ್ದು ಇಲ್ಲಿನ ಸಲಾಡ್ ಕೌಂಟರ್‌ಗೆ ತೆರಳಿ ನಿಮಗೆ ಬೇಕಾದ ಹಾಗೆ ಸಲಾಡ್‌ಗಳನ್ನು ತಯಾರಿಸಿ ಸೇವಿಸಬಹುದು. ಈಗ ಬರ್ಗರ್ ಸರದಿ. ಇಲ್ಲಿ ಜಾನಿ ರಾಕೆಟ್ಸ್‌ನ ಸಾಂಪ್ರದಾಯಿಕ ಬರ್ಗರ್ ಶ್ರೇಣಿಯಲ್ಲಿ ಹತ್ತಾರು ಥರದ ಬರ್ಗರ್‌ಗಳು ಸಿಗುತ್ತವೆ. ಜೊತೆಗೆ ನಿಮಗೆ ಬೇಕೆನಿಸಿದ ಹಾಗೆ ಬರ್ಗರ್‌ಅನ್ನು ತಯಾರಿಸಲು ಸೂಕ್ತ ನಿರ್ದೇಶನಗಳನ್ನು ನೀಡಬಹುದು. ನೀವು ಇಷ್ಟಪಟ್ಟ ರೀತಿಯಲ್ಲೇ ಬರ್ಗರ್ ತಯಾರಾಗಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಂದಿರುತ್ತದೆ. ಬರ್ಗರ್‌ನಲ್ಲಿ ರೆಗ್ಯುಲರ್ ಮತ್ತು ಲಾರ್ಜ್ ಎಂದು ಎರಡು ಗಾತ್ರಗಳಿವೆ. ಮಕ್ಕಳು ಪುಟ್ಟದಾದ ಮಿನಿ ಆವೃತ್ತಿಯ ಬರ್ಗರ್‌ಅನ್ನು ಸೇವಿಸಬಹುದು.
Related Articles
Advertisement
ಕಡೆಯದಾಗಿ ಪುಟ್ಟ ಗಾಜಿನ ಗ್ಲಾಸ್‌ನಲ್ಲಿ ನೀಡಲಾಗುವ ಡೆಸರ್ಟ್ ಸೇವಿಸಿದರೆ ಅಲ್ಲಿಗೆ ಜಾನಿ ರಾಕೆಟ್‌ನ ಮೀಲ್ ಕಂಪ್ಲೀಟ್ ಆದಂತೆಯೇ. ಇಲ್ಲಿನ ಖಾದ್ಯಗಲನ್ನು ಪ್ರತ್ಯೇಕವಾಗಿಯೂ ಆರ್ಡರ್ ಮಾಡಬಹುದಾಗಿದೆ, ಅಥವಾ ಮೀಲ್ಸ್ ಅನ್ನೂ ತೆಗೆದುಕೊಳ್ಳಬಹುದು. ಮೀಲ್ಸ್‌ನಲ್ಲಿ ಮೇಲೆ ವಿವರಿಸಿದ ಖಾದ್ಯಗಳೆಲ್ಲವೂ ಒಳಗೊಂಡಿರುತ್ತದೆ. ಮೀಲ್ಸ್‌ನ ವೈಶಿಷ್ಟéವೆಂದರೆ ಅನ್‌ಲಿಮಿಟೆಡ್ ಬರ್ಗರ್‌ಗಳು ಮತ್ತು ಶೇಕ್‌ಗಳನ್ನು ಸೇವಿಸುವ ಭರ್ಜರಿ ಅವಕಾಶ! ಒಂದೇ ಕಂಡೀಷನ್ ಎಂದರೆ ಮೀಲ್ಸನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಂತಿಲ್ಲ. ಒಬ್ಬರೇ ಸೇವಿಸಬೇಕು!
ಗ್ರಾಹಕ ಸ್ನೇಹಿ ಸಿಬ್ಬಂದಿಇಷ್ಟೆಲ್ಲಾ ಹೇಳಿ ಜಾನಿ ರಾಕೆಟ್ಸ್‌ನ ಗ್ರಾಹಕ ಸೇವೆಯ ಕುರಿತು ಹೇಳದಿದ್ದರೆ ಅಪೂರ್ಣವಾದೀತು. ಮೊದಲ ಬಾರಿ ಭೇಟಿ ನೀಡಿದ ಗ್ರಾಹಕರು ಇಲ್ಲಿನ ಮೆನು ನೋಡಿ ಗಾಬರಿ ಬೀಳುವ ಅಗತ್ಯವಿಲ್ಲ. ಎಲ್ಲಿ ತಮ್ಮನ್ನು ಗುಗ್ಗುಗಳೆಂದುಕೊಳ್ಳುತ್ತಾರೋ ಎನ್ನುವ ಭಯವೂ ಬೇಡ. ಇಲ್ಲಿನ ಸಿಬ್ಬಂದಿ ವರ್ಗ ನಿಜಕ್ಕೂ ಗ್ರಾಹಕ ಸ್ನೇಹಿ. ಏನಾದರೂ ಮಾಹಿತಿ ನೇರವಾಗಿ ಅವರಲ್ಲೇ ಕೇಳಬಹುದು. ಅವರು ನಗುಮುಖದಂದಲೇ ಮಾಹಿತಿ ಒದಗಿಸುತ್ತಾರೆ. ಇಲ್ಲಿನ ನೌಕರರು ಹಸನ್ಮುಖೀಗಳು. ಎಂಥಹುದೇ ಬಿಗು ಪರಿಸ್ಥಿತಿಯನ್ನು ತಿಳಿಯಾಗಿ ನಿರ್ವಹಿಸಿ ಗ್ರಾಹಕರ ಮೆಚ್ಚುಗೆ ಪಡೆಯಬಲ್ಲರು. ಆವಾಗಾವಾಗ ಇಲ್ಲಿನ ಸಿಬ್ಬಂದಿ ವರ್ಗ ರೆಸ್ಟೋರೆಂಟಿನ ಕಳೆ ಹೆಚ್ಚಿಸಲು, ಸಾಮೂಹಿಕವಾಗಿ ಡ್ಯಾನ್ಸ್ ಮಾಡುವುದೂ ಇದೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಬರ್ಗರ್ ರುಚಿ ಮತ್ತು ಅಮೆರಿಕನ್ ಅನುಭವವನ್ನು ಪಡೆಯಲಿಚ್ಛಿಸುವವರು ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು. ಇಲ್ಲಿಗೆ ಬಂದು ಬರ್ಗರ್ ಮತ್ತು ತಂಬಿಗೆಯಂಥ ದೊಡ್ಡ ಗಾತ್ರದ ಗಾಜಿನ ಲೋಟದಲ್ಲಿ ನೀಡುವ ರುಚಿ ರುಚಿಯಾದ ಮಿಲ್ಕ್ಶೇಕ್ ಸೇವಿಸದೇ ಇರಬೇಡಿ. ಆರ್ಡರ್ ಅನ್ನು ಗ್ರಾಹಕರ ಮುಂದಿರಿಸುವಾಗ ಖಾಲಿ ಬಿಳಿ ಪ್ಲೇಟ್ ಮೇಲೆ ಕೆಚಪ್‌ನಲ್ಲಿ ಸೆ¾„ಲಿಯನ್ನು ಬಿಡಿಸುವುದು ಜಾನಿ ರಾಕೆಟ್ಸ್‌ನ ಸಿಗ್ನೇಚರ್ ಸ್ಟೈಲ್. ಆಹಾರಪ್ರಿಯರಿಗೆ ನೀರೂರಿಸುವಂಥ ಸುದ್ದಿ. ಇಲ್ಲಿ ಅನ್‌ಲಿಮಿಟೆಡ್ ಮೀಲ್ಸ್ ಸಿಗುತ್ತೆ. ಎಷ್ಟು ಬೇಕಾದರೂ ತಿನ್ನಬಹುದು. ಆದರೆ, ಒಬ್ಬರೇ ತಿನ್ನಬೇಕು! ಜಾನಿ ರಾಕೆಟ್ಸ್ ಮೊದಲ ಬಾರಿಗೆ ಅಮೆರಿಕದಲ್ಲಿ ಸಾಮಾನ್ಯವಾದ ಡ್ಯಾನ್ಸ್ ಕಲ್ಚರ್ ಅನ್ನು ಬೆಂಗಳೂರಿಗೆ ಪರಿಚಯಿಸುತ್ತಿದೆ. ಸಿಬ್ಬಂದಿಗಳಿಗೆ ಮನಸ್ಸು ಬಂದಾಗ ಡ್ಯಾನ್ಸ್ ನಂಬರ್ ಅನ್ನು ಸ್ಪೀಕರ್‌ನಲ್ಲಿ ಹಾಕುತ್ತಾರೆ. ಅಷ್ಟೇ ಅಲ್ಲ, ಅಲ್ಲಿನ ಸಿಬ್ಬಂದಿ ವರ್ಗ ಆ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ. ಇಲ್ಲಿನ ಓಪನ್ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಸಹ ಒಮ್ಮೆ ಕೆಲಸವನ್ನು ಬದಿಗಿಟ್ಟು ಹಾಡಿಗೆ ಸ್ಟೆಪ್ಪು ಹಾಕುತ್ತಾರೆ. ಮುಂಚಿತವಾಗಿಯೇ ತರಬೇತಿ ನೀಡಿರುವುದರಿಂದ ಡ್ಯಾನ್ಸ್ ಪ್ರದರ್ಶನ ಗ್ರಾಹಕರ ಮನರಂಜಿಸುವುದು ಖಂಡಿತ.