Advertisement

ಕೌಟುಂಬಿಕ ಕಲಹ; 9 ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ ; ಪತಿ ಪೊಲೀಸರ ವಶಕ್ಕೆ

10:11 AM Oct 20, 2022 | Team Udayavani |

ಮಹದೇವಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಅಪಾರ್ಟ್​ಮೆಂಟ್​ ಕಟ್ಟಡದ 9 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ದಿಶಾ ಅಪಾರ್ಟ್​ಮೆಂಟ್ ನ ನಿವಾಸಿ ಉಪಾಸನಾ ರಾವತ್​ (30) ಮೃತ ದುರ್ದೈವಿ.

ಈ ಘಟನೆ ಸಂಬಂಧ ಮೃತಳ ಪತಿ ನಿಹಾರ್​ ರಂಜನ್​ ರಾವತ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಕೌಟುಂಬಿಕ ವಿಚಾರದಿಂದ ಜಗಳವಾಗಿ ಇದರಿಂದ ಬೇಸತ್ತು, ಅಪಾರ್ಟ್​ಮೆಂಟ್​ ಕಟ್ಟಡದ 9 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಪೊಲೀಸರು ತಿಳಿಸಿದ್ಧಾರೆ.

9 ವರ್ಷಗಳ ಹಿಂದೆ ನಿಹಾರ್​ ರಂಜನ್​ ರಾವತ್ ಹಾಗೂ ಉಪಾಸನಾ ರಾವತ್ ವಿವಾಹವಾಗಿದ್ದು, ದಂಪತಿ ಅಪಾರ್ಟ್​ಮೆಂಟ್ ನಲ್ಲಿ ನೆಲೆಸಿದ್ದರು. ಇಬ್ಬರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದರು. ಸಂತಾನ ಇಲ್ಲದ ಕಾರಣ ಇಬ್ಬರ ಮಧ್ಯೆ ಮನಸ್ತಾಪ ಬಂದಿದ್ದು, ವಿಚ್ಷೇದನ ಪಡೆಯಲು ಮುಂದಾಗಿದ್ದರು. ಈ ಹಿನ್ನೆಲೆ ಉಪಾಸನಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next