ಬೆಂಗಳೂರು: ಸೋಲದೇವನಹಳ್ಳಿ ಬಳಿ ನಡೆದ ಶೂಟೌಟ್‌ನಲ್ಲಿ ವಕೀಲನ ಹತ್ಯೆ ಮತ್ತು ಶ್ರುತಿಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲೀಪುರ ನಿವಾಸಿ ರಾಜೇಶ್‌ನನ್ನು ಐದು ದಿನಗಳ ಕಾಲ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
“ನನ್ನ ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಿದ್ದೆ. ಚೆನ್ನಾಗಿಯೇ ನೋಡಿಕೊಂಡಿದ್ದೆ. ಆಕೆ ನನಗೆ ಮೋಸ ಮಾಡಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ನಮ್ಮ ಮನೆತನದ ಗೌರವ ಮಣ್ಣುಪಾಲು ಮಾಡಿದ್ದಳು. ಅಲ್ಲದೆ, ರೆಡ್ ಹ್ಯಾಂಡ್ ಆಗಿ ಮತ್ತೂಬ್ಬ ಪುರಷನೊಂದಿಗೆ ಇರುವುದನ್ನು ಕಂಡು ಕೋಪದಿಂದ ಗುಂಡು ಹಾರಿಸಿದ್ದಾಗಿ ತನಿಖಾಧಿಕಾರಿಗಳ ಬಳಿ ರಾಜೇಶ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಆತ್ಮಹತ್ಯೆಗೆ ಶರಣಾಗಿರುವ ರಾಜೇಶ್‌ನ ಪತ್ನಿ ಶ್ರುತಿ ಗೌಡ, ವಕೀಲ ಅಮಿತ್ ಜತೆ ಸಂಪರ್ಕ ಸಾಧಿಸುವ ಮುನ್ನ ಮತ್ತೂಬ್ಬರೊಂದಿಗೆ ಸಂಬಂಧ ಹೊಂದಿದ್ದಳು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಮಿತ್ ಪರಿಚಯಕ್ಕೂ ಮೊದಲು ನೆಲಮಂಗಲದ ವ್ಯಕ್ತಿ ಜತೆ ಶ್ರುತಿ ಸಂಬಂಧ ಹೊಂದಿದ್ದರು. ಇಬ್ಬರ ನಡುವೆ ಅತಿಯಾದ ಸ್ನೇಹವಿತ್ತು.
ಬಳಿಕ ಶ್ರುತಿ ಆತನಿಂದ ದೂರವಾಗಿದ್ದು, ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ವಕೀಲ ಅಮಿತ್ ಪರಿಚಯವಾಗಿ, ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಅಮಿತ್ ಹತ್ಯೆಗೆ ರಾಜೇಶ್ ಉಪಯೋಗಿಸಿದ್ದ ಪಿಸ್ತೂಲ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪಿಸ್ತೂಲಿನ ಟ್ರಿಗರ್ ಮೇಲೆ ರಾಜೇಶ್‌ನ ಬೆರಳಚ್ಚು ಇರುವುದು ಖಚಿತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ತಾನೇ ಕೊಲೆ ಮಾಡಿದ್ದಾಗಿ ರಾಜೇಶ್ ತಂದೆ ಗೋಪಾಲಕೃಷ್ಣ ಹೇಳಿಕೆ ನೀಡುತ್ತಿದ್ದರು. ತನಿಖಾಧಿಕಾರಿಗಳು ಗೋಪಾಲಕೃಷ್ಣ ಅವರ ಕೈಗೆ ಪಿಸ್ತೂಲ್ ನೀಡಿ ಶೂಟ್ ಮಾಡಿದ್ದು ಹೇಗೆಂದು ಕೇಳಿದಾಗ ಅವರಿಗೆ ಪಿಸ್ತೂಲ್ ಹಿಡಿಯುವ ಪ್ರಾಥಮಿಕ ಜ್ಞಾನವೂ ಇಲ್ಲದಿರುವುದು ತಿಳಿಯಿತುೆಂದು ಪೊಲೀಸರು ತಿಳಿಸಿದ್ದಾರೆ.