ಶಿವರಾಜ್‌ಕುಮಾರ್ ನಟನೆಯ “ಬೈರಾಗಿ’ ಚಿತ್ರ ಬಿಡುಗಡೆಯಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಅದರಲ್ಲೂ ಚಿತ್ರ ಫ್ಯಾಮಿಲಿ ಆಡಿಯನ್ಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.
ಮಾಸ್ ಜೊತೆಗೆ ಕ್ಲಾಸ್ ಅಂಶಗಳನ್ನು ಹೊಂದಿ ರುವ ಈ ಚಿತ್ರದಲ್ಲಿ ಫ್ಯಾಮಿಲಿ ಆಡಿಯನ್ಸ್ ಎಂಜಾಯ್ ಮಾಡುವ ಸನ್ನಿವೇಶಗಳು ಸಾಕಷ್ಟಿರುವುದರಿಂದ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ.
ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರಿಗೆ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರ ಸಿಕ್ಕಿದ್ದರಿಂದ ಮಾಸ್ ಹಾಗೂ ಕ್ಲಾಸ್ ಅಂಶಗಳಲ್ಲಿ ಶಿವಣ್ಣ ಗಮನ ಸೆಳೆದಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ ತಿರುಗಿ ಬಿದ್ದರೆ ಏನಾಗುತ್ತದೆ ಎಂಬ ಅಂಶ ಒಂದು ಕಡೆಯಾದರೆ, ಅದೇ ವ್ಯಕ್ತಿಯ ಹೃದಯ ವೈಶಾಲ್ಯತೆಯ ಸುತ್ತ ಈ ಸಿನಿಮಾ ಸಾಗುತ್ತದೆ. ಈ ಹಾದಿಯಲ್ಲಿ ಸಾಕಷ್ಟು ಸನ್ನಿವೇಶಗಳು ಜರುಗುತ್ತವೆ, ಅದಕ್ಕೆ ನಾಯಕ ಹೇಗೆ ಪ್ರತಿಕ್ರಿಯಿಸುತ್ತಾನೆ, ಆತ ಅದನ್ನು ನಿಭಾಹಿಸುವ ರೀತಿ ಹೇಗಿದೆ ಎಂಬ ಅಂಶದೊಂದಿಗೆ ಸಾಗುವ ಸಿನಿಮಾ ಇದಾಗಿದೆ.
ಇದನ್ನೂ ಓದಿ:ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ತೋತಾಪುರಿ’ ಸೆ.30ಕ್ಕೆ ಬಿಡುಗಡೆ
Related Articles
ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡುವ ವಿತರಕ ಜಗದೀಶ್ ಗೌಡ, “ಫಸ್ಟ್ ಶೋನಿಂದಲೇ ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ. ಅದರಲ್ಲೂ ವೀಕೆಂಡ್‌ನಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಇದ್ದು, ಫ್ಯಾಮಿಲಿ ಆಡಿಯನ್ಸ್ ಈ ಚಿತ್ರವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ’ ಎನ್ನುತ್ತಾರೆ. ಚಿತ್ರದಲ್ಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತವಿದೆ.