Advertisement

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆ

04:51 PM Dec 05, 2021 | Team Udayavani |

ಪಣಜಿ: “ನೊ ಮಾಸ್ಕ್ ನೊ ಟೋಕನ್” ನಿಯಮದ ಅಡಿಯಲ್ಲಿ ದೂದ್ ಸಾಗರ್ ಪ್ರವಾಸೋದ್ಯಮ ನಡೆಸಲಾಗುತ್ತಿದ್ದು ಕೋವಿಡ್-19 ಎಲ್ಲ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದ್ದು, ದೂದ್ ಸಾಗರ್ ಪರಿಸರ ಮತ್ತು ಕುಳೆಯಲ್ಲಿ ಕರೋನಾ ಸೋಂಕು ಹರಡುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ದೂದ್ ಸಾಗರ್ ಟೂರ್ ಆಪರೇಟರ್ಸ್ ಸಂಘಟನೆ ಕುಳೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

Advertisement

ಕುಳೆಯಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಕರೋನಾ ಸೋಂಕಿತರು ಪತ್ತೆಯಾಗಿದ್ದರೂ ಕೂಡ, ದೂದ್ ಸಾಗರ್ ಜೀಪ್ ಪ್ರವಾಸೋದ್ಯಮಕ್ಕೆ ಯಾವುದೇ ಸಂಬಂಧವಿಲ್ಲ. ಅಸೋಸಿಯೇಶನ್ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜೀಪ್‍ನಲ್ಲಿ ಸ್ಯಾನಿಟೈಜ ರ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೀಪ್ ಚಾಲಕರಿಗೆ ನೆಗಡಿ-ಜ್ವರ ಕಂಡುಬಂದರೆ ಬದಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಗತ್ಯಬಿದ್ದರೆ ಜೀಪನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ದೂದ್ ಸಾಗರ್ ಪ್ರವಾಸೋದ್ಯಮ ಸಂಘಟನೆ ಹೀಗೆ ಹಲವು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ದಿಲೀಪ ಮಯೇಕರ್ ಮಾಹಿತಿ ನೀಡಿದರು.

ಗೋವಾದಲ್ಲಿ ಪ್ರವಾಸೋದ್ಯಮವು ಒಂದು ಪ್ರಮುಖ ಉದ್ಯೋಗವಾಗಿದೆ. ಕರೋನಾ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷ ಎಲ್ಲ ಉದ್ಯೋಗಗಳಿಗೂ ಭಾರಿ ಪೆಟ್ಟು ಬಿದ್ದಿದೆ. ಅದರಲ್ಲಿದೂದ್ ಸಾಗರ್ ಪ್ರವಾಸೋದ್ಯಮವೂ ಒಂದು. ಇಂತಹ ಸಂದರ್ಭದಲ್ಲಿ ಅಪಪ್ರಚಾರ ಮಾಡಿ ತಪ್ಪು ಕಲ್ಪನೆ ಮೂಡಿಸುವುದು ಸರಿಯಲ್ಲ. ಕೋವಿಡ್‍ನ ಎಲ್ಲ ನಿಯಮಗಳನ್ನು ಪಾಲನೆ ಮಾಡಿಯೇ ದೂದ್ ಸಾಗರ್ ಪ್ರವಾಸೋದ್ಯಮ ನಡೆಸಲಾಗುತ್ತಿದೆ ಎಂದು ದೂಧಸಾಗರ ದಿಲೀಪ ಮಯೇಕರ್ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next