Advertisement
ಬುಧವಾರ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, 1936 ರಲ್ಲಿ ಮುಸ್ಲಿಂ ಲೀಗ್ ಮ್ಯಾನಿಫೆಸ್ಟೋ ಹೇಳಿದಂತೆ 2024 ರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇದೆ. ಯಾವ ವ್ಯತ್ಯಾಸ ಇಲ್ಲ. ಪರ ದೇಶದಲ್ಲಿ ಕಲಿತ ಮುಸ್ಲಿಂ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕೊಡುತ್ತಿರುವುದನ್ನು ನೋಡಿದರೆ ಇದು ಭಾರತದ ಕಾಂಗ್ರೆಸ್ ಪ್ರಣಾಳಿಕೆಯಾ ಗೊತ್ತಾಗುತ್ತಿಲ್ಲ ಎಂದರು.
Related Articles
Advertisement
ಬಿಜೆಪಿ ಆಡಳಿತ ಇದ್ದಾಗ ಹಣದುಬ್ಬರ ಕಡಿಮೆ ಇದ್ದವು. 60 ವರ್ಷದಲ್ಲಿ ಮಾಡಲಾಗದ್ದನ್ನು ಈಗ ಮಾಡುತ್ತೇನೆ ಎಂದಿದೆ. ಕಾಂಗ್ರೆಸ್ ಆಳ್ವಿಕೆ 60, ಹಾಗೂ 2004 ರಿಂದ 14 ರತಕ ಅಭಿವೃದ್ದಿ ಶೇ. 1.19 ದರ ಇತ್ತು. ಬಿಜೆಪಿಯು ಕೇವಲ ಹತ್ತು ವರ್ಷದಲ್ಲಿ 26 ಶೇ.ಅಭಿವೃದ್ದಿ ಸಾಧಿಸಿದೆ ಎಂದೂ ವಿವರಿಸಿದರು.
ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪ್ರಣಾಳಿಕೆ ಆಧಾರದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಆಶ್ವಾಸನೆ ದಾರಿ ತಪ್ಪಿಸುತ್ತಿದೆ ಎಂದ ಅವರು, ಏ.12ಕ್ಕೆ ಕಾಗೇರಿ ನಾಮಪತ್ರ ಸಲ್ಲಿಸಲಿದ್ದು, ಸುನೀಲ್ ಕುಮಾರ್, ಪ್ರಮೋದ್ ಸಾವಂತ್, ದಿನಕರ ಶೆಟ್ಟಿ, ಖಾನಾಪುರ ಶಾಸಕರು ಇತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಕಾರವಾರದ ದೈವಜ್ಞ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಟು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯಕ, ಖಜಾಂಚಿ ರಮಾಕಂತ ಭಟ್ಟ, ರವಿಚಂದ್ರ ಶೆಟ್ಟಿ, ಆರ್.ವಿ.ಚಿಪಗಿ, ಶ್ರೀರಾಮ ನಾಯ್ಕ ಇದ್ದರು.
ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬಿಗ್ ಝೀರೋ ಆಗಲಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಪ್ರತಿ ಪಕ್ಷವಾಗಿಯೂ ಉಳಿಯುವದಿಲ್ಲ.
ಮುಸ್ಲಿಂ ಲೀಗ್ ಮಾಡದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಯಾರಾದರೂ ಕಾಂಗ್ರೆಸ್ ಪ್ರಣಾಳಿಕೆ ನಂಬಿದರೆ ಅದರಷ್ಟು ಮೂರ್ಖರಿಲ್ಲ. -ಹರಿಪ್ರಕಾಶ ಕೋಣೆಮನೆ, ರಾಜ್ಯ ವಕ್ತಾರ
ಶಾಸಕ ಹೆಬ್ಬಾರ್ ಅವರು ರಾಜಕೀಯ ತೀರ್ಮಾನ ಪಡೆಯಲು ಯಾಕೆ ಮೀನ ಮೇಷ ಮಾಡುತ್ತಿದ್ದಾರೆ. ಯಾಕೆ ವಿಳಂಬ ಆಗುತ್ತಿದೆ. ಬಿಜೆಪಿಗೆ ಕಾರ್ಯಕರ್ತರು ಮುಖ್ಯ. ವ್ಯಕ್ತಿಗೋಸ್ಕರ ಕಾರ್ಯಕರ್ತರ ಬಲಿ ಇಲ್ಲ. ಪಕ್ಷ, ಸಂಘಟನೆಗೆ ನಮ್ಮ ದೇವ ದುರ್ಲಭ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ. – ಹರಿಪ್ರಕಾಶ ಕೋಣೆಮನೆ, ವಕ್ತಾರ