ಮಂಗಳೂರು: ನಗರದ ಫಳ್ನೀರ್ ನಲ್ಲಿರುವ ಹೋಟೆಲೊಂದರ ಸಿಬ್ಬಂದಿಯ ಮೇಲೆ ಕಳೆದ ವರ್ಷದ ಅ.30ರಂದು ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಮುಕ್ಕಚೇರಿ ನಿವಾಸಿ ಮಹಮ್ಮದ್ ಸಮೀರ್ ಯಾನೆ ಸಮೀರ್ ಕಡಪರ ಯಾನೆ ರೋಬರ್ಟ್ (29 ವ) ಮತ್ತು ಮೇಲಂಗಡಿ ನಿವಾಸಿ ಮೊಹಮ್ಮದ್ ಅರ್ಫಾನ್ (23 ವ) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ಕಳೆದ ವರ್ಷದ ಅ.30ರಂದು ಸಂಜೆ 5 ಗಂಟೆಗೆ ಫಳ್ನೀರ್ ನಲ್ಲಿರುವ ಎಂಎಪ್ ಸಿ ಹೋಟೆಲ್ ಗೆ ಆರೋಪಿಗಳಾದ ಸಮೀರ್, ಅರ್ಫಾನ್, ಇಜಾಜ್ ಮೊಹಮ್ಮದ್, ಜುನೈದ್ ಬಶೀರ್ ಹಾಗೂ ಅಬೂಬ್ಬಕರ್ ಸಿದ್ದಿಕಿ ಉಪಹಾರ ಸೇವಿಸಲು ಹೋಗಿದ್ದರು. ಈ ವೇಳೆ ಸಮೋಸಾ ಬಿಸಿಯಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಸೊತ್ತುಗಳನ್ನು ಹಾನಿ ಮಾಡಿ, ಸಿಬ್ಬಂದಿಗಳಿಗೆ ಚೂರಿಯಿಂದ ತಿವಿದು ಕೊಲೆ ಮಾಡಲು ಯತ್ನಿಸಿ ಓಡಿ ಹೋದಾಗ, ಹೋಟೆಲ್ ಸಿಬ್ಬಂದಿಗಳು ಆರೋಪಿಗಳನ್ನು ಬೆನ್ನಟ್ಟಿದ್ದರು. ಈ ವೇಳೆ ಕಡಪರ ಸಮೀರ್ ಎಂಬಾತ ಹೋಟೆಲ್ ಸಿಬ್ಬಂದಿಯ ಮೇಲೆ ರಿವಾಲ್ವರ್ ನಿಂದ ಶೂಟ್ ಮಾಡಿ ಕೊಲೆಯತ್ನ ಮಾಡಿದ್ದ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ವೇಣೂರು: ಮನೆಯ ಪಕ್ಕಾಸಿಗೆ ಚೂಡಿದಾರ ಶಾಲು ಬಿಗಿದು ಯುವತಿ ಆತ್ಮಹತ್ಯೆ
ಪ್ರಕರಣದ ಆರೋಪಿಗಳಾದ ಇಜಾಜ್ ಮೊಹಮ್ಮದ್, ಜುನೈದ್ ಬಶೀರ್ ಮತ್ತು ಹಣದ ನೆರವು ನೀಡಿ ಆಶ್ರಯ ನೀಡಿದ್ದ ಹನೀಫ್, ಮೊಹಮ್ಮದ್ ಸತ್ತಾರ್, ಅಶ್ರಫ್, ಮೊಹಮ್ಮದ್ ಸಾದಿಕ್, ಶಾರೂಕ್, ಸಿದ್ದಿಕ್ ಮತ್ತು ಮೊಹಮ್ಮದ್ ಅಸ್ಕರ್ ನನ್ನು ಈಗಾಗಲೇ ಬಂಧಿಸಲಾಗಿದೆ.
ಇದೀಗ ಫೆ. 18ರಂದು ರಾತ್ರಿ ಉಳ್ಳಾಲದ ಕಡಪರ ನದಿ ಬಳಿ ಸಮೀರ್ ಮತ್ತು ಅರ್ಫಾನ್ ನನ್ನು ಬಂಧಿಸಿ, ಘಟನೆಗೆ ಬಳಸಿದ್ದ ರಿವಾಲ್ವರ್ ಮತ್ತು ಚೂರಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಹತ್ಯೆ ಕೇಸ್; ಗಲ್ಲುಶಿಕ್ಷೆಗೆ ಗುರಿಯಾದ ಶಬನಂ ಉತ್ತರಪ್ರದೇಶ ಗವರ್ನರ್ ಗೆ ಕ್ಷಮಾದಾನ ಅರ್ಜಿ
ಪ್ರಮುಖ ಆರೋಪಿಯಾದ ಸಮೀರ್ ಎಂಬಾತ ಉಳ್ಳಾಲಬೊಟ್ಟು ದಾವೂದ್ ಎಂಬಾತನ ಸಹಚರನಾಗಿದ್ದು, ಈತನ ಮೇಲೆ ನಾಲ್ಕು ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಇರ್ಫಾನ್ ವಿರುದ್ಧ ನಾಲ್ಕು ಕೊಲೆ ಯತ್ನ ಸೇರಿ ಆರು ಪ್ರಕರಣಗಳಿದೆ