ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 34ನೇ ಪುಣ್ಯಸ್ಮರಣೆಯನ್ನು ಜಿಲ್ಲಾದ್ಯಂತ ಸೋಮವಾರ ಸರಳವಾಗಿ ಆಚರಿಸಲಾಯಿತು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಟೌನ್ ಹಾಲ್ ಬಳಿಯ ಜಗಜೀವನರಾಂ ಅವರ ಪ್ರತಿಮೆಗೆ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಶಾಮ ನಾಟಿಕಾರ, ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷ ಗೋಪಿಕೃಷ್ಣ ಗುಡೇನ್ನವರ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಸೇನೆಯ ವತಿಯಿಂದ ಬಾಬು ಅವರ ಪ್ರತಿಮೆಗೆ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ವಿ.ಎಚ್. ಮಾಲಾರ್ಪಣೆ ಮಾಡಿದರು. ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ನಾಳಕರ್, ದಶರಥ ಕಲಗುರ್ತಿ, ಮರಲಿಂಗ ಅಣಗಿ, ಸಿದ್ದರಾಜ ಜಿನಕೇರಿ, ನಾಗಮ್ಮ ತಾರಫೈಲ್, ಬಸವರಾಜ ಇದ್ದರು. ಡಿಎಂಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ ಪುಷ್ಪನಮನ ಸಲ್ಲಿಸಿದರು.
ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ವತಿಯಿಂದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಎಸ್.ಕಟ್ಟಿಮನಿ, ದಶರಥ ಕಲಗುರ್ತಿ, ಬಂಡೇಶ ರತ್ನಡಗಿ, ರಾಹುಲ್ ಮೇತ್ರೆ, ಸಚಿನ್ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ ಗೌರವ ಸಮರ್ಪಿಸಿದರು.