Advertisement

ಅತೀ ವೇಗದಲ್ಲಿ ಸಾವಿರ ರನ್‌ ಫ‌ಖರ್‌ ಜಮಾನ್‌ ವಿಶ್ವದಾಖಲೆ

12:58 PM Jul 23, 2018 | Team Udayavani |

ಬುಲವಾಯೊ: ಪಾಕಿಸ್ಥಾನ ಕ್ರಿಕೆಟ್‌ ತಂಡದ ಆರಂಭಕಾರ ಫ‌ಖರ್‌ ಜಮಾನ್‌ ಮತ್ತೆ ಸುದ್ದಿಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊನ್ನೆಯಷ್ಟೇ ನಡೆದ 4ನೇ ಏಕದಿನ ಪಂದ್ಯದಲ್ಲಿ ಪಾಕ್‌ ಪರ ಮೊದಲ ದ್ವಿಶತಕ (ಅಜೇಯ 210) ಸಿಡಿಸಿದ್ದ ಜಮಾನ್‌ ರವಿವಾರ 5ನೇ ಪಂದ್ಯದಲ್ಲಿ 85 ರನ್‌ಗೆ ಔಟಾಗುವ ಮುನ್ನ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತೀ ವೇಗವಾಗಿ 1,000 ರನ್‌ ಗಳಿಸಿದ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಜಮಾನ್‌ ಕೇವಲ 18 ಇನಿಂಗ್ಸ್‌ನಲ್ಲಿ ಸಾವಿರ ರನ್‌ ಗಡಿ ದಾಟಿದರು. ಇದಕ್ಕೂ ಮುನ್ನ 21 ಇನಿಂಗ್ಸ್‌
ನಲ್ಲಿ ಈ ಸಾಧನೆ ಮಾಡಿದ್ದ ವೆಸ್ಟ್‌ ಇಂಡೀಸಿನ ವಿವಿಯನ್‌ ರಿಚರ್ಡ್ಸ್‌, ಇಂಗ್ಲೆಂಡಿನ ಕೆವಿನ್‌ ಪೀಟರ್‌ಸನ್‌, ಜೊನಾಥನ್‌ ಟ್ರಾಟ್‌, ಪಾಕಿಸ್ಥಾನದವರೇ ಆದ ಬಾಬರ್‌ ಆಜಂ ಮತ್ತು ದಕ್ಷಿಣ ಆಫ್ರಿಕಾದ ಕ್ವಿ ಂಟನ್‌ ಡಿ ಕಾಕ್‌ ಅವರ ಜಂಟಿ ದಾಖಲೆಯನ್ನು ಫ‌ಖರ್‌ ಜಮಾನ್‌ ಮುರಿದರು.

Advertisement

ಇದೇ ವೇಳೆ ಜಿಂಬಾಬ್ವೆ ಎದುರಿನ 5 ಪಂದ್ಯಗಳ ಸರಣಿಯಲ್ಲಿ ಫ‌ಖರ್‌ ಜಮಾನ್‌ ಒಟ್ಟು 505 ರನ್‌ ಪೇರಿಸಿದರು. ಇದರೊಂದಿಗೆ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಕ್ರಿಕೆಟಿಗನೋರ್ವ ಮೊದಲ ಬಾರಿಗೆ 500 ರನ್‌ ಬಾರಿಸಿದ ದಾಖಲೆಯನ್ನೂ ಸ್ಥಾಪಿಸಿದರು. ಜಿಂಬಾಬ್ವೆಯ ಹ್ಯಾಮಿಲ್ಟನ್‌ ಮಸಕಝ 467 ರನ್‌ ಪೇರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಪಾಕ್‌ ಕ್ಲೀನ್‌ಸ್ವೀಪ್‌ ಸಾಧನೆ
5ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 131 ರನ್ನುಗಳಿಂದ ಗೆದ್ದ ಪಾಕಿಸ್ಥಾನ ಆತಿಥೇಯ ಜಿಂಬಾಬ್ವೆ ವಿರುದ್ಧ ಕ್ಲೀನ್‌ಸಿÌàಪ್‌ ಸಾಧನೆಗೈದಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 4 ವಿಕೆಟಿಗೆ 364 ರನ್‌ ಒಟ್ಟುಗೂಡಿಸಿದರೆ, ಜಿಂಬಾಬ್ವೆ 4 ವಿಕೆಟ್‌ ನಷ್ಟಕ್ಕೆ 233 ರನ್‌ ಮಾಡಿ ಶರಣಾಯಿತು. ಅಜೇಯ 106 ರನ್‌ ಮಾಡಿದ ಬಾಬರ್‌ ಆಜಂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸತತ 2ನೇ ಶತಕ ಬಾರಿಸಿದ ಆರಂಭಕಾರ ಇಮಾಮ್‌ ಉಲ್‌ ಹಕ್‌ 110 ರನ್‌ ಮಾಡಿದರು. ಫ‌ಖರ್‌ ಜಮಾನ್‌ ಅವರಿಗೆ ಸರಣಿಶ್ರೇಷ್ಠ ಗೌರವ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next