Advertisement
ಇದು ಗಂಭೀರ ವಿಷಯವಾಗಿದೆ. ಆ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಂದ ಸ್ಪಷ್ಟೀಕರಣ ಕೇಳಲಾಗಿದೆ. ಅದು ಲಭಿಸಿದ ಬಳಿಕ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಇಂತಹ ದೂರುಗಳು ಇನ್ನೂ ಲಭಿಸದಲ್ಲಿ ಅದನ್ನು ಪರಿಶೀಲಿಸಲಾಗುವುದೆಂದು ಮೀಣಾ ತಿಳಿಸಿದ್ದಾರೆ. ಇದೇ ವೇಳೆ ಕಳ್ಳಮತ ನಡೆದಿದೆ ಎಂದು ಆರೋಪಿಸಿ ಎದ್ದ ದೂರುಗಳು ಕಣ್ಣೂರು ಜಿಲ್ಲೆಗೆ ಸೇರಿದ ಮತಗಟ್ಟೆಗಳಲ್ಲಾಗಿದೆ ಎಂದೂ, ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿರುವುದು ಕಣ್ಣೂರು ಜಿಲ್ಲಾಧಿಕಾರಿಗೆ ಸೇರಿದ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿ ಕಾಸರಗೋಡು ಚುನಾವಣಾಧಿಕಾರಿಯೂ ಆಗಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ಬಾಬು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಕಣ್ಣೂರು ಜಿಲ್ಲೆಯ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಸಿಬ್ಬಂದಿಗಳನ್ನು ನೇಮಿಸುವುದು ಕಣ್ಣೂರು ಜಿಲ್ಲಾಧಿಕಾರಿಯಾಗಿದ್ದಾರೆ. ಮಾತ್ರವಲ್ಲ ಕಣ್ಣೂರು ಜಿಲ್ಲೆಯ ಚುನಾವಣಾಧಿಕಾರಿಯೂ ಅವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ನಕಲಿ ಮತಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗಿರುವುದು ಅಲ್ಲಿನ ಜಿಲ್ಲಾಧಿಕಾರಿಯವರೇ ಆಗಿದ್ದಾರೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಳ್ಳಮತ ನಡೆದಿರುವ ಆರೋಪ ಕಣ್ಣೂರು ಜಿಲ್ಲೆಗೆ ಸೇರಿದ ಮತಗಟ್ಟೆಗಳಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಕಣ್ಣೂರು ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಕಣ್ಣೂರು ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಕಳ್ಳಮತ ಚಲಾಯಿಸಲಾಗಿರುವುದಾಗಿ ತೋರಿಸಿ ಪ್ರಕಟಿಸಲಾಗಿರುವ ವೀಡಿಯೋ ದೃಶ್ಯಗಳು ಅಂತಹ ಮತಗಟ್ಟೆಗಳ ವೆಬ್‌ಕಾಸ್ಟ್‌ನಿಂದ ಲಭಿಸಿದ ಅಸಲಿ ದೃಶ್ಯಗಳಾಗಿವೆ ಎಂದುಅಧಿಕಾರಿಗಳೂ ಸ್ಪಷ್ಟಪಡಿಸಿದ್ದಾರೆ.
ಕಲ್ಯಾಶೆÏàರಿ ವಿಧಾನಸಭಾ ಕ್ಷೇತ್ರದ 19 ನೇ ನಂಬ್ರದ ಮತಗಟ್ಟೆ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದ 136 ನೇ ನಂಬ್ರದ ಮತಗಟ್ಟೆಗಳಲ್ಲಿ ವ್ಯಾಪಕ ಕಳ್ಳಮತ ಚಲಾಯಿಸಿದ ವೆಬ್‌ಕಾಸ್ಟ್ ವೀಡಿಯೋ ದೃಶ್ಯಗಳನ್ನು ಕಾಂಗ್ರೆಸ್ ಹೊರ ತಂದಿದೆ. ಕಲ್ಯಾಶೆÏàರಿಯ ಪಿಲಾತ್ತರ ಎಯುಪಿ ಶಾಲೆಯ 19 ನೇ ಮತಗಟ್ಟೆಯಲ್ಲಿ ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ದೃಶ್ಯಗಳು ಗೋಚರಿಸಿದೆ. ನೇತಾರರೂ ಚಲಾಯಿಸುವ ಇತರ ಓಟು ಹೊಂದಿರುವ ಮತಗಟ್ಟೆಯಲ್ಲಿ ಪಂಚಾಯತ್ ಸದಸ್ಯ ಮತ್ತು ಸಿಪಿಎಂ ನ ಸ್ಥಳೀಯ ನೇತಾರ ಮತ ಚಲಾಯಿಸುವ ದೃಶ್ಯವೂ ಗೋಚರಿಸಿದೆ.