Advertisement

ನಕಲಿ ಮತದಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ಸುಪ್ರೀಂ ಅಭಿಪ್ರಾಯ

09:43 PM Jul 23, 2021 | Team Udayavani |

ನವ ದೆಹಲಿ: ಚುನಾವಣೆ ವೇಳೆ “ಮತಗಟ್ಟೆ ವಶ’ ಅಥವಾ “ನಕಲಿ ಮತದಾನ’ಕ್ಕೆ ನಡೆಸುವ ಯಾವುದೇ ಪ್ರಯತ್ನದ ವಿರುದ್ಧವೂ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕು. ಏಕೆಂದರೆ, ಇಂಥ ಕೃತ್ಯಗಳು ಅಂತಿಮವಾಗಿ ಕಾನೂನು-ಕಟ್ಟಳೆಗಳು ಹಾಗೂ ಪ್ರಜಾಸತ್ತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಜಾರ್ಖಂಡ್‌ ನ ಮತಗಟ್ಟೆಯೊಂದರಲ್ಲಿ ಗಲಭೆ ಸೃಷ್ಟಿಸಿದ ಪ್ರಕರಣದ ದೋಷಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮತದಾನದ ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿದೆ. ಅಲ್ಲದೇ, ಮತ ಚಲಾವಣೆಯಲ್ಲಿನ ಗೋಪ್ಯತೆಯೂ ಪ್ರಜಾಸತ್ತೆಯನ್ನು ಬಲಿಷ್ಠಗೊಳಿಸಲು ಅತ್ಯಗತ್ಯ ಎಂದೂ ನ್ಯಾ.ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಎಂ.ಆರ್‌. ಶಾ ಹೇಳಿದ್ದಾರೆ.

ಇದನ್ನೂ ಓದಿ :ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ : ಸಚಿವ ಸಿ.ಪಿ.ಯೋಗೇಶ್ವರ್ ಟೀಕೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next