Advertisement

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

12:13 AM May 01, 2024 | Team Udayavani |

ಧಾರಾಶಿವ: ಬಿಜೆಪಿಯನ್ನು ಎದುರಿಸಲಾಗದೆ ವಿಪಕ್ಷ ಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ದುರುಪಯೋಗ ಪಡಿಸಿಕೊಂಡು ಫೇಕ್‌ ವೀಡಿಯೋಗಳನ್ನು ಹಂಚುತ್ತಿವೆ. ಕಾಂಗ್ರೆಸ್‌ನ ಸುಳ್ಳುಗಳು ಕೆಲಸ ಮಾಡುತ್ತಿಲ್ಲ. ಹಾಗಾಗಿ ತಮ್ಮ ಮೊಹಬ್ಬತ್‌ ಕೀ ದುಕಾನ್‌ನಲ್ಲಿ(ಪ್ರೀತಿಯ ಅಂಗಡಿ) ಫೇಕ್‌ ವೀಡಿಯೋಗಳನ್ನು ಮಾರಾಟ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. ಅವುಗಳನ್ನೆಲ್ಲ ನಿಯಂತ್ರಿಸಬೇಕಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

Advertisement

ಶರದ್‌ಗೆ ಶಿಕ್ಷೆಯಾಗಬೇಕು: ಮಾಳಶಿರಸದಲ್ಲಿ ಮಾತನಾಡಿದ ಮೋದಿ, ಕೇಂದ್ರ ಸಚಿವರಾಗಿದ್ದಾಗ ಶರದ್‌ ಪವಾರ್‌ ರೈತರಿಗಾಗಿ ಏನೂ ಮಾಡಲಿಲ್ಲ. ಹಾಗಾಗಿ ಈಗ ಅವರನ್ನು ಶಿಕ್ಷಿಸುವ ಸಮಯ ಎದುರಾಗಿದೆ ಎಂದರು.

ಇದಕ್ಕೂ ಮೊದಲು ಪುಣೆಯಲ್ಲಿ ಮಾತನಾಡುವಾಗ  ಶರದ್‌ ಪವಾರ್‌ ಅವರನ್ನು ಅಲೆದಾಡುತ್ತಿರುವ ಆತ್ಮ ಎಂದು ಜರೆದಿದ್ದರು. 275 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ಕಾಂಗ್ರೆಸ್‌ ಮತ ನೀಡಿ ನಮ್ಮ ಮತವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next