Advertisement

ಕಾಂಗ್ರೆಸ್‌ ರ‍್ಯಾಲಿಯಲ್ಲಿ ಪಾಕ್‌ ಧ್ವಜದ ಸುಳ್ಳು ವಿಡಿಯೋ:ದೂರು ದಾಖಲು

11:31 AM May 11, 2018 | Team Udayavani |

ಭಟ್ಕಳ: ಭಟ್ಕಳದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಚಾರ ರ‍್ಯಾಲಿಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಲಾಗಿದೆ ಎನ್ನುವ ಸಾಮಾಜಿಕ ಜಾಲ ತಾಣದ ಸುಳ್ಳು ವಿಡಿಯೋ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ದೂರೊಂದನ್ನು ದಾಖಲಿಸಲಾಗಿದೆ.

Advertisement

ತಿಮ್ಮಪ್ಪ ಮೊಗೇರ ಎನ್ನುವವರು ನೀಡಿದ ದೂರಿನಲ್ಲಿ ಸಾಮಾಜಿಕ ಜಾಲ ತಾಣವಾದ ವಾಟ್ಸ್‌ಆ್ಯಪ್‌ನಲ್ಲಿ ಬೆಳಗಾವಿ ಕಾಂಗ್ರೆಸ್‌ ರ್ಯಾಲಿಯಲ್ಲಿ ಮುಸ್ಲಿಮರು ದರ್ಗಾ ಮತ್ತು ಉರುಸುಗಳಲ್ಲಿ ಬಳಸುವ ಹಸಿರು ಬಾವುಟ ಪ್ರದರ್ಶಿಸಲಾಗಿದ್ದು ಅದನ್ನು ಭಟ್ಕಳದಲ್ಲಿ ನಡೆದ ಕಾಂಗ್ರೆಸ್‌ ರ‍್ಯಾಲಿಯೆಂದು ಬಿಂಬಿಸಿ ಪಾಕಿಸ್ಥಾನದ ಧ್ವಜ ಹಾರುತ್ತಿದೆ ಎನ್ನುವ ತಪ್ಪು ಸಂದೇಶವನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಲಾಗಿದೆ. ಭಟ್ಕಳದಲ್ಲಿ ಕಾಂಗ್ರೆಸ್‌ ಗೆದ್ದರೆ ಪಾಕಿಸ್ಥಾನ ಅಗುತ್ತದೆನ್ನುವ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next