Advertisement

ನಕಲಿ ಉಗ್ರನ ಬೆನ್ನು ಹತ್ತಿ ಬೇಸ್ತು!

11:41 PM May 28, 2019 | sudhir |

ಥಾಣೆ: “ಸರ್‌… ಉಗ್ರವಾದಿಗಳ ಥರ ಗಡ್ಡ ಬಿಟ್ಟಿರುವ ವ್ಯಕ್ತಿಯೊಬ್ಬ ಕಾರಿನಲ್ಲಿ ಇಲ್ಲೆಲ್ಲಾ ಓಡಾಡ್ತಿದ್ದಾನೆ. ನಮಗೇನೋ ಆತ ಪಕ್ಕಾ ಉಗ್ರವಾದಿಯೇ ಅಂತ ಅನ್ನಿಸ್ತಿದೆ…’ ಪುಣೆಯ ಪೊಲೀಸ್‌ ಕಂಟ್ರೋಲ್‌ ರೂಮಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಇಂಥದ್ದೊಂದು ಮಾಹಿತಿಯನ್ನು ಕೇಳಿ ಮುಗಿಸುವಷ್ಟರಲ್ಲಿ ಇತ್ತ ಕರೆ ಸ್ವೀಕರಿಸಿದ್ದ ಪೊಲೀಸ್‌ ಸಿಬಂದಿ ಕುಳಿತಲ್ಲೇ ತಣ್ಣಗೆ ಬೆವತಿದ್ದರು!

Advertisement

ಪುಣೆಯ ಮಾಣಿಕ್‌ಪುರ್‌ ಪ್ರಾಂತ್ಯದ ಸನ್‌ಸಿಟಿಯ ಬಳಿ ಆತ ಓಡಾಡುತ್ತಿರುವ ಮಾಹಿತಿ ಆಧರಿಸಿ ಪೊಲೀಸರ ವಿವಿಧ ತಂಡಗಳು ಆತನ ತಲಾಶ್‌ ಮಾಡ ತೊಗಿದವು. ಕೊನೆಗೂ ಆತ ಸಿಕ್ಕಿದಾಗ ವಿಚಾರಣೆಯಲ್ಲಿ ತಿಳಿದಿದ್ದೇನೆಂದರೆ, ಆತ ಸಿನೆಮಾ ಕಲಾವಿದ. ಶೂಟಿಂಗ್‌ಗಾಗಿ ಹಾಕಿಕೊಂಡ ಮೇಕಪ್‌ನಲ್ಲೇ ನಗರದಲ್ಲಿ ಸುತ್ತಾಡಿದ್ದ ಎಂಬುದು! ಅಷ್ಟಕ್ಕೆ ನಿಟ್ಟುಸಿರು ಬಿಟ್ಟ ಪೊಲೀಸರು ಠಾಣೆ ಕಡೆಗೆ ನಿರುಮ್ಮಳವಾಗಿ ಹಿಂದಿರುಗಿದರು.

Advertisement

Udayavani is now on Telegram. Click here to join our channel and stay updated with the latest news.

Next