ಹೊಸಪೇಟೆ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಭಾನುವಾರ ಬಂಧಿಸುವಲ್ಲಿ ಹೊಸಪೇಟೆ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ವೇಳೆ 500 ರೂ. ಮುಖ ಬೆಲೆಯ 1 ಲಕ್ಷದ 56 ಸಾವಿರದ ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಖೋಟಾ ನೋಟು ಚಲಾವಣೆಗೆ ಬಂದಿದ್ದ ದಾವಣಗೆರೆ ಜಿಲ್ಲೆಯ ಕುಬೇರಪ್ಪ( 58) ಶಿವಮೊಗ್ಗ ಜಿಲ್ಲೆಯ ರುದ್ರೇಶ್( 39) ಮಂಡ್ಯ ಜಿಲ್ಲೆಯ ಎಸ್. ರಾಜೇಶ್( 28) ಮೈಸೂರು ಜಿಲ್ಲೆಯ ಪ್ರಶಾಂತ್( 30) ಮಂಡ್ಯ ಜಿಲ್ಲೆಯ ರವಿ( 30) ಬಂಧಿತ ಆರೋಪಿಗಳು.
ನಗರದ ರಾಣಿ ಪೇಟೆಯಲ್ಲಿರುವ ವೆಂಕಟೇಶ್ವರ ಲಾಡ್ಜಲ್ಲಿ ವಾಸವಾಗಿ, ಸ್ಥಳೀಯರಿಗೆ ನೋಟು ಚಲಾವಣೆ ಮಾಡಲು ಹೊಂಚು ಹಾಕಿದ್ದರು.
ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.