Advertisement

FIR: ಸಿಎಂ ಆಪ್ತ ಕಾರ್ಯದರ್ಶಿ ಹೆಸರಲ್ಲಿ ನಕಲಿ ಲೆಟರ್‌ಹೆಡ್‌; ಎಫ್ಐಆರ್‌

01:04 PM Dec 12, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿಗಳ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿದ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಕೊಟ್ಟ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ ಸಿಎಂ ಕಚೇರಿಯಿಂದ ಲೋಕೋಪಯೋಗಿ ಸಚಿವರಿಗೆ ಕಡತ ಕಳುಹಿಸಲಾಗಿತ್ತು. ಈ ಕಡತದಲ್ಲಿ ರಾಜೇಂದ್ರ ಹೆಸರಿನಲ್ಲಿ ಸಹಿ ಹಾಕಲಾಗಿದ್ದು, ಅಂಕಿತ್‌ ಎಂಬಾತನಿಗೆ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇಲಾಖೆಯಲ್ಲಿ ತಾತ್ಕಾಲಿಕ ಕೆಲಸ ನೀಡುವಂತೆ ಉಲ್ಲೇಖೀಸಲಾಗಿದೆ. ಆದರೆ ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿಗಳ ಕಚೇರಿಯಲ್ಲಿ ರಾಜೇಂದ್ರ ಎಂಬ ವ್ಯಕ್ತಿ ಇಲ್ಲ. ನಕಲಿ ಪತ್ರ ಸೃಷ್ಟಿಸಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಹಾಗೂ ಮುಖ್ಯ ಮಂತ್ರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾದ ರಾಜೇಂದ್ರ ಹಾಗೂ ಅಂಕಿತ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next