ಬೆಂಗಳೂರು: ಒಂದೇ ಸ್ವತ್ತಿಗೆ ನಕಲಿ ದಾಖಲೆ ಗಳನ್ನು ಸೃಷ್ಟಿಸಿ 22 ಬ್ಯಾಂಕ್‌ಗಳಿಗೆ ನೀಡಿ 10 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದು ವಂಚನೆ ಮಾಡಿರುವ ಒಂದೇ ಕುಟುಂಬದ ಐವರು ಸೇರಿ ಆರು ಆರೋಪಿಗಳನ್ನು ಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಡುಗೆ ಭಟ್ಟನಾಗಿದ್ದ ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ, ಇವರ ಸಂಬಂಧಿಕರಾದ ಶೋಭಾ, ಈಕೆಯ ಪತಿ ಶೇಷಗಿರಿ, ಭಾವ ಮೈದುನ ಸತೀಶ್, ಸುಮಾಳ ಸ್ನೇಹಿತೆ ವೇದಾ ಬಂಧಿತರು.
ನಾಗೇಶ್ – ಸುಮಾ ದಂಪತಿ ಹೆಸರಿನಲ್ಲಿ ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡದ ದಾಖಲೆ ಯಲ್ಲಿ ವಿವಿಧ ಸರ್ವೆ ನಂಬರ್, ನಿವೇ ಶನಗಳ ನಂಬರ್‌ಗಳನ್ನು ಬದಲಿಸು ತ್ತಿದ್ದರು. ಸೈಟ್ ಉದ್ದಳತೆಯಲ್ಲಿ ಸಹ ಬದ ಲಾವಣೆ ಮಾಡುತ್ತಿದ್ದರು. ನಂತರ ಆ ನಕಲಿ ದಾಖಲಾತಿಗಳಿಂದ ಡೀಡ್ ಮಾಡಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿ ಸು ತ್ತಿದ್ದರು. ಅವುಗಳ ಆಧಾರದ ಮೇಲೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘ, ಕೋ-ಆಪರೇಟಿವ್ ಬ್ಯಾಂಕ್ ಸೇರಿ 22 ಬ್ಯಾಂಕ್‌ಗಳಲ್ಲಿ 10 ಕೋಟಿ ರೂ. ಸಾಲ ಪಡೆದಿದ್ದರು.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಜಯ ನಗರ 3ನೇ ಬ್ಲಾಕ್‌ನಲ್ಲಿರುವ ಕೋ- ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆದಾರ ರಾಗಿದ್ದ ನಾಗೇಶ್-ಸುಮಾ ದಂಪತಿ, ತಮ್ಮ ಬೇಗೂರು ಗ್ರಾಮದ 2,100 ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡದ ನಕಲಿ ದಾಖಲೆ ಆಧಾರದಲ್ಲಿ ಬ್ಯಾಂಕ್‌ನಿಂದ ಕಂತು ಸಾಲ ಹಾಗೂ ಯಂತ್ರೋಪಕರಣ ಸಾಲ ವೆಂದು 1.30 ಕೋಟಿ ರೂ. ಪಡೆದುಕೊಂಡಿದ್ದರು. ಸಾಲವನ್ನು ಬ್ಯಾಂಕಿಗೆ ಪಾವತಿಸದೆ, ವಂಚನೆ ಮಾಡಿದ್ದರು.
ಈ ಕೋ-ಆಪರೇಟಿವ್ ಬ್ಯಾಂಕ್‌ನ ಮ್ಯಾನೇ ಜರ್ ಜಯನಗರ ಪೊಲೀಸ್ ಠಾಣೆ ಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಅಡುಗೆ ಭಟ್ಟನಾಗಿದ್ದ ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕ್‌ಗಳಲ್ಲಿ 10 ಕೋಟಿ ರೂ. ಸಾಲ ಪಡೆದಿರುವುದು ಗೊತ್ತಾಗಿದೆ. ಆರೋಪಿಗಳಾದ ನಾಗೇಶ್ ಪತ್ನಿ ಸುಮಾಳ ಅಕ್ಕ-ಭಾವಾ, ಸಹೋದರ, ಸ್ನೇಹಿತೆ ಯೂ ಪ್ರಕರಣದಲ್ಲಿ ಕೈ ಜೋಡಿಸಿರುವುದನ್ನು ವಿಚಾರಣೆ ವೇಳೆ ದಂಪತಿ ಬಾಯ್ಬಿಟ್ಟಿದ್ದರು. ಇವರು ಕೊಟ್ಟ ಮಾಹಿತಿ ಆಧರಿಸಿ ಪ್ರಕರಣ ದಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಸಬ್ ರಿಜಿಸ್ಟ್ರಾರ್‌ಗಳಿಗೂ ಶೀಘ್ರದಲ್ಲೇ ಖಾಕಿ ಡ್ರಿಲ್ :
ಆರೋಪಿಗಳು ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ 22 ಬ್ಯಾಂಕ್‌ಗಳಿಗೆ ಸಲ್ಲಿಸಿ 10 ಕೋಟಿ ರೂ. ಸಾಲ ಪಡೆಯಲು ನೆರವಾಗಿದ್ದಾರೆ ಎನ್ನಲಾದ ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ, ಬ್ಯಾಂಕಿನ ಅಧಿಕಾರಿಗಳನ್ನು ಶೀಘ್ರದಲ್ಲೇ ವಿಚಾರಣೆ ನಡೆಸಲು ಖಾಕಿ ಸಿದ್ಧತೆ ನಡೆಸಿದೆ. ಆರೋಪಿಗಳ ವಂಚನೆ ಸಂಬಂಧಿಸಿದಂತೆ 6 ಬ್ಯಾಂಕ್‌ಗಳಿಂದ ಮಾತ್ರ ದೂರು ದಾಖಲಾಗಿದೆ. ಉಳಿದ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಆರೋಪಿಗಳು ವಂಚನೆ ನಡೆಸಿರುವ ಹಣದಲ್ಲಿ ನಿವೇಶನ ಹಾಗೂ ಮನೆಯೊಂದನ್ನು ಖರೀದಿಸಿರುವುದು ಪತ್ತೆಯಾಗಿದೆ. ಉಳಿದ ಹಣದ ಮಾಹಿತಿ ಸಂಗ್ರಹಿಸಲಾಗುತ್ತಿದೆ. 2014ರಿಂದಲೂ ವಿವಿಧ ಬ್ಯಾಂಕ್‌ಗಳಲ್ಲಿ ಕಂತು ಸಾಲ, ಯಂತ್ರೋಪಕರಣ ಹೆಸರಿನಲ್ಲಿ ಸಾಲ ಪಡೆದಿದ್ದರು. ಇಷ್ಟಾದರೂ ಆರೋಪಿಗಳ ಕೃತ್ಯದ ಬಗ್ಗೆ ಬ್ಯಾಂಕ್‌ಗಳಿಗೆ ಸಂಶಯ ಮೂಡಿರಲಿಲ್ಲ.