Advertisement

ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ: ಆರೋಪಿ ಎಸ್ಕೇಪ್‌

02:22 AM Jan 26, 2021 | Team Udayavani |

ಉಪ್ಪಿನಂಗಡಿ: ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ಅಸಾಮಿಯೋರ್ವ ನಕಲಿ ಚಿನ್ನವನ್ನು ಅಡವಿರಿಸಿ ಲಕ್ಷಾಂತರ ರೂಪಾಯಿ ಹಣವನ್ನು ದೋಚುತ್ತಿರುವ ವಿದ್ಯಾಮಾನ ಉಪ್ಪಿನಂಗಡಿಯಲ್ಲಿ ನಡೆದಿದೆ.

Advertisement

ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರೊಂದರಲ್ಲಿ ಆಗಮಿಸುವ ಆತ ಉಪ್ಪಿನಂಗಡಿಯಲ್ಲಿನ ಸಹಕಾರಿ ಹಣಕಾಸು ಸಂಸ್ಥೆಗಳಿಗೆ ಗಣ್ಯ ಗ್ರಾಹಕನ ಸೋಗಿನಲ್ಲಿ ಎಂಟ್ರಿ ಕೊಟ್ಟು ತರಾತುರಿಯಲ್ಲಿದ್ದೇನೆಂಬ ಭಾವವನ್ನು ವ್ಯಕ್ತಪಡಿಸಿ ತಾನು ತಂದಿರುವ ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವಾಗಿ ಹಣವನ್ನು ಕೇಳುತ್ತಾನೆ. ಅಸಲಿ ಚಿನ್ನಾಭರಣದಂತೆ ಸಹಜ ತೂಕದ ಆಭರಣಗಳು ಮೇಲ್ನೋಟಕ್ಕೆ ನೈಜ ಚಿನ್ನಾಭರಣಗಳಂತೆ ಕಾಣುತ್ತಿರುವುದರಿಂದ ಚಿನ್ನಾಭರಣ ಪರೀಕ್ಷಕ ಬರುವವರೆಗೆ ಕಾಯದೆ ಸಹಕಾರಿ ಸಂಸ್ಥೆಗಳು ಆತನಿಗೆ ಸಾಲ ರೂಪದಲ್ಲಿ ಹಣವನ್ನಿತ್ತು ಕಳುಹಿಸಿಕೊಟ್ಟಿದ್ದವು. ಆತ ಹೋದ ಬಳಿಕ ಬರುವ ಚಿನ್ನಾಭರಣ ಪರೀಕ್ಷಕ ಆಭರಣವನ್ನು ಪರೀಕ್ಷಿಸಿದಾಗಲೆ ಅವುಗಳು ನಕಲಿ ಚಿನ್ನಾಭರಣವೆನ್ನುವುದು ತಿಳಿಯುತ್ತಿದ್ದವು. ಆ ವೇಳೆಗೆ ವಂಚಕ ನಾಪತ್ತೆಯಾಗುವುದರೊಂದಿಗೆ ಸಂಸ್ಥೆಗಳು ವಂಚನೆಗೆ ತುತ್ತಾದಂತಾಗಿದೆ.

ಉಪ್ಪಿನಂಗಡಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ನಾಲ್ಕು ಸಹಕಾರಿ ಸಂಸ್ಥೆಗಳಿಗೆ ವಂಚಿಸಿರುವ ಆತ ರವಿವಾರ ಶುಭಾರಂಭಗೊಂಡ ಸಹಕಾರಿ ಸಂಸ್ಥೆಗೆ ವಂಚಿಸಲು ಮುಂದಾದಾಗ ಈತನ ವಂಚನ ಪ್ರಕರಣ ಬಯಲಾಗಿದೆ. ಆದರೆ ಆತ ಪರಾರಿಯಾಗಿದ್ದ. ಉಪ್ಪಿನಂಗಡಿ ಪೊಲೀಸರು ವಂಚಕನ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next