ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಸಾರ್ವಜನಿಕರಿಗೆ ಭಾರಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ರೂಪಾ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ದುಷ್ಟರು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಂದು ಚಂದಾ ವಸೂಲಿ ಮಾಡಿದ್ದಾರೆ. ಆನ್‌ಲೈನ್‌ನಲ್ಲೇ ವ್ಯವಹಾರ ನಡೆಸಲಾಗಿದ್ದು, ಹಣ ಹಾಕಿದ ಬಳಿಕ ಧನ್ಯವಾದಗಳನ್ನು ಕಳುಹಿಸಲಾಗುತ್ತಿತ್ತು.
ಈ ವಿಚಾರ ರೂಪಾ ಅವರ ಗಮನಕ್ಕೆ ಬಂದ ಬಳಿಕ ಟ್ವೀಟ್ ಮಾಡಿರುವ ಅವರು ನಾನು ಇನ್‌ಸ್ಟಾಗ್ರಾಂನಲ್ಲಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡುತ್ತೇನೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿರುವವರು ಈ ವಿಚಾರ ಗಮನಿಸುವಂತೆ ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.
Related Articles
ನೂರಾರು ಮಂದಿ ರೂಪಾ ಅವರ ಹೆಸರಿನಲ್ಲಿ ವಿಶ್ವಾಸವಿರಿಸಿ ಆನ್‌ಲೈನ್ ಮೂಲಕವೇ ಹಣ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.