Advertisement
ಪಕ್ಷ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಥಳೀಯ ಶಾಸಕರೂ ಆಗಿರುವ ಸಚಿವ ಬೈರತಿ ಸುರೇಶ್, ಎಂಎಸ್‌ಎಲ್ ಟೆಕ್ನೋ ಸೆಲ್ಯುಷನ್ಸ್ ಮಾಲೀಕ ಮೌನೇಶ್ ಕುಮಾರ್, ಸಹಚರರಾದ ಭಗತ್, ರಾಘವೇಂದ್ರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ನಕಲಿ ಆಧಾರ್ ಕಾರ್ಡ್ ರದ್ದುಪಡಿಸಿ:
ಎಂಎಸ್‌ಎಲ್ ಟೆಕ್ನೊ ಸೊಲ್ಯೂಶನ್‌ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‌ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ; ಸಮಾಜದ ಅಳಿವು ಉಳಿವಿನ ಪ್ರಶ್ನೆ. ಹೀಗಾಗಿ ಸರ್ಕಾರವೂ ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಎಫ್ಐಆರ್‌ನಲ್ಲಿಯೇ ಸಾಕ್ಷ್ಯ ಸಿಕ್ಕಿದೆ:
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಚುನಾವಣೆಯ ಕೊನೆಯ ದಿನಗಳಲ್ಲಿ ಈ ವಿಚಾರ ಗಮನಕ್ಕೆ ಬಂದಿತ್ತು. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಪತ್ರಿಕಾಗೋಷ್ಠಿ ಕೂಡ ಕರೆದು ಮಾಹಿತಿ ನೀಡಲಾಗಿತ್ತು. ಈಗ ಪೊಲೀಸ್ ಎಫ್ಐಆರ್‌ನಲ್ಲಿಯೇ ಸಾಕ್ಷ್ಯ ಸಿಕ್ಕಿದೆ. ಈಗಲಾದರೂ ಸರ್ಕಾರ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ಆಗ್ರಹಿಸಿದ್ದಾರೆ.
ದಾಖಲಾತಿಗೆ ಸಾಕಷ್ಟು ದೃಢೀಕರಣ ಅಗತ್ಯ :
ಇತರೆ ದೇಶಗಳಂತೆ ಭಾರತದಲ್ಲಿ ಪೌರತ್ವ ಗುರುತುಚೀಟಿ ಇಲ್ಲದಿದ್ದರೂ ಆಧಾರ್ ಕಾರ್ಡ್‌ನ್ನು ಕೇಂದ್ರ, ರಾಜ್ಯ ಸರ್ಕಾರಗಳ ಸವಲತ್ತು ಪಡೆಯುವುದರಿಂದ ಹಿಡಿದು ಮತದಾನದ ಹಕ್ಕು ಚಲಾಯಿಸು ವವ ರೆಗೂ ಬಳಸುತ್ತೇವೆ. ಇದನ್ನು ಪಡೆಯಲು ಸಾಕಷ್ಟು ದೃಢೀಕರಣಗಳನ್ನು ನೀಡಬೇಕು. ಬಾಂಗ್ಲಾದಿಂದ ಬಂದವರಿಗೆ ಸುಲಭವಾಗಿ ಸಿಗುತ್ತಿದೆ. ನಮ್ಮ ದೇಶದವರಿಗೆ ಮೀಸಲಿಟ್ಟ ಅನುದಾನವು ಬೇರೆಯ ವರ ಪಾಲಾಗುತ್ತಿದೆ. ಪೊಲೀಸರೂ ಇದನ್ನು ಗಂಭೀರ ವಾಗಿ ಪರಿಗಣಿಸಿಲ್ಲ. ಇದರ ಹಿಂದಿರುವ ಜಾಲದ ಮೂಲೋತ್ಪಾಟನೆ ಮಾಡಲೇಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ತಿಳಿಸಿದ್ದಾರೆ.