Advertisement

Fake ID card: ನಕಲಿ ಗುರುತಿನ ಚೀಟಿ; ಸಿಬಿಐಗೆ ವಹಿಸಿ

10:49 AM Oct 26, 2023 | Team Udayavani |

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಆಧಾರ್‌ ಹಾಗೂ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವುದನ್ನ ಸಿಬಿಐ ಅಥವಾ ಎನ್‌ಎಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಎಸ್‌.ಸುರೇಶಕುಮಾರ್‌ ಆಗ್ರಹಿಸಿದರು.

Advertisement

ಪಕ್ಷ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಥಳೀಯ ಶಾಸಕರೂ ಆಗಿರುವ ಸಚಿವ ಬೈರತಿ ಸುರೇಶ್‌, ಎಂಎಸ್‌ಎಲ್‌ ಟೆಕ್ನೋ ಸೆಲ್ಯುಷನ್ಸ್‌ ಮಾಲೀಕ ಮೌನೇಶ್‌ ಕುಮಾರ್‌, ಸಹಚರರಾದ ಭಗತ್‌, ರಾಘವೇಂದ್ರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅ.19ರಂದು ಆರ್‌.ಟಿ. ನಗರ ಸುಲ್ತಾನ್‌ ಪಾಳ್ಯದ ಬನಶಂಕರಿ ಕಾಂಪ್ಲೆಕ್ಸ್‌ನಲ್ಲಿನ ಎಂಎಸ್‌ಎಲ್‌ ಟೆಕ್ನೋ ಸೆಲ್ಯುಶನ್ಸ್‌ನಲ್ಲಿ ಈ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿದ್ದರ ಬಗ್ಗೆ ಹೆಬ್ಟಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ನಲ್ಲಿ ಉಲ್ಲೇಖವಾಗಿದೆ. ಆಧಾರ್‌ ಕಾರ್ಡ್‌ ಮಾಡಲು ಏನಾದರೊಂದು ದೃಢೀಕರಣ ನೀಡಬೇಕು. ಆದರೆ, ಜನನ ಪ್ರಮಾಣಪತ್ರವೂ ಇಲ್ಲದೆ ನಕಲಿ ಅಧಾರ್‌ ಕಾರ್ಡ್‌ ಮಾಡಿಕೊಡಲಾಗಿದೆ. ಅಂದರೆ, ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು ಎಂದು ಪ್ರಶ್ನಿಸಿದರು.

ಆಯೋಗಕ್ಕೂ ದೂರು: ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ, ಸಮಾಜದ ಉಳಿವಿನ ಪ್ರಶ್ನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಚುನಾವಣಾ ಗೆಲುವಿಗಾಗಿ ಮಾಡಿಸಿ¨ªಾರೆ. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್‌ ಕಾರ್ಡ್‌, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‌ಐಎ ಇಲ್ಲವೇ ಸಿಬಿಐಗೆ ಇದನ್ನು ಒಪ್ಪಿಸಲು ಕೋರಲಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಪ್ರಸ್ತುತ ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 420 ಸೇರಿ ಹಲವು ಸೆಕ್ಷನ್‌ಗಳಡಿ ಎಫ್ಐಆರ್‌ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್‌ ಕಾರ್ಡ್‌ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್‌ ಅಪರಾಧ. ಎಂಎಸ್‌ಎಲ್‌ ಟೆಕ್ನೋ ಸೆಲ್ಯುಷನ್ಸ್‌ನಲ್ಲಿ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಾನ್‌ ಕಾರ್ಡ್‌ ಮತ್ತಿತರ ದಾಖಲಾತಿಗಳನ್ನು ಕಂಪ್ಯೂಟರ್‌ ಮೂಲಕ ಸುಳ್ಳು ಸೃಷ್ಟಿ ಮಾಡಿ ಸ್ವಂತ ಲಾಭಕ್ಕಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೂ ಮೋಸ ಮಾಡುತ್ತಿದ್ದರು ಎಂದು ಆರೋಪಿಸಿದರು.

Advertisement

ನಕಲಿ ಆಧಾರ್‌ ಕಾರ್ಡ್‌ ರದ್ದುಪಡಿಸಿ:

ಎಂಎಸ್‌ಎಲ್‌ ಟೆಕ್ನೊ ಸೊಲ್ಯೂಶನ್‌ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್‌ ಕಾರ್ಡ್‌ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ; ಸಮಾಜದ ಅಳಿವು ಉಳಿವಿನ ಪ್ರಶ್ನೆ. ಹೀಗಾಗಿ ಸರ್ಕಾರವೂ ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದು ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

ಎಫ್ಐಆರ್‌ನಲ್ಲಿಯೇ ಸಾಕ್ಷ್ಯ ಸಿಕ್ಕಿದೆ:

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಚುನಾವಣೆಯ ಕೊನೆಯ ದಿನಗಳಲ್ಲಿ ಈ ವಿಚಾರ ಗಮನಕ್ಕೆ ಬಂದಿತ್ತು. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಪತ್ರಿಕಾಗೋಷ್ಠಿ ಕೂಡ ಕರೆದು ಮಾಹಿತಿ ನೀಡಲಾಗಿತ್ತು. ಈಗ ಪೊಲೀಸ್‌ ಎಫ್ಐಆರ್‌ನಲ್ಲಿಯೇ ಸಾಕ್ಷ್ಯ ಸಿಕ್ಕಿದೆ. ಈಗಲಾದರೂ ಸರ್ಕಾರ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಮುಖಂಡ ಕಟ್ಟಾ ಜಗದೀಶ್‌ ಆಗ್ರಹಿಸಿದ್ದಾರೆ.

ದಾಖಲಾತಿಗೆ ಸಾಕಷ್ಟು ದೃಢೀಕರಣ ಅಗತ್ಯ :

ಇತರೆ ದೇಶಗಳಂತೆ ಭಾರತದಲ್ಲಿ ಪೌರತ್ವ ಗುರುತುಚೀಟಿ ಇಲ್ಲದಿದ್ದರೂ ಆಧಾರ್‌ ಕಾರ್ಡ್‌ನ್ನು ಕೇಂದ್ರ, ರಾಜ್ಯ ಸರ್ಕಾರಗಳ ಸವಲತ್ತು ಪಡೆಯುವುದರಿಂದ ಹಿಡಿದು ಮತದಾನದ ಹಕ್ಕು ಚಲಾಯಿಸು ವವ ರೆಗೂ ಬಳಸುತ್ತೇವೆ. ಇದನ್ನು ಪಡೆಯಲು ಸಾಕಷ್ಟು ದೃಢೀಕರಣಗಳನ್ನು ನೀಡಬೇಕು. ಬಾಂಗ್ಲಾದಿಂದ ಬಂದವರಿಗೆ ಸುಲಭವಾಗಿ ಸಿಗುತ್ತಿದೆ. ನಮ್ಮ ದೇಶದವರಿಗೆ ಮೀಸಲಿಟ್ಟ ಅನುದಾನವು ಬೇರೆಯ ವರ ಪಾಲಾಗುತ್ತಿದೆ. ಪೊಲೀಸರೂ ಇದನ್ನು ಗಂಭೀರ ವಾಗಿ ಪರಿಗಣಿಸಿಲ್ಲ. ಇದರ ಹಿಂದಿರುವ ಜಾಲದ ಮೂಲೋತ್ಪಾಟನೆ ಮಾಡಲೇಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಿವೇಕ್‌ ರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next