Advertisement

1.99 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌! ಇ-ಆಡಳಿತ ಇಲಾಖೆಯಿಂದ ಪತ್ತೆ

08:09 AM Jun 23, 2021 | Team Udayavani |

ಸಿಂಧನೂರು: ನಿರ್ಗತಿಕ ರಿಗೆ ಅಂತ್ಯೋದಯ, ಕಡು ಬಡವರಿಗೆ ಬಿಪಿಎಲ್‌ ಕಾರ್ಡ್‌ ನೀಡಿ ಆಹಾರ ಧಾನ್ಯ ನೀಡುತ್ತಿರುವ ಇಲಾಖೆಯೇ ಆಂತರಿಕ ತಪಾಸಣೆ ವೇಳೆ ಬೆಚ್ಚಿಬಿದ್ದಿದೆ. 7.5 ಎಕರೆಗೂ ಮೇಲ್ಪಟ್ಟು ಜಮೀನು ಹೊಂದಿದವರೂ ಅನ್ನಭಾಗ್ಯಕ್ಕಾಗಿ ಕಡು ಬಡವರ ಪಟ್ಟಿಗೆ ಸೇರಿಕೊಂಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಕೂಡ ಪತ್ತೆಯಾಗಿವೆ.

Advertisement

ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿದಾಗ ಆಹಾರ ಇಲಾಖೆಗೆ ಈ ಆಘಾತಕಾರಿ ಸಂಗತಿ ಗೊತ್ತಾಗಿದೆ. ಆರ್‌ಟಿಸಿ ಜಾಡು ಹಿಡಿದು ಅವರ ಪಟ್ಟಿಯನ್ನು ಸಿದ್ಧಪಡಿಸಿದ ಅನಂತರ ಆಯಾ ತಾಲೂಕುವಾರು ವಿವರವನ್ನು ರವಾನಿಸಲಾಗಿದೆ. ಖುದ್ದು ಪರಿಶೀಲನೆ ನಡೆಸಿ, ನೈಜತೆಯನ್ನು ವೀಕ್ಷಿಸಿ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಆದೇಶ ಹೊರಡಿಸಿದೆ.

ಪತ್ತೆಯಾಗಿದ್ದು ಹೇಗೆ?
ಆಸ್ತಿ ದಾಖಲೆಗಳು ಈಗಾಗಲೇ ಸಂಬಂಧಿಸಿದ ಇಲಾಖೆಯ ವೆಬ್‌ಸೈಟ್‌ನಲ್ಲಿ ದೊರೆಯುತ್ತಿವೆ. ಈ ಹಿನ್ನೆಲೆ ಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇ-ಆಡಳಿತ ಇಲಾಖೆಯ ಮೊರೆ ಹೋಗಿತ್ತು. ತಪಾಸಣೆ ನಡೆಸಿದಾಗ 7.5 ಎಕರೆ ಭೂಮಿಯನ್ನು ಹೊಂದಿ ದವರು ಕೂಡ ಕಡುಬಡವರ ಪಡಿತರ ಚೀಟಿ ಹೊಂದಿರುವುದನ್ನು ಗುರುತಿಸ ಲಾಗಿದೆ. 18,848 ಕುಟುಂಬಗಳು ಅಂತ್ಯೋ ದಯ, 1.99 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದು, ಇವರೆಲ್ಲರ ಆಸ್ತಿ 7.5 ಎಕರೆಗೂ ಹೆಚ್ಚಿರುವುದನ್ನು ಪತ್ತೆ ಹಚ್ಚಲಾಗಿದೆ. ನಿಗದಿತ ಮಾನದಂಡ ಕ್ಕಿಂತ ಹೆಚ್ಚಿನ ಜಮೀನು ಹೊಂದಿ ದ್ದರೂ 8,15,413 ಜನ ಅನ್ನ ಭಾಗ್ಯಕ್ಕೆ ಒಳಪಟ್ಟಿರುವುದನ್ನು ಗುರುತಿಸ ಲಾಗಿದೆ.

ತನಿಖೆಗೆ ಸೂಚನೆ
ಇ-ಆಡಳಿತ ಇಲಾಖೆಯಿಂದ ಪಡೆದಿರುವ ದಾಖಲೆಗಳನ್ನು ಆಧರಿಸಿ ತಹಶೀಲ್ದಾರ್‌ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ. ಸರಕಾರದ ಆದೇಶದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಹೊಂದಿರುವ ಕುಟುಂಬಗಳು ಅಂತ್ಯೋದಯ ಯಾ ಬಿಪಿಎಲ್‌ ಚೀಟಿ ಪಡೆದುಕೊಳ್ಳುವಂತಿಲ್ಲ. ಈಗ ಪತ್ತೆ ಹಚ್ಚಿರುವ ಪಟ್ಟಿಯಲ್ಲಿ ಜಂಟಿ ಕುಟುಂಬ ಇಲ್ಲವೇ ಭೂ ಒಡೆತನದ ಸಮಸ್ಯೆಗಳಿವೆಯೇ ಎಂಬುದನ್ನು ತನಿಖೆಗೆ ಒಳಪಡಿಸಿದ ಅನಂತರ ಅನರ್ಹರೆಂದು ಖಚಿತವಾಗುತ್ತಿದ್ದಂತೆ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಆಹಾರ ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next