Advertisement

ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

06:50 PM May 15, 2022 | Team Udayavani |

ಶಹಾಪುರ (ಯಾದಗಿರಿ): ನಗರದ ಲಕ್ಷ್ಮೀ ವೈನ್ಸ್ ಶಾಪ್ ನಲ್ಲಿ ನಕಲಿ ಮದ್ಯ ಮಾರಾಟ ಹಿನ್ನೆಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಒಟ್ಟು ಅಂದಾಜು 20 ಲಕ್ಷ ರೂ. ಮೌಲ್ಯದ ಮದ್ಯ ಸ್ಟಾಕ್ ಇದ್ದು, ಅದರಲ್ಲಿ 8.280 ಲೀಟರ್ ನಕಲಿ ಮಧ್ಯ ದೊರೆತಿದ್ದು, ಮದ್ಯ ಮಾರಾಟ ಅಂಗಡಿಗೆ ಬೀಗ ಜಡಿಯಲಾಗಿದೆ. ಅಲ್ಲದೆ ಲಕ್ಷ್ಮೀ ವೈನ್ಸ್ ಮಾಲೀಕ ಮುರುಳಿ ದಂಡು ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ಸುರೇಶಕುಮಾರ ಮಳೇಕರ್ ತಿಳಿಸಿದ್ದಾರೆ.

Advertisement

ದೇವಿಂದ್ರಪ್ಪ ಮತ್ತು ಭೀಮಾಶಂಕರ ಇಬ್ಬರು ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ ಅಬಕಾರಿ ಅಧಿಕಾರಿಗಳು, ಇನ್ನುಳಿದ ಐವರು ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನುಳಿದ ಐವರು ಆರೋಪಿಗಳಾದ ಗೋಪಾಲ, ಬನಶಂಕರ, ಮೊಗಲಯ್ಯ, ಶರಣಪ್ಪ, ಮುರುಳಿ ದಂಡು ಇವರ ಪತ್ತೆಗಾಗಿ ತೀವ್ರ ಶೋಧ ನಡೆದಿದೆ ಎನ್ನಲಾಗಿದೆ.

ಟಂಟಂ ಆಟೋವೊಂದರಲ್ಲಿ ನಕಲಿ ಮದ್ಯ ಸಾಗಿಸುತ್ತಿರುವುದನ್ನು ಹಿಡಿದ ಅಧಿಕಾರಿಗಳು ಯಾವ ಬಾರ್ ನಿಂದ ಮದ್ಯ ಒಯ್ಯಲಾಗುತ್ತಿದೆ ಎಂಬುದನ್ನು ಆಟೋ ಚಾಲಕ ನನ್ನು ವಶಕ್ಕೆ ಪಡೆದು ಕೇಳಿದ್ದು, ಬಳಿಕ ನೇರವಾಗಿ ಲಕ್ಷ್ಮೀ ವೈನ್ಸ್ ಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳಿಗೆ ನಕಲಿ ಮದ್ಯ ದೊರೆತಿದೆ. ಕೂಡಲೇ ಅಧಿಕಾರಿಗಳು ಅಂಗಡಿಗೆ ಬೀಗ ಜಡೆದಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿ ಸಮರ್ಪಕ ತನಿಖೆ ಕೈಗೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ನಕಲಿ ಮದ್ಯ ಮಾರಾಟದ ದೂರು ಬಂದ ಹಿನ್ನೆಲೆ ಮೇ 12 ರಂದು ಸಂಜೆ ಅಬಕಾರಿ ಜಂಟಿ ಆಯುಕ್ತರು ಕಲ್ಬುರ್ಗಿ ಇವರ ನಿರ್ದೇಶನದ ಮೇರೆಗೆ ಅಬಕಾರಿ ಆಯುಕ್ತರಾದ ಮೋತಿಲಾಲ್ ಹಾಗೂ ಶಹಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಶ್ರೀರಾಮ ರಾಠೋಡ ಮತ್ತು ಕಲ್ಬುರ್ಗಿ ಜಂಟಿ ಆಯುಕ್ತರ ಕಚೇರಿ (ಜಾರಿ ಮತ್ತು ತನಿಖೆ) ನಿರೀಕ್ಷಕರಾದ ಭಾರತಿ, ಅವರ ಮಾರ್ಗದರ್ಶನದಲ್ಲಿ ಯಾದಗಿರಿ ಅಬಕಾರಿ ಆಯುಕ್ತರ ಕಚೇರಿ ನಿರೀಕ್ಷಕ ಕೇದಾರನಾಥ ಪಾಟೀಲ್, ಶಹಾಪುರ ಅಬಕಾರಿ ನಿರೀಕ್ಷಕ ಧನರಾಜ, ಉಪ ನಿರೀಕ್ಷ ಸುರೇಶಕುಮಾರ ಮಳೆಕರ್ ಹಾಗೂ ಸಿಬ್ಬಂದಿ ದಾಳಿ ನಡೆಸುವ ಮೂಲಕ ಅಕ್ರಮವಾಗಿ ನಕಲಿ ಮದ್ಯ ಮಾರಾಟ ಮಾಡುತ್ತಿರುವದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next