Advertisement

ನಟ ದರ್ಶನ್‌ ಪತ್ನಿ ಹೆಸರಲ್ಲಿ ನಕಲಿ ಖಾತೆ: ಅಶ್ಲೀಲ ಪದ; ಕೇಸ್‌ ದಾಖಲು

02:04 PM Aug 30, 2018 | Team Udayavani |

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ  ಕಿಡಿಗೇಡಿಯೊಬ್ಬ ನಕಲಿ  ಫೇಸ್​ಬುಕ್​ ಖಾತೆ ತೆರೆದು ಅಶ್ಲೀಲ ಪದಗಳನ್ನು ಬಳಸಿ ಘನತೆಗೆ ಕುಂದು ತಂದಿದ್ದು , ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಸೈಬರ್‌ ಕ್ರೈಂ ಠಾಣೆಗೆ ಖುದ್ದು ವಿಜಯಲಕ್ಷ್ಮೀ ಅವರೇ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354(ಆ),354a(1)(iv) ,(505)(507)(420)ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ವಿಜಯಲಕ್ಷ್ಮೀ ಅವರ ಹೆಸರಿನೊಂದಿಗೆ ಅಶ್ಲೀಲ ಪದವನ್ನು ಬಳಕೆ ಮಾಡಿದ್ದು ಮೈ ಲೈಫ್ ಎಂದು ಟ್ಯಾಗ್‌ ಮಾಡಿ ವಿಕೃತಿ ಮೆರೆದಿದ್ದಾನೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಾಗಿ ಶೋಧ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next