Advertisement

ನಿಷ್ಠೆ-ಪ್ರಾಮಾಣಿಕತೆ ಗೌರವದ ಸಂಕೇತ: ಡಾ|ವೀರೇಂದ್ರ ಹೆಗ್ಗಡೆ

03:52 PM Jun 09, 2017 | Team Udayavani |

ಧಾರವಾಡ: ಚಾರಿತ್ರವಂತರಿಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಿಗೆ ಸಮಾಜದಲ್ಲಿ ಸಹಜವಾಗಿ ಗೌರವ, ಸನ್ಮಾನಗಳು ಸಿಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು. 

Advertisement

ಇಲ್ಲಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಸೇವೆ ಸಲ್ಲಿಸಿ 90ನೇ ಸಂವತ್ಸರ ಪೂರೈಸುತ್ತಿರುವ ಎ.ಪಿ  ಕಟ್ಟಿ ಅವರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಸಂಸ್ಥೆಯ ಯಶಸ್ವಿಗೆ ಬದ್ಧರಾಗಿ ದುಡಿದ ಕೆಲವೇ ವ್ಯಕ್ತಿಗಳಲ್ಲಿ ಕಟ್ಟಿ ಅವರು ಕೂಡಾ ಒಬ್ಬರಾಗಿದ್ದಾರೆ ಎಂದರು.

ಜನತಾ  ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ| ನ. ವಜ್ರಕುಮಾರ ಅವರು, ಎ.ಪಿ ಕಟ್ಟಿಯವರ ಒಡನಾಟ, ಅನುಭವ ಹಾಗೂ ಅವರು ನೀಡಿದ ಸಹಕಾರ ಸ್ಮರಿಸಿಕೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಪಿ ಕಟ್ಟಿ, ಸಂಸ್ಥೆಯ ಪ್ರಾರಂಭದಲ್ಲಿ ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದು, ಡಾ| ವೀರೇಂದ್ರ ಹೆಗ್ಗಡೆಯವರು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಶುಭ ದಿನಗಳು ಪ್ರಾರಂಭವಾದವು.

ಅವತ್ತಿಂದ ಇವತ್ತಿನ ವರೆಗೆ ಸಂಸ್ಥೆ ಉನ್ನತ ಸ್ಥಾನಕ್ಕೆ ಏರುತ್ತಾ ಹೊರಟಿದೆ ಎಂದರು. ಶ್ರೀಕಾಂತ ಕೆಮೂ¤ರ, ಹಾಸಲಕರ್‌, ಸೂರಜ್‌ ಜೈನ್‌, ಮಹಾವೀರ ಉಪಾದ್ಯೆ ಹಾಗೂ ಜೆ.ಎಸ್‌.ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ಮುಖ್ಯಸ್ಥರು ಇದ್ದರು. ಜ್ಯೋತಿ ಹಳ್ಳದ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ನಿರೂಪಿಸಿದರು. ಡಾ| ಅಜಿತ ಪ್ರಸಾದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next