Advertisement
ಜಾತ್ರೆ, ಹಬ್ಬ,ಹರಿದಿನಗಳು ಅನಾದಿಕಾಲದಿಂದ ನಮ್ಮ ಸಂಪ್ರದಾಯಗಳಾಗಿವೆ. ಹುಟ್ಟು ಆಕಸ್ಮಿಕ-ಸಾವು ನಿಶ್ಚಿತ. ಈ ಹುಟ್ಟು-ಸಾವಿನ ಮಧ್ಯೆ ಬದುಕು ಸಾರ್ಥಕವಾಗಬೇಕು. ಅದಕ್ಕಾಗಿ ನಮ್ಮ ಪೂರ್ವಿಕರು ಅನಾದಿ ಕಾಲದಿಂದಲೂ ಜಾತ್ರೆ, ಹಬ್ಬ-ಹರಿದಿನಗಳನ್ನು ಮಾಡುತ್ತಾ ಬಂದಿದ್ದಾರೆ, ನಾವೂ ಕೂಡ ಅದನ್ನು ಮುಂದುವರಿಸುತ್ತಾ ಬಂದಿದ್ದೇವೆ. ಮನುಷ್ಯನ ಬದುಕಿಗೆ ಸಂಬಂಧಿಸಿದ ಜಾತ್ರೆಗಳು ಭಾವೈಕ್ಯತೆಯ ಪ್ರತಿರೂಪಗಳು ಎಂದರು.
Related Articles
Advertisement
ಸುತ್ತೂರು ಜಾತ್ರೆಗೆ ಸೀಮಿತವಾಗಿಲ್ಲ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಬದುಕಿನಲ್ಲಿ ಅಳವಡಿಸಿಕೊಳ್ಳು ಸಾಕಷ್ಟು ವಿಷಯಗಳು ಇಲ್ಲಿವೆ ಎಂದರು.
ಜಾತ್ರೆ ಅರ್ಥಪೂರ್ಣ: ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಕೆಲ ಜಾತ್ರೆಗಳಲ್ಲಿ ಏನೂ ಅರ್ಥ ಇರಲ್ಲ. ಕೇವಲ ಮನರಂಜನೆ, ವ್ಯಸನಗಳಿಗೆ ಸೀಮಿತವಾಗಿರುತ್ತವೆ. ಆದರೆ, ಸುತ್ತೂರು ಜಾತ್ರೆ ಅರ್ಥಪೂರ್ಣವಾಗಿ ನಡೆದಿದ್ದು, ಜಾತ್ರೆ ನೋಡಲು ಎರಡು ಕಣ್ಣು ಸಾಲದು ಎಂದು ಬಣ್ಣಿಸಿದರು.
ಬದುಕು ರೂಪಿಸುವ ಜೀವನಯಾತ್ರೆ: ಮುರುಘರಾಜೇಂದ್ರ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಇದು ಬರೀ ಜಾತ್ರೆಯಲ್ಲ. ಬದುಕು ರೂಪಿಸುವ ಜೀವನಯಾತ್ರೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸುತ್ತೂರು ಮಠ ಮಾದರಿ ಕಾರ್ಯಕ್ರಮಗಳನ್ನು ಮಾಡಿದೆ ಎಂದರು. ಸಚಿವರಾದ ಶರಣಪ್ರಕಾಶ ಪಾಟೀಲ್, ತನ್ವೀರ್ ಸೇಠ್ ಮಾತನಾಡಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ನನಗೆ ವೈಯಕ್ತಿಕ ಲಾಭ ಆಗುತ್ತೆ. ಜನರ ಆಶೀರ್ವಾದದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ನಿಮ್ಮ ಆಶೀರ್ವಾದ ಇಲ್ಲವಾದರೆ ಅಧಿಕಾರದ ಕುರ್ಚಿಯಲ್ಲಿ ಕೂರಲಾಗಲ್ಲ. ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಜನರ ನಿರೀಕ್ಷೆಗೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ.-ಸಿದ್ದರಾಮಯ್ಯ, ಮುಖ್ಯಮಂತ್ರಿ.