Advertisement

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

06:21 PM Oct 22, 2021 | Team Udayavani |

ರಾಮನಗರ: ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಮಾಗಡಿ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ಅಧ್ಯಕ್ಷರು ಸಂಘಟನೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಹೀಗಾಗಿ ನೊಂದ ಕಾರ್ಯಕರ್ತರೆಲ್ಲ ಸೇರಿ ನೂತನ ಜಿಲ್ಲಾಧ್ಯಕ್ಷರು ಹಾಗೂ ಮಾಗಡಿ ಕ್ಷೇತ್ರದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಬಿಜೆಪಿ ಬಿಡದಿ ಹೋಬಳಿ ಘಟಕ ಮಾಜಿ ಪ್ರಧಾನ ಕಾರ್ಯದರ್ಶಿ ಶರತ್‌ಗೌಡ ಹೇಳಿದರು.

Advertisement

ಸಂಘಟನೆಯಲ್ಲಿ ವೈಫ‌ಲ್ಯ: ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷ ಸಂಘಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮಾಗಡಿ ಕ್ಷೇತ್ರ ಅಧ್ಯಕ್ಷ ಬಿ.ಎಂ.ಧ ನಂಜಯ ಹಾಗೂ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜ್‌ ವಿಫ‌ಲರಾಗಿದ್ದಾರೆ. ಹೀಗಾಗಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡ ಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆಗೆ ಒತ್ತಾಯ: ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ವಿಚಾರದಲ್ಲಿ ಈ ಮೂವರು ನಿರ್ಲಕ್ಷವಹಿಸಿದ್ದಾರೆ. ಇವರಿಂದಾಗಿ ಪಕ್ಷದ ಭವಿಷ್ಯ ಕ್ಷೀಣಿಸುತ್ತಿದೆ. ಇವರೆ ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀ ನಾಮೆ ನೀಡಬೇಕು. ಇಲ್ಲವಾದಲ್ಲಿ ನೊಂದ ಕಾರ್ಯಕರ್ತರೆಲ್ಲ ಸದ್ಯದಲ್ಲೇ ಸಭೆ ನಡೆಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಲೆಟರ್‌ ಹೆಡ್‌ ದುರ್ಬಳಕೆ: ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್‌ ಮತ್ತು ಮಾಗಡಿ ಕ್ಷೇತ್ರದ ಅಧ್ಯಕ್ಷ ಧನಂಜಯ ಅವರ ವಿರುದ್ಧ ಆರೋಪಗಳ ಸುರಿಮಳೆಗೈದ ಅವರು ಪಕ್ಷ ನೀಡಿರುವ ಲೆಟರ್‌ ಹೆಡ್‌ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ, ಲೆಟರ್‌ ಹೆಡ್‌ ಗೆ ಇವರು ಬೆಲೆ ನಿಗಧಿ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ: ಜಿಲ್ಲೆಯಲ್ಲಿನ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಪಕ್ಷದ ಕಾರ್ಯಕರ್ತರ ನೇಮಕ ವಿಚಾರದಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವಿದೆ. ಸದ್ಯ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಿರ್ದೇಶಕರ ಸ್ಥಾನಗಳನ್ನು ಖಾಲಿ ಮಾಡಿಸಿ ಮಾರಾಟಕ್ಕೆ ಇರಿಸಿದ್ದಾರೆ. ಹೆಚ್ಚಿನ ಹಣ ನೀಡುವವರಿಗೆ ಆ ಸ್ಥಾನಗಳು ಮಾರಾಟ ಮಾಡಲಾಗುತ್ತಿದೆ. ಇದೆಲ್ಲವನ್ನು ವರಿಷ್ಠರ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧನಂಜಯ್ಯ ವಿರುದ್ಧ ಆರೋಪ: ವಿಧಾ ನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯ ರ್ಥಿಗಳನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ. ಆದರೆ, ಮಾಗಡಿ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಧನಂಜಯ್ಯರವರು ಈಗಾಗಲೇ ಆರು ಮಂದಿ ಆಕಾಂಕ್ಷಿತರನ್ನು ಗುರುತಿಸಿ ಅವರಿಂದಲೂ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು. ಟೆಕೆಟ್‌ ಕೊಡಿಸಲು ಲಾಬಿ: ಧನಂಜಯರವರು ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಮಾಗಡಿ ಯೋಜನಾ ಪ್ರಾಧಿ ಕಾರ ಅಧ್ಯಕ್ಷ ರಂಗಧಾಮಯ್ಯ, ಮುಖಂಡ ಜೇಡರಹಳ್ಳಿ ಕೃಷ್ಣಮೂರ್ತಿ, ಜೆಡಿಎಸ್‌ ಮುಖಂಡ ಬಾಗೇಗೌಡ ಸೇರಿ ದಂತೆ ಆರು ಮಂದಿಗೆ ಮಾಗಡಿ ಕ್ಷೇತ್ರ ದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ದೂರಿದರು.

Advertisement

ನಾಯಕತ್ವದ ವೈಫ‌ಲ್ಯ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಇದ್ದರೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲು ಈ ನಾಯಕರ ವೈಫ‌ಲ್ಯವೇ ಕಾರಣ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ಟೀಕೆಗಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗದು ಅಸಮರ್ಥ ನಾಯಕರು ಎಂದು ಶರತ್‌ಗೌಡ ಕಿಡಿಕಾರಿದರು.

ಇದನ್ನೂ ಓದಿ:- ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

ಕಾರ್ಯಕರ್ತರ ಕಡೆಗಣನೆ: ಪಕ್ಷದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿರುವ ಅಧ್ಯಕ್ಷರು, ತಮ್ಮನ್ನು ಒಳಗೊಂಡಿರುವ ನಾಲ್ಕೈದು ಮಂದಿಯ ಗುಂಪೇ ಬಿಜೆಪಿ ಪಕ್ಷವೆಂದು ಭಾವಿಸಿ ದಂತಿದೆ, ಇವರಿಗೆ 10 ಮಂದಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಶಕ್ತಿಯೂ ಇಲ್ಲ ಎಂದು ಲೇವಡಿಯಾಡಿದರು. ಬಿಜೆಪಿ ಒಬಿಸಿ ಮಾಜಿ ಉಪಾಧ್ಯಕ್ಷ ಶಿವಣ್ಣ, ಬಿಜೆಪಿ ಬಿಡದಿ ಹೋಬಳಿ ಮಾಜಿ ಕಾರ್ಯದರ್ಶಿ ನಂಜೇಶ್‌ ಗೌಡ, ಮುಖಂಡ ಕೃಷ್ಣೇಗೌಡ ಇದ್ದರು. ಸರ್ವಾಧಿಕಾರಿ ಧೋರಣೆ ಬಿಡದಿ ಹೋಬಳಿ ಭಾಗದಲ್ಲಿ ತಾವೆಲ್ಲ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಯಲ್ಲಿ ತೊಡಗಿದ್ದೇವೆ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಹಾಗೂ ಮಾಗಡಿ ಕ್ಷೇತ್ರ ಅಧ್ಯಕ್ಷ ಧನಂ ಜಯರವರ ಕಾರ್ಯವೈಖರಿಯಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಯಿತು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮನ್ನು ತಮ್ಮ ಸ್ಥಾನಗಳಿಂದ ಹೊರಕ್ಕೆ ಹಾಕಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next