ಮುಂಬಯಿ: ತನ್ನ ಅಭಿನಯದಿಂದಲೇ ಭಾರತೀಯ ಸಿನಿಮಾರಂಗದಲ್ಲಿ ಮೋಡಿ ಮಾಡಿರುವ ಮಾಲಿವುಡ್ (Mollywood) ಸ್ಟಾರ್ ಫಾಹದ್ ಫಾಸಿಲ್ (Fahadh Faasil) ಬಾಲಿವುಡ್‌ನ ರಂಗೀನ್ ಲೋಕಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ಮಾಲಿವುಡ್‌ನ ಜನಪ್ರಿಯ ನಟ ಫಾಹದ್ ಫಾಸಿಲ್ ಅವರ ಅಭಿನಯಕ್ಕೆ ಎರಡು ಮಾತಿಲ್ಲ. ಯಾವ ಪಾತ್ರ ಕೊಟ್ಟರು ಅದನ್ನು ನೀರು ಕುಡಿದ್ದಷ್ಟೇ ಸಲೀಸಾಗಿ ನಿಭಾಯಿಸುತ್ತಾರೆ. ಸೌತ್ ಫಿಲ್ಮಿ ದುನಿಯಾದಲ್ಲಿ ಮಿಂಚಿರುವ ಫಾಪಾ ಬಾಲಿವುಡ್ ಎಂಟ್ರಿಗೆ ಸಜ್ಜಾಗಿದ್ದಾರೆ.
ಕೆಲ ಸಮಯದ ಹಿಂದಷ್ಟೇ ಬಾಲಿವುಡ್‌ನ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ (Imtiaz Ali) ಅವರ ಸಿನಿಮಾದಲ್ಲಿ ಫಾಹದ್ ಫಾಸಿಲ್ ನಟಿಸಲಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್ ಗರಂ
ಹಲವು ತಿಂಗಳುಗಳ ಸಿನಿಮಾದ ಬಗ್ಗೆ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಇದೀಗ ಈ ಮಾತುಕತೆ ಫೈನಲ್ ಆಗಿದೆ. ಆ ಮೂಲಕ ಫಾಹದ್ ಬಾಲಿವುಡ್‌ಗೆ ಎಂಟ್ರಿ ಆಗುವುದು ಅಧಿಕೃತವಾಗಿದೆ ಎಂದು ವರದಿಯಾಗಿದೆ.
ಬಾಲಿವುಡ್‌ನಲ್ಲಿ ‘ಜಬ್ ವಿ ಮೆಟ್, ʼರಾಕ್ ಸ್ಟಾರ್ʼ, ʼಲೈಲಾ ಮಜ್ನುʼ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಇಮ್ತಿಯಾಜ್ ಅಲಿ ಫಾಹದ್ ಫಾಸಿಲ್ ಜತೆ ಮೊದಲ ಬಾರಿ ಕೆಲಸ ಮಾಡಲಿದ್ದಾರೆ.
ಮೂಲಗಳ ಪ್ರಕಾರ ಸಿನಿಮಾಕ್ಕೆ ನಾಯಕಿಯಾಗಿ ʼಅನಿಮಲ್ʼ ನಟಿ ತೃಪ್ತಿ ದಿಮ್ರಿ (Triptii Dimri) ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಚಿತ್ರದ ಜಾನರ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೊಂದು ಲವ್ ಸ್ಟೋರಿ ಸಿನಿಮಾವೆಂದು ಹೇಳಲಾಗುತ್ತಿದೆ.
ಇಮ್ತಿಯಾಜ್ ಅಲಿ ಅವರು 2025ರ ಆರಂಭದಲ್ಲಿ ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ. ತಮ್ಮ ಬ್ಯಾನರ್ ವಿಂಡೋ ಸೀಟ್ ಫಿಲ್ಮ್ಸ್ ಅಡಿಯಲ್ಲಿ ಚಿತ್ರವನ್ನು ಇಮ್ತಿಯಾಜ್ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಯಾಗಿದೆ.
2025ರ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.