Advertisement

ರೋರಿಂಗ್‌ ಸ್ಟಾರ್‌ ʼಬಘೀರʼಕ್ಕಾಗಿ ಸೂಪರ್‌ ಕಾಪ್ ಆದ ಫಹಾದ್‌ ಫಾಸಿಲ್

01:13 PM Jan 25, 2023 | Team Udayavani |

ಬೆಂಗಳೂರು: ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ ʼಬಘೀರʼ ಸಿನಿಮಾ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಚಿತ್ರೀಕರಣದ ಸಾಹಸ ದೃಶ್ಯದ ಶೂಟ್ ವೇಳೆ ಕಾಲಿಗೆ ಏಟು ಮಾಡಿಕೊಂಡಿರುವ ಶ್ರೀಮುರಳಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ.

Advertisement

ಈ ನಡುವೆ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಬಘೀರʼ ಚಿತ್ರ ತಂಡದಿಂದ ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ. ಈಗಾಗಲೇ ʼಲೂಸಿಯಾʼ ಪವನ್‌ ನಿರ್ದೇಶನದ ʼಧೂಮಂʼ ಚಿತ್ರದಲ್ಲಿ ನಟಿಸಿರುವ ಬಹುಭಾಷಾ ನಟ, ಮಾಲಿವುಡ್‌ ನ ಖ್ಯಾತ ನಟ ಫಹಾದ್‌ ಫಾಸಿಲ್‌ ಇದೀಗ ʼಬಘೀರʼನ ಅಖಾಡಕ್ಕೆ ಕಾಲಿಡಲಿದ್ದಾರೆ.

ಇದನ್ನೂ ಓದಿ: ʼಒಂದು ಸರಳ ಪ್ರೇಮಕಥೆʼಗೆ ಕಾಲಿವುಡ್‌ ಬ್ಯೂಟಿ ಸ್ವತಿಷ್ಠ ಕೃಷ್ಣನ್ ನಾಯಕಿ

ಹೌದು ಈ ಸುದ್ದಿ ಅಧಿಕೃತವಾಗಿದ್ದು, ʼಬಘೀರʼ ಸಿನಿಮಾದಲ್ಲಿ ಫಹಾದ್‌ ಸಿಬಿಐ ಅಧಿಕಾರಿಯ ಪಾತ್ರದಲ್ಲಿ   ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣದಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ʼಲಕ್ಕಿʼ ಸಿನಿಮಾದ ಬಳಿಕ ಡಾ.ಸೂರಿ ಬಹು ಸಮಯದ ಬಳಿಕ ಮತ್ತೆ ಆ್ಯಕ್ಷನ್‌ ಹೇಳುತ್ತಿರುವ ಸಿನಿಮಾ ʼಬಘೀರʼ. ಸಿನಿಮಾದ ಕಥೆಯನ್ನು ಪ್ರಶಾಂತ್‌ ನೀಲ್‌ ಅವರು ಬರೆದಿದ್ದಾರೆ.

Advertisement

ಇತ್ತೀಚೆಗೆ ನಟ ಫಹಾದ್‌ ಫಾಸಿಲ್‌ ʼವಿಕ್ರಮ್‌ʼ ಸಿನಿಮಾದಲ್ಲಿನ ನಟನೆಯಿಂದ ಗಮನ ಸೆಳೆದಿದ್ದರು. ಹೊಂಬಾಳೆ ಬ್ಯಾನರ್‌ ʼಧೂಮಂʼ ಬಳಿಕ ಫಹಾದ್‌ ಮತ್ತೊಮ್ಮೆ ಅದೇ ಬ್ಯಾನರ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next