ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಗುರುವಾರದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ನಾಲ್ಕು ವರ್ಷಗಳ ಬಳಿಕ ಐಪಿಎಲ್ ಶತಕ ಹೊಡೆದ ವಿರಾಟ್ 63 ಎಸೆತಗಳಲ್ಲಿ 100 ರನ್ ಬಾರಿಸಿದರು.
ಇದು ಐಪಿಎಲ್ ನಲ್ಲಿ ವಿರಾಟ್ ಬಾರಿಸಿದ ಆರನೇ ಶತಕ. ಐಪಿಎಲ್ ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಜಂಟಿಯಾಗಿ ಮೊದಲ ಸ್ಥಾನಕ್ಕೇರಿದರು. ಕ್ರಿಸ್ ಗೇಲ್ ಕೂಡಾ ಆರು ಶತಕ ಬಾರಿಸಿದ್ದಾರೆ.
ನಾಯಕ ಫಾಫ್ ಕೂಡಾ ಉತ್ತಮ ಸಾಥ್ ನೀಡಿದರು. 47 ಎಸೆತ ಎದುರಿಸಿದ ಫಾಫ್ 71 ರನ್ ಗಳಿಸಿದರು. ಇವರಿಬ್ಬರು ಮೊದಲು ವಿಕೆಟ್ ಗೆ 172 ರನ್ ಜೊತೆಯಾಟವಾಡಿದರು.
ಇದನ್ನೂ ಓದಿ:Kaniyoor Primary Health Center ; 12 ಹುದ್ದೆಗಳಲ್ಲಿ ವೈದ್ಯರ ಸಹಿತ 10 ಹುದ್ದೆ ಖಾಲಿ
Related Articles
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಮಹತ್ವದ ವಿಚಾರವನ್ನು ಬಹಿರಂಗ ಪಡಿಸಿದರು. ಹೈದರಾಬಾದ್ ಇನ್ನಿಂಗ್ಸ್ ಬಳಿಕ ವಿರಾಟ್ ಮತ್ತು ಫಾಫ್ ಬ್ಯಾಟಿಂಗ್ ಗೆ ಸಿದ್ದವಾಗುತ್ತಿದ್ದಾಗ ‘ನಮ್ಮ ಅಗ್ರ ಮೂವರಲ್ಲಿ ಯಾರಾದರೂ ಒಬ್ಬರು ಇವತ್ತು ಶತಕ ಗಳಿಸುತ್ತಾರೆ’ ಎಂದು ಫಾಫ್ ಹೇಳಿದ್ದರು. ಆಗ ವಿರಾಟ್, ‘ಸದ್ಯದ ಫಾರ್ಮ್ ಗಮನಿಸಿದರೆ ನೀವೇ ಶತಕ ಗಳಿಸಬಹುದು’ ಎಂದು ಫಾಫ್ ಗೆ ಹೇಳಿದರು. ಆಗ ಫಾಫ್, ‘ ಇಲ್ಲ, ನನಗೇನೋ ನೀವೇ ಶತಕ ಗಳಿಸುತ್ತೀರಿ ಎಂದನಿಸುತ್ತಿದೆ’ ಎಂದರಂತೆ. ಈ ಮಾತುಗಳನ್ನು ಫಾಫ್ ಮತ್ತು ವಿರಾಟ್ ಹೇಳಿದರು.