Advertisement

Fadnavis; ಸಂಪುಟ ವಿಸ್ತರಣೆ ನಾಳೆ?: ಬಿಜೆಪಿಗೆ ಗೃಹ ಖಾತೆ ಸಾಧ್ಯತೆ

12:39 AM Dec 13, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಸರಕಾರದ ಖಾತೆ ಹಂಚಿಕೆ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳುವ ಸಾಧ್ಯ ತೆಗಳಿದೆ. ಡಿ.14ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಡಿಸಿಎಂ ಅಜಿತ್‌ ಪವಾರ್‌ ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿದ್ದಾರೆ.

Advertisement

ಬಳಿಕ ಮಾತ­ನಾಡಿದ ಅವರು ಖಾತೆ ಹಂಚಿಕೆ ಬಗ್ಗೆ ಬಿಜೆಪಿ ವರಿ­ಷ್ಠರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಡಿಸಿಎಂ ಏಕನಾಥ ಶಿಂಧೆ ಬೇಡಿಕೆ ಇರಿಸಿದ್ದ ಗೃಹ ಖಾತೆ ಬಿಜೆಪಿಯಲ್ಲೇ ಉಳಿಯುವ ಸಾಧ್ಯತೆ ಇದೆ. ಖಾತೆ ಹಂಚಿಕೆ ಕುರಿತು ಹೊಸ ಸೂತ್ರ ಅಳವಡಿಸಿಕೊ­ಳ್ಳಲು ಮೈತ್ರಿ ನಾಯಕರು ಚಿಂತಿಸಿದ್ದು, 20 ಖಾತೆ ಬಿಜೆಪಿಗೆ ಶಿವಸೇನೆ ಮತ್ತು ಎನ್‌ಸಿಪಿಗೆ ತಲಾ 10 ಸಚಿವ ಸ್ಥಾನ ದೊರಕಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next