Advertisement

ತರಕಾರಿ ಮಾರುಕಟ್ಟೆಗೆ ಸೌಕರ್ಯ ಮರೀಚಿಕೆ

04:58 PM Jul 22, 2022 | Team Udayavani |

ಕೊಟ್ಟೂರು: ಪಟ್ಟಣದ ತೇರು ಬಯಲಿನಲ್ಲಿ ತರಕಾರಿ ಸಂತೆ ನಡೆಯುತ್ತಿದೆ. ಇಲ್ಲಿಗೆ ತಾಲೂಕಿನ ಸುತ್ತಮುತ್ತಲಿನ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಬರುತ್ತಾರೆ. ಆದರೆ ಸಮರ್ಪಕ ಸೌಕರ್ಯ ಇಲ್ಲದೆ ರೈತರು ಹಾಗೂ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪಟ್ಟಣದ ತೇರು ಬಯಲು ಪ್ರದೇಶದಲ್ಲಿರುವ ತರಕಾರಿ ಮಾರುಕಟ್ಟೆ ಮಳೆ ಬಂದರೆ ಸಾಕು ಈ ಪ್ರದೇಶವೆಲ್ಲ ಕೆಸರುಗದ್ದೆಯಂತೆ ಆಗುತ್ತದೆ. ರೈತರು ತಾವು ತಂದ ಬೆಳೆಯು ಸರಿಯಾದ ಬೆಲೆ ಇಲ್ಲದೆ ಒಂದು ಕಡೆ ಮತ್ತು ಕೆಸರು ಮಧ್ಯದಲ್ಲೇ ನಿಂತು ತಮ್ಮ ತರಕಾರಿ ಮಾರುವ ಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರಸ್ಥರು ಮತ್ತು ರೈತರು ಬೀದಿ ವ್ಯಾಪಾರಿಗಳು ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಪಟ್ಟಣ ಪಂಚಾಯತಿ ಒದಗಿಸಬೇಕಾದ ಕನಿಷ್ಟ ಮೂಲ ಸೌಕರ್ಯ ಸಹ ನೀಡುತ್ತಿಲ್ಲ. ಹೀಗಾದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ತರಕಾರಿ ಮಾರುಕಟ್ಟೆಗೆ ಸ್ಥಳ ನಿಯೋಜನೆ ಮಾಡಿಕೊಡುತ್ತೇವೆ ಎಂದು ಸ್ಥಳೀಯ ಶಾಸಕರು ಭರವಸೆ ನೀಡುತ್ತಾರೆ. ಇಲ್ಲಿತನಕ ಸೂಕ್ತ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಟ್ಟಿಲ್ಲ. ನಾವು ಪ್ರತಿದಿನ ನಿತ್ಯ ಕೆಸರು ಗದ್ದೆಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ತರಕಾರಿ ಮಾರಾಟಗಾರರು ಹಾಗೂ ರೈತರು.

ಖಾಸಗಿ ಬಸ್‌ ನಿಲ್ದಾಣ ಹಾಗೂ ಸಂತೆ ಮಾರುಕಟ್ಟೆ ಸೇರಿ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಮಳೆ ಬಂದರೆ ಈ ಪ್ರದೇಶವು ಕೆಸರು ಗದ್ದೆಯಂತೆ ಆಗುತ್ತದೆ. ತಮ್ಮ ತಮ್ಮ ಊರುಗಳಿಂದ ಬರುವ ಪ್ರಯಾಣಿಕರು ಕೆಸರಿನಲ್ಲೇ ಇಳಿದು ಕೆಸರನಲ್ಲೇ ಬಸ್‌ ಹತ್ತಬೇಕು. ಪಟ್ಟಣದ ಜನತೆಯು ಕೆಸರುಗದ್ದೆ ನೋಡಿ ತರಕಾರಿ ಕೊಂಡೊಯ್ಯಲು ಸಹ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಕೊಟ್ಟೂರು ತಾಲೂಕು ಆದ್ರೂ ತರಕಾರಿ ಮಾರುಕಟ್ಟೆಗೆ ಸೂಕ್ತ ಜಾಗವಿಲ್ಲ. ಪಟ್ಟಣಕ್ಕೆ ವಿವಿಧ ಹಳ್ಳಿಗಳ ರೈತರು ತಮ್ಮ ತಮ್ಮ ವಾಹನದಲ್ಲಿ ತರಕಾರಿ ಮಾರಾಟ ಮಾಡಲು ಬರುತ್ತಾರೆ. ಆದರೆ ಸಣ್ಣ ಮಳೆ ಬಂದರೆ ಸಾಕು ಕೆಸರಗದ್ದೆಯಂತೆಯಾಗಿ ಈ ಸಂತೆ ಮೈದಾನ ನೀರು ಕೆಸರು ಗದ್ದೆಯಲ್ಲಿ ಮುಳುಗಿರುತ್ತದೆ. ನಾವು ತಂದಿರುವಂತಹ ತರಕಾರಿಗಳನ್ನು ಕೊಂಡೊಯ್ಯಲು ಗ್ರಾಹಕರು ಸಹ ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಸೂಕ್ತ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ತರಕಾರಿ ಬೆಳೆಗಾರ.‌

Advertisement

ಸೂಕ್ತ ತರಕಾರಿ ಮಾರುಕಟ್ಟೆ ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗನೆ ತಾಲೂಕಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿಕೊಡುತ್ತೇನೆ. –ಎಸ್‌.ಭೀಮನಾಯ್ಕ, ಶಾಸಕರು

-ರವಿಕುಮಾರ್‌ ಎಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next