Advertisement

ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ

06:32 AM Jun 14, 2020 | Lakshmi GovindaRaj |

ಶ್ರೀನಿವಾಸಪುರ: ವಿಶ್ವ ಗಮನಿಸುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ 2ನೇ ಅವಧಿಯಲ್ಲೂ ಪ್ರಧಾನಿ ಮೋದಿ ಅಭೂತಪೂರ್ವ ಗೆಲುವು ಸಾಧಿಸಿ, ಹಲವು ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ  ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್‌.ವೇಣುಗೋಪಾಲ್‌ ತಿಳಿಸಿದರು.

Advertisement

ತಾಲೂಕಿನ ಎನುಪಮರೇಪಲ್ಲಿ ಪಂಚಮುಖೀ ಅಂಜನೇಯಸ್ವಾಮಿ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿಯ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಅವರು ಜಾರಿ ಮಾಡಿದ ಯೋಜನೆಗಳ ಮಾಹಿತಿ  ಯುಳ್ಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಸರ್ವಾಂಗೀಣ ಅಭಿವೃದಿಟಛಿಗೆ ಪ್ರಧಾನಿ ಮೋದಿ ಕೊಟ್ಟ  ಯೋಜನೆಗಳು ಸಾಕಷ್ಟಿವೆ.

ತ್ರಿವಳಿ ತಲಾಕ್‌ ಅಸಂವಿಧಾನವೆಂಬ ಕಾನೂನು ಜಾರಿ, ಜುಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿ ದೇಶದಲ್ಲಿ ಎಲ್ಲಾ ರಾಜ್ಯಗಳು ಒಂದೇ ಎಂಬ ಭಾವನೆ ಸಾರಿದರು ಎಂದು  ಹೇಳಿದರು. ಅಲ್ಲದೇ, ಅಫ‌ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ರಾಗಿ ದೌರ್ಜನ್ಯಕ್ಕೊಳ ಗಾಗಿ ಹಲವು ವರ್ಷಗಳಿಂದ ಭಾರತದಲ್ಲಿ ಜೀವನ ನಡೆಸುತ್ತಿದ್ದವರಿಗೆ ಪೌರತ್ವ ನೀಡುವ  ವಿಧೇಯಕ ಅಂಗೀಕಾರ, 2019ರಲ್ಲಿ ರಾಮಜನ್ಮ ಭೂಮಿ  ತೀರ್ಥ ಕ್ಷೇತ್ರ ಟ್ರಸ್ಟ್‌ ಸ್ಥಾಪನೆ,

ಆಯುಷ್ಮಾನ್‌, ಅಟಲ್‌ ಪೆನ್ಶನ್‌ ಯೋಜನೆ, ಕಿಸಾನ್‌ ಸಮ್ಮಾನ್‌ ನಿಧಿ ಇತ್ಯಾದಿ ಯೋಜನೆ ಜಾರಿ ಮಾಡಿದರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ  ಎಸ್‌.ಬಿ.ಮುನಿವೆಂಕಟಪ್ಪ, ಅಶೋಕ ರೆಡ್ಡಿ, ಎ.ಎನ್‌.ಜಯರಾಮರೆಡ್ಡಿ, ವೆಂಕಟೇಗೌಡ, ಎಂ.ಲಕ್ಷ್ಮಣಗೌಡ, ಕೊಟ್ರಗೂಳಿ ನಾರಾಯಣಸ್ವಾಮಿ, ಎಚ್‌.ಆರ್‌.ನಾರಾಯಣಸ್ವಾಮಿ, ಶಿವಶಂಕರಗೌಡ, ಶ್ರೀನಾಥ್‌, ಅಂಕುಶಂ ನಾರಾಯಣಸ್ವಾಮಿ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next